Breaking News
Home / ರಾಜ್ಯ (page 421)

ರಾಜ್ಯ

ಅಕ್ಕಿ ಬದಲು ಆಗಸ್ಟ್ ತಿಂಗಳ ಡಿಬಿಟಿ ಹಣ ಒಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ- ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಅಕ್ಕಿ ಬದಲಾಗಿ ಆಗಸ್ಟ್ ತಿಂಗಳ ಡಿಬಿಟಿ (ನೇರ ನಗದು ವರ್ಗಾವಣೆ) ಹಣ ಒಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ ಹೋಗಲಿದೆ ಎಂದು ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.   ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಅಕ್ಕಿ ಬದಲಾಗಿ ಡಿಬಿಟಿ ಮೂಲಕ ಹಣ ಕೊಡಲಾಗುತ್ತಿದೆ. ಅಕ್ಕಿಯನ್ನು ಪ್ರತಿ ತಿಂಗಳು 10 ಅಥವಾ 11ನೇ ತಾರೀಖು ಕೊಡುತ್ತಿದ್ದೆವು. ಡಿಬಿಟಿ ತಡವಾಗ್ತಿದೆ. ಸಿಸ್ಟಮ್ …

Read More »

ಆ.18ರಂದು ಬೆಂಗಳೂರಿನಲ್ಲಿ ‘ಶೂನ್ಯ ನೆರಳು’ ಗೋಚರ

ಬೆಂಗಳೂರು: ನಗರದಲ್ಲಿ ನೆಲೆಸಿರುವ ಜನರು ಆಗಸ್ಟ್ 18ರಂದು ಮತ್ತೊಮ್ಮೆ ಶೂನ್ಯ ನೆರಳು ದಿನ ಕಣ್ತುಂಬಿಕೊಳ್ಳಲಿದ್ದಾರೆ. ಅಪರೂಪದ ಶೂನ್ಯ ನೆರಳು ದಿನಕ್ಕೆ ಬೆಂಗಳೂರಿಗರು ಈ ವರ್ಷ ಸಾಕ್ಷಿಯಾಗಿದ್ದರು. ಏಪ್ರಿಲ್ 25ರಂದು ಮಧ್ಯಾಹ್ನ 12.17ಕ್ಕೆ ಶೂನ್ಯ ನೆರಳಿನ ದಿನ ಗೋಚರವಾಗಿತ್ತು. ಪ್ರಾತಿನಿಧಿಕ ಚಿತ್ರಆ ದಿನದಂದು ಎರಡು ನಿಮಿಷಗಳ ಕಾಲ ಯಾವುದೇ ನೆರಳು ಕಂಡು ಬಂದಿರಲಿಲ್ಲ. ಸೂರ್ಯ ಸರಿಯಾಗಿ ಮನುಷ್ಯನ ನೆತ್ತಿಯ ಮೇಲೆ ಅಥವಾ ಕಿರಣಗಳು ಯಾವುದೇ ವಸ್ತುವಿನ ಮೇಲೆ ಲಂಬವಾಗಿ ಬಿದ್ದಾಗ ಅದು ಶೂನ್ಯ …

Read More »

ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್:ಬಾಂಬೆ ಮಾಡೆಲ್ ಬಂಧನ

ಬೆಂಗಳೂರು: ಟೆಲಿಗ್ರಾಂ ಮೂಲಕ ಯುವಕರನ್ನ‌ ಪರಿಚಯಿಸಿಕೊಂಡು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದ ಪುಟ್ಟೇನಹಳ್ಳಿ ಪೊಲೀಸರು, ಇದೀಗ ಪ್ರಕರಣದ ಪ್ರಮುಖ ಆರೋಪಿತೆಯನ್ನು ಸೆರೆಹಿಡಿದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಯುವಕನನ್ನ ಜೆ.ಪಿ. ನಗರದ ವಿನಾಯಕ್ ನಗರಕ್ಕೆ ಕರೆಯಿಸಿಕೊಂಡು ಹನಿಟ್ರ್ಯಾಪ್ ಮಾಡಿ ಬೆದರಿಸಿ 50 ಸಾವಿರ ರೂ. ಸುಲಿಗೆ ಮಾಡಿರುವುದಾಗಿ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳಾದ ಶರಣಪ್ರಕಾಶ್ ಬಳಿಗೇರ, ಅಬ್ದುಲ್‌ ಖಾದರ್, ಯಾಸಿನ್ ಎಂಬುವರನ್ನು …

Read More »

ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಮಹದೇವ ನಗರ ನಿವಾಸಿಗಳಿಗೆ ಇಲ್ಲ ಮೂಲ ಸೌಕರ್ಯ

ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಪೂರೈಸಿವೆ. ಆದರೆ, ನಂಜನಗೂಡು ತಾಲೂಕಿನ ಮಹದೇವ ನಗರದ ನಿವಾಸಿಗಳು ಇನ್ನೂ ಕೂಡ ಮೂಲ ಸೌಕರ್ಯಗಳಿಲ್ಲದೇ ಪರದಾಡುವಂತಾಗಿದೆ. ಹೌದು ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವ ನಗರ ಗ್ರಾಮದಲ್ಲಿ ನಿವಾಸಿಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಮಾಜಿ ಸಚಿವ ದಿ. ಬೆಂಕಿ ಮಹದೇವು ಅವರು ಅಂದು ಆಶ್ರಯ ಯೋಜನೆಯಡಿ ಗುಂಪು ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದರು. ಆದರೆ, …

Read More »

ಕಪಿಲೇಶ್ವರ ಮಂದಿರದ ಆವರಣದ ಹೊಂಡದಲ್ಲಿ ಜೋಡಿ ಶವಗಳು ಪತ್ತೆ

ಬೆಳಗಾವಿ: ಇಲ್ಲಿನ ಕಪಿಲೇಶ್ವರ ಮಂದಿರದ ಆವರಣದ ಹೊಂಡದಲ್ಲಿ ಬೆಳ್ಳಂ ಬೆಳಗ್ಗೆ ಅಪರಿಚಿತ ಜೋಡಿ ಶವಗಳು ಪತ್ತೆಯಾಗಿರುವ ಘಟನೆ ನಡೆದಿದೆ. ಘಟನೆಯಿಂದ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಒಂದು ಪುರುಷ ಶವವಾಗಿದ್ದು, ಮತ್ತೊಂದು ಮಹಿಳೆಯದ್ದಾಗಿದೆ. ಬೆಳಗ್ಗೆ ಇಲ್ಲಿ ವಾಕಿಂಗ್ ಮಾಡುತ್ತಿದ್ದ ಸ್ಥಳೀಯರು ಹೊಂಡದಲ್ಲಿ ಎರಡು ಹೆಣಗಳು ತೇಲುತ್ತಿರುವುದನ್ನು ಗಮನಿಸಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವಗಳು ಗುರುತು ಇನ್ನೂ ಪತ್ತೆಯಾಗಿಲ್ಲ. ಸಾವಿನ ಸುತ್ತ ಅನುಮಾನದ ಹುತ್ತ: ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಶವಗಳನ್ನು ಹೊಂಡದಿಂದ …

Read More »

ಮಹಾರಾಷ್ಟ್ರದ ಕೊಲ್ಲಾಪುರ ಸೇರಿ ಮೂರು ಜಿಲ್ಲೆಯಲ್ಲಿ 3.4 ತೀವ್ರತೆ ಭೂಕಂಪ

ಕೊಲ್ಲಾಪುರ (ಮಹಾರಾಷ್ಟ್ರ): ಕೊಲ್ಲಾಪುರ ಸೇರಿದಂತೆ ಸಾಂಗ್ಲಿ, ಸತಾರಾ ಜಿಲ್ಲೆಯಲ್ಲಿ ಇಂದು (ಬುಧವಾರ) ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ಸತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟಿನಿಂದ ಕೇವಲ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿದೆ. ನಾಗರಿಕರು ಭಯಭೀತರಾಗಿದ್ದಾರೆ. ಭೂಕಂಪ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.4 ದಾಖಲಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ಕೇಂದ್ರ ಬಿಂದು ನೆಲದಿಂದ 5 ಕಿಮೀ ಆಳದಲ್ಲಿ ಇದೆ. ಕೊಲ್ಹಾಪುರದಿಂದ 76 ಕಿಮೀ ದೂರದಲ್ಲಿರುವ ಚಂದೋಲಿ ಅಭಯಾರಣ್ಯ ಪ್ರದೇಶದಲ್ಲಿ …

Read More »

ರೈತರೊಂದಿಗೆ ಭತ್ತ ನಾಟಿ ಮಾಡಿದ ಐಎಎಸ್ ಅಧಿಕಾರಿ

ಗಂಗಾವತಿ (ಕೊಪ್ಪಳ) : ‘ರೈತರೊಂದಿಗೆ ಒಂದು ದಿನ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವ ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ರಾಹುಲ್​ ರತ್ನಂ ಪಾಂಡೆ ಅವರಿಂದು ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ತಾಲೂಕಿನ ಮರಳಿ ಹೋಬಳಿಯ ಕೋಟಯ್ಯ ಕ್ಯಾಂಪಿನಲ್ಲಿ ರೈತರೊಂದಿಗೆ ಭತ್ತದ ಗದ್ದೆಗಿಳಿದು, ಸಸಿಗಳನ್ನು ನಾಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಬಿಳಿ ಪಂಚೆ, ಟಿ ಶರ್ಟ್‌ ಧರಿಸಿದ್ದರು. ಬಳಿಕ ಹೊಲದಲ್ಲೇ ಕುಳಿತು ಮಧ್ಯಾಹ್ನದ ಭೋಜನ ಸವಿದರು. ಜನರೊಂದಿಗೆ ಮಧ್ಯಾಹ್ನದ ಭೋಜನ …

Read More »

ವಿಧಾನ ಪರಿಷತ್ ಸದಸ್ಯ ಸ್ಥಾನದ ನಾಮನಿರ್ದೇಶನಕ್ಕೆ ಎಂ.ಆರ್.ಸೀತಾರಾಮ್, ಸುಧಾಂ ದಾಸ್, ಉಮಾಶ್ರೀ ಹೆಸರು ಶಿಫಾರಸು ಮಾಡಲು ರಾಜ್ಯ ಸರ್ಕಾರ ತೀರ್ಮಾನ

ಬೆಂಗಳೂರು: ಪರಿಷತ್ ಸ್ಥಾನದ ನಾಮನಿರ್ದೇಶನಕ್ಕೆ ಎಂ.ಆರ್. ಸೀತಾರಾಮ್, ಸುಧಾಂ ದಾಸ್ ಹಾಗೂ ಉಮಾಶ್ರೀ ಹೆಸರನ್ನು ಶಿಫಾರಸು ಮಾಡಲು ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರ ನಾಳೆ ರಾಜ್ಯಪಾಲರಿಗೆ ಈ ಮೂವರ ಹೆಸರನ್ನು ನಾಮನಿರ್ದೇಶನಕ್ಕಾಗಿ ಶಿಫಾರಸು ಮಾಡುವ ಸಾಧ್ಯತೆ ಇದೆ. ಎಐಸಿಸಿಯಿಂದ ಮೂವರ ಹೆಸರನ್ನು ಅಂತಿಮಗೊಳಿಸಿದೆ.‌ ಈ ಮುಂಚೆ ಕೇಳಲ್ಪಟ್ಟಿದ್ದ ಮನ್ಸೂರ್ ಖಾನ್ ಹೆಸರು ಕೈ ಬಿಡಲಾಗಿದೆ. ಇದೀಗ ಮೂವರ ಹೆಸರನ್ನು ನಾಮನಿರ್ದೇಶನಕ್ಕೆ ಶಿಫಾರಸು ಮಾಡಲು ನಿರ್ಧರಿಸಿರುವುದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ ಗೋಚರಿಸಿದೆ.‌ …

Read More »

ಖರ್ಜೂರ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ಗೊತ್ತೇ?

ಖರ್ಜೂರ ರುಚಿಕರ ಒಣ ಹಣ್ಣುಗಳ ಪೈಕಿ ಒಂದು. ತಾಜಾ ಹಣ್ಣುಗಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಪ್ರೊಟೀನ್​​, ಕಾರ್ಬೋಹೈಡ್ರೇಟ್​​, ಅಗತ್ಯ ವಿಟಮಿನ್ಸ್​, ಮಿನರಲ್ಸ್ ಹಾಗು ಫೈಬರ್​​ನಂತಹ ಅತ್ಯಗತ್ಯ ಅಂಶಗಳು ಇದರಲ್ಲಿವೆ. ಆರೋಗ್ಯಕರ ಜೀವನ ಶೈಲಿಗೆ ಬೇಕಾದ ಎಲ್ಲ ಅಂಶಗಳನ್ನೂ ಒಣ ಹಣ್ಣು ಖರ್ಜೂರ ಸೇವಿಸುವ ಮೂಲಕ ಪಡೆಯಬಹುದು. ಒಣ ಖರ್ಜೂರಗಳಲ್ಲಿ ದೇಹಕ್ಕೆ ಅಗತ್ಯವಿರುವ ಕಾರ್ಬೋಹೈಡ್ರೇಟ್​ ಅಧಿಕವಿದೆ. 100 ಗ್ರಾಂ ಖರ್ಜೂರ 75 ಗ್ರಾಂನಷ್ಟು ಕಾರ್ಬೋಹೈಡ್ರೇಟ್​ ಹೊಂದಿರುತ್ತದೆ. ಉಳಿದಂತೆ, 7 ಗ್ರಾಂ …

Read More »

ವೃದ್ಧರನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಬೆಂಗಳೂರಲ್ಲಿ ಕಿಲಾಡಿ ಮಹಿಳೆಯರ ಬಂಧನ

ಬೆಂಗಳೂರು: ವಯೋವೃದ್ಧರನ್ನು ಗುರಿಯಾಗಿಸಿ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ ಮಾಡುತ್ತಿದ್ದ ದಂಪತಿ ಸೇರಿ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಸರ್ಕಾರಿ ನೌಕರನಾಗಿರುವ ಸುಧೀಂದ್ರ ಎಂಬುವರು ನೀಡಿದ ದೂರಿನ ಮೇರೆಗೆ ಅಣ್ಣಮ್ಮ, ಲೋಕೇಶ್ ಹಾಗೂ ಸ್ನೇಹ ಎಂಬುವರನ್ನ ಬಂಧಿಸಲಾಗಿದೆ. ಬಂಧಿತರೆಲ್ಲರೂ ಮೂಲತಃ ಕೊಡಗಿನವರಾಗಿದ್ದು, ಬೊಮ್ಮನಹಳ್ಳಿಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಪ್ರಮುಖ ಆರೋಪಿ ಅಣ್ಣಮ್ಮ ತನ್ನ ಮಗುವಿಗೆ ಹುಷಾರಿಲ್ಲ, ಹಣಕಾಸಿನ ನೆರವು ನೀಡುವಂತೆ ಪರಿಚಯಸ್ಥರಾಗಿದ್ದ ಸುಧೀಂದ್ರ …

Read More »