ಬೆಂಗಳೂರು: ರಸ್ತೆ ಅಪಘಾತದಲ್ಲಿ ಇಂದು ಮೃತಪಟ್ಟ ಪಬ್ಲಿಕ್ ಟಿವಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ ಅವರು, ಭಗವಂತನು ಹನುಮಂತು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಕಾಲಿಕ ನಿಧನದ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಸಂಸದ ಡಿ.ಕೆ.ಸುರೇಶ್ ಟ್ವೀಟ್ ಮಾಡಿ, ಪಬ್ಲಿಕ್ ಟಿವಿಯ ರಾಮನಗರ …
Read More »ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಕೊರೋನಾವಾರಿಯರ್ಸ್ ಗೆ ಪತ್ರ ಬರೆದು ಸನ್ಮಾನಿಸಿದ ಸತೀಶ ಜಾರಕಿಹೊಳಿ
ಬೆಳಗಾವಿ – ಶಾಸಕ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಕೊರೋನಾ ವಿರುದ್ದ ಹೋರಾಟದಲ್ಲಿ ಪ್ರಾಣದ ಹಂಗು ತೊರೆದು ಜನರ ರಕ್ಷಣೆಯಲ್ಲಿ ನಿರತರಾಗಿರುವ ಆರೋಗ್ಯ ಸಿಬ್ಬಂದಿ, ಪಂಚಾಯಿತಿ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ, ಸ್ವಚ್ಚತಾ ಕಾರ್ಮಿಕರಿಗೆ ಮತ್ತು ಜನಪ್ರತಿನಿಧಿಗಳಿಗೆ ಖುದ್ದು ಶಾಸಕರು ಪತ್ರ ಬರೆದು ಅಭಿನಂದನೆಗಳನ್ನು ತಿಳಿಸಿದ್ದಾರೆ. ಜನರ ರಕ್ಷಣೆಗಾಗಿ ಕುಟುಂಬವನ್ನು ಬಿಟ್ಟು ನಿರತರಾಗಿರುವ ನಿಮ್ಮ ಅಮೂಲ್ಯವಾದ ಸೇವೆ ಮತ್ತು ಸಹನೆಗೆ ಬೆಲೆ ಕಟ್ಟಲಾಗದು ನಿಮ್ಮ ಶ್ರಮ ಶ್ಲಾಘನೀಯ. …
Read More »ಬೆಳಗಾವಿ –ನಗರ ಮಧ್ಯೆಯೇ ಕಂಟೈನ್ಮೆಂಟ್ ಝೋನ್ ವಕ್ಕರಿಸಿದೆ…….
ಬೆಳಗಾವಿ – ಈವರೆಗೆ ಕ್ಯಾಂಪ್ ಪ್ರದೇಶ, ಪೀರನವಾಡಿ ಮತ್ತು ಯಳ್ಳೂರು ಕಂಟೈನ್ಮೆಂಟ್ ಝೋನ್ ಆಗಿದ್ದರೂ ಬೆಳಗಾವಿ ನಗರಕ್ಕೆ ಅದರ ಪರಿಣಾಮ ಅಷ್ಟಾಗಿರಲಿಲ್ಲ. ಇಂದು ಬಂದಿರುವ ವರದಿ ಪ್ರಕಾರ ಆಝಾದ್ ನಗರದ ಯುವತಿಗೆ ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ನಗರ ಮಧ್ಯೆಯೇ ಕಂಟೈನ್ಮೆಂಟ್ ಝೋನ್ ವಕ್ಕರಿಸಿದೆ. ಪೂರ್ವಕ್ಕೆ ಹಳೆ ಪಿಬಿ ರಸ್ತೆ, ಪಶ್ಚಿಮಕ್ಕೆ ಬಾತಖಾಂಡೆ ಗಲ್ಲಿ, ಉತ್ತರಕ್ಕೆ ಖಡೇಬಜಾರ್, ದಕ್ಷಿಣಕ್ಕೆ ರವಿವಾರ ಪೇಟೆ ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕ್ ಒಳಗೊಂಡ ಪ್ರದೇಶ ಇಂದು …
Read More »ಅಂಬುಲೆನ್ಸ್‌ನಲ್ಲಿ ಮದ್ಯ ಸಾಗಣೆ- ನಾಲ್ವರು ಅಂದರ್……..
ಚಿತ್ರದುರ್ಗ: ಅಂಬುಲೆನ್ಸ್‌ನಲ್ಲಿ ಮದ್ಯ ಸಾಗಿಸುತ್ತಿದ್ದ ನಾಲ್ವರನ್ನು ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಲ್ಲೇ ಇಂತಹ ಕೃತ್ಯ ನಡೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಂಬುಲೆನ್ಸ್ ಚಾಲಕ ಸುಬಾನ್, ಲ್ಯಾಬ್ ಟೆಕ್ನಿಶಿಯನ್ ಸಂತೋಷ್, ಶಿವಗಂಗಾ ಗ್ರಾಮದ ಜೀವನ್ ಹಾಗೂ ಗಿರೀಶ್ ಬಂಧಿತರು. ಆರೋಪಿಗಳು ಮದ್ಯವನ್ನುಅಂಬುಲೆನ್ಸ್‌ನಿಂದ ಓಮಿನಿ ವ್ಯಾನ್‍ಗೆ ಶಿಫ್ಟ್ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಿಎಸ್‍ಐ …
Read More »ಜಮೀರ್ ಅಹಮ್ಮದ್‍ರನ್ನ ಗೂಂಡಾ ಕಾಯ್ದೆಯಡಿ ಬಂಧಿಸಿ: ಕಟೀಲ್
ಮಂಗಳೂರು: ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪಾದರಾಯನಪುರ ಗಲಾಟೆ ವಿಚಾರದಲ್ಲಿ ಶಾಸಕ ಜಮೀರ್ ಅಹ್ಮದ್ ನೀಡಿದ ಹೇಳಿಕೆ ವಿಚಾರ ಹಾಗೂ ನಡೆದುಕೊಂಡ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಘಟನೆ ನಡೆದಾಗ ಶಾಸಕ ಜಮೀರ್ ತೆಗೆದುಕೊಂಡ ನಿರ್ಧಾರ ಮತ್ತು ವರ್ತನೆ ಕಾನೂನು ಬಾಹಿರವಾಗಿದೆ. ಅಲ್ಲಿನ ಗೂಂಡಾಗಿರಿಗೆ ಶಾಸಕನಾಗಿ ಬೆಂಗಾವಲಾಗಿ ನಿಂತಿರುವುದು …
Read More »ಪಾದರಾಯನಪುರದ ಗಲಭೆ ಮುಂದಿನ ಅನಾಹುತಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವೇ ನೇರ ಹೊಣೆ.
ಬೆಂಗಳೂರಿನ ಪಾದರಾಯನಪುರದ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಐವತ್ತನಾಲ್ಕು ಮಂದಿ ಪುಂಡರನ್ನು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸುವುದರಿಂದಾಗುವ ಮುಂದಿನ ಅನಾಹುತಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವೇ ನೇರ ಹೊಣೆ. ಬೆಂಗಳೂರಿನಲ್ಲಿ ಕ್ವಾರಂಟೈನ್ ಗೆ ಒಳಗಾಗಬೇಕಿದ್ದ ಗಲಭೆಕೋರರನ್ನು ಕರೋನ ಸೋಂಕಿನ ವಿಷಯದಲ್ಲಿ ಹಸಿರು ವಲಯವಾಗಿರುವ ರಾಮನಗರದ ಜೈಲಿನಲ್ಲಿರಿಸುವುದು ವಿವೇಕಯುತ ನಿರ್ಧಾರವಲ್ಲ. ಚೋದ್ಯವೆಂದರೆ ರಾಮನಗರ ಜೈಲಿನ ಖೈದಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಿ, ಪಾದರಾಯನಪುರದ ಪುಂಡರನ್ನು ರಾಮನಗರದ ಕಾರಗೃಹದಲ್ಲಿ ಹದಿನೈದಕ್ಕೂ ಹೆಚ್ಚು ಮಂದಿಯನ್ನು …
Read More »ಸಂಗೀತ ಮಾಂತ್ರಿಕ ಹಂಸಲೇಖ ಅವರು ರಸ್ತೆ ಗುಂಡಿ ಮುಚ್ಚಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.
ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ಸಂಗೀತ ಮಾಂತ್ರಿಕ ಹಂಸಲೇಖ ಅವರು ರಸ್ತೆ ಗುಂಡಿ ಮುಚ್ಚಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ಹಂಸಲೇಖ ಅವರ ಮನೆ ಪಕ್ಕದಲ್ಲಿರುವ ಪಾರ್ಕಿಗೆ ಬಿಬಿಎಂಪಿಯವರು ಪೈಪ್ ಲೈನ್ ಹಾಕಲು ರಸ್ತೆಯಲ್ಲಿ ಗುಂಡಿ ತೆಗೆದಿದ್ದರು. ಕಾಮಗಾರಿ ಮುಗಿದ ಬಳಿಕ ಮಣ್ಣು ಹಾಕಲಾಗಿತ್ತು. ಆದರೆ ಗುಂಡಿ ಹಾಗೆ ಉಳಿದಿದ್ದರಿಂದ ಸವಾರರಿಗೆ ಕಿರಿಕಿರಿ ಉಂಟಾಗಿತ್ತು. ಅಷ್ಟೇ ಅಲ್ಲದೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ರಸ್ತೆಯಲ್ಲಿ ಗುಂಡಿ ಇರುವುದನ್ನು ಗಮನಿಸಿದ ಹಂಸಲೇಖ …
Read More »ತಕ್ಷಣ ಎಲ್ಲ ಪತ್ರಕರ್ತರಿಗಾಗಿ ಅಗತ್ಯ ತಪಾಸಣಾ ಶಿಬಿರ ಏರ್ಪಡಿಸುವಂತೆ ಸೂಚನೆ ನೀಡಿದ್ದಾರೆ:B.S.Y
ಬೆಂಗಳೂರು: ಕೊರೊನಾ ವೈರಸ್ ಮಾಧ್ಯಮದವರ ಮೇಲೂ ತನ್ನ ವಕ್ರದೃಷ್ಟಿ ಬೀರಿದೆ. ನಿನ್ನೆ ಮುಂಬೈನಲ್ಲಿ 53 ಪತ್ರಕರ್ತರಿಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಇತರೆ ನಗರಗಳ ಪತ್ರಕರ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ರಿಸ್ಕ್ ತೆಗೆದುಕೊಂಡು ವರದಿ ಮಾಡುವ ಪತ್ರಕರ್ತರು ಬಹಳ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಮುಂಬೈ ಘಟನೆ ಬಳಿಕ ಇದೀಗ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಜ್ಯದ ಎಲ್ಲಾ ಮಾಧ್ಯಮ ಸಿಬ್ಬಂದಿಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ಮುಂದಾಗಿದೆ. ಮುಂಬೈ ಪ್ರಕರಣದ ಬಗ್ಗೆ ಪರ್ತಕರ್ತರಿಂದ ಮಾಹಿತಿ …
Read More »ಬಾಗಲಕೋಟ ಜಿಲ್ಲೆಯ ಇಬ್ಬರು ಕೊರೋನಾ ಸೋಂಕಿನಿಂದ ಗುಣಮುಖ*
:- ಮಹಾಮಾರಿ ಕೊರೋನಾ ತಡೆಗಟ್ಟುವ ಹಿನ್ನಲೆ ಲಾಕ್ ಡೌನ. ಬಾಗಲಕೋಟ ಜಿಲ್ಲೆಯ ಇಬ್ಬರು ಕೊರೋನಾ ಸೋಂಕಿನಿಂದ ಗುಣಮುಖ ಕೊರೋನಾ ಸೋಂಕಿನಿಂದ ಮೃತ್ತಪಟ್ಟಿದ ವ್ಯಕ್ತಿಯ ಪತ್ನಿ ಹಾಗೂ ಸಹೋದರ ಗುಣಮುಖ ಬಾಗಲಕೋಟ ಜಿಲ್ಲಾ ಕೋವಿಡ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಬಿಡುಗಡೆ ಆದ್ರೂ ೧೪ ದಿನಗಳ ಕಾಲ ಹೋಮ್ ಕ್ವಾರಂಟೈನ ಇರಲು ಸೂಚನೆ ಬಾಗಲಕೋಟ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ, ಕೆ ರಾಜೇಂದ್ರ ಹೇಳಿಕೆ ಕೋವಿಡ್ ಗುಣಮುಖರನ್ನು ಸಸಿ ನೀಡುವ ಮೂಲಕ ಕಳುಹಿಸಿಕೊಟ್ಟ ಜಿಲ್ಲಾ …
Read More »ಮೇ 3ರ ನಂತರ ದೇಶದಲ್ಲಿಯ ಲಾಕ್‍ಡೌನ್ ಸಡಿಲಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ
ಬೆಂಗಳೂರು: ಮೇ 3ರ ನಂತರ ದೇಶದಲ್ಲಿಯ ಲಾಕ್‍ಡೌನ್ ಸಡಿಲಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ನಡುವೆ ಮೇ ಕೊನೆಯ ಅಥವಾ ಜೂನ್ ಮೊದಲ ವಾರದಲ್ಲಿ ಕೊರೊನಾ ಹರಡುವಿಕೆ ಎರಡನೇ ಅಲೆಯ ತಡೆಗಾಗಿ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಕೊರೊನಾ ಸೋಂಕು ಕಳೆದ 3.4 ದಿನಗಳಲ್ಲಿ ದ್ವಿಗುಣವಾಗ್ತಿದೆ. ದ್ವಿಗುಣದ ಪ್ರಮಾಣವನ್ನು 12 ದಿನಗಳಿಗೆ ತರಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಲಾಕ್‍ಡೌನ್ ಮೊದಲು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3.4 …
Read More »
Laxmi News 24×7