Breaking News

ಧಾರವಾಡದಲ್ಲಿ ನಿವೃತ್ತಿಯದ ಸೈನಿಕನಿಗೆ ಅದ್ದೂರಿ ಸ್ವಾಗತ… ಸ್ವಗ್ರಾಮದಲ್ಲಿ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

Spread the love

ಭಾರತೀಯ ಸೇನೆಯಲ್ಲಿ ಸುದೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ಮರಳಿ ಸ್ವಗ್ರಾಮಕ್ಕೆ ಬಂದ ಯೋಧನಿಗೆ ಧಾರವಾಡದ ಕಲ್ಲೂರು ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.

ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದ ಮಹ್ಮದ್‌ಸಾದಿಕ್ ಹಂಚಿಮನಿ ಊರ್ಫ್ ಸೈಯದ್‌ನವರ ಯೋಧ ಭಾರತೀಯ ಸೇನೆಯಲ್ಲಿ ಸುದೀರ್ಘ 24 ವರ್ಷ ಸೇವೆ ಸಲ್ಲಿಸಿ ಮರಳಿ ಸ್ವಗ್ರಾಮಕ್ಕೆ ಬಂದಿದ್ದಾರೆ. ಮರಾಠಾ ಲೈಫ್ ಇನ್‌ಫೆಂಟರಿ ರೆಜೆಂಟ್ ಮೂಲಕ ಭಾರತೀಯ ಸೇನೆ ಸೇರಿದ ಮಹ್ಮದ್‌ಸಾದಿಕ್ ಅವರು ಮಣಿಪುರ, ಸೌತ್‌ಸುಡಾನ್, ಅಸ್ಸಾಂ, ಜಮ್ಮು ಕಾಶ್ಮೀರ, ಸಿಯಾಚಿನ್ ಸೇರಿದಂತೆ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅನೇಕ ಯುದ್ಧದ ಸನ್ನಿವೇಶ ಹಾಗೂ ಆಪರೇಶನ್‌ಗಳೂ ಮಹ್ಮದಸಾದಿಕ್ ಪಾಲ್ಗೊಂಡಿದ್ದರು. ಕಳೆದ ಶುಕ್ರವಾರ ಸೇವೆಯಿಂದ ನಿವೃತ್ತಿ ಹೊಂದಿ ಮರಳಿ ತಮ್ಮ ಸ್ವ ಗ್ರಾಮವಾದ ಕಲ್ಲೂರಿಗೆ ಬಂದ ಯೋಧ ಮಹ್ಮದ್‌ಸಾದಿಕದ ಅವರನ್ನು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಅದ್ದೂರಿಯಾಗಿ ಬರಮಾಡಿಕೊಳ್ಳುವ ಮೂಲಕ ಗೌರವಿಸಿದರು.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ