Breaking News
Home / ಜಿಲ್ಲೆ / ಬೆಳಗಾವಿ –ನಗರ ಮಧ್ಯೆಯೇ ಕಂಟೈನ್ಮೆಂಟ್ ಝೋನ್ ವಕ್ಕರಿಸಿದೆ…….

ಬೆಳಗಾವಿ –ನಗರ ಮಧ್ಯೆಯೇ ಕಂಟೈನ್ಮೆಂಟ್ ಝೋನ್ ವಕ್ಕರಿಸಿದೆ…….

Spread the love

ಬೆಳಗಾವಿ – ಈವರೆಗೆ ಕ್ಯಾಂಪ್ ಪ್ರದೇಶ, ಪೀರನವಾಡಿ ಮತ್ತು ಯಳ್ಳೂರು ಕಂಟೈನ್ಮೆಂಟ್ ಝೋನ್ ಆಗಿದ್ದರೂ ಬೆಳಗಾವಿ ನಗರಕ್ಕೆ ಅದರ ಪರಿಣಾಮ ಅಷ್ಟಾಗಿರಲಿಲ್ಲ.

ಇಂದು ಬಂದಿರುವ ವರದಿ ಪ್ರಕಾರ ಆಝಾದ್ ನಗರದ ಯುವತಿಗೆ ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ನಗರ ಮಧ್ಯೆಯೇ ಕಂಟೈನ್ಮೆಂಟ್ ಝೋನ್ ವಕ್ಕರಿಸಿದೆ.

ಪೂರ್ವಕ್ಕೆ ಹಳೆ ಪಿಬಿ ರಸ್ತೆ, ಪಶ್ಚಿಮಕ್ಕೆ ಬಾತಖಾಂಡೆ ಗಲ್ಲಿ, ಉತ್ತರಕ್ಕೆ ಖಡೇಬಜಾರ್, ದಕ್ಷಿಣಕ್ಕೆ ರವಿವಾರ ಪೇಟೆ ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕ್ ಒಳಗೊಂಡ ಪ್ರದೇಶ ಇಂದು ಮಧ್ಯರಾತ್ರಿಯಿಂದಲೇ ಕಂಟೈನ್ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿಗಳು ಘೋಷಿಸಿದ್ದಾರೆ.

ಈ ಪ್ರದೇಶದಲ್ಲಿ 1159 ಮನೆಗಳು, 7105 ಜನಸಂಖ್ಯೆ, 23 ಅಂಗಡಿಗಳಿವೆ.

ಇದರ ಜೊತೆಗೆ ಇಲ್ಲಿಂದ ಒಟ್ಟೂ 5 ಕಿಮೀ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಪೂರ್ವಕ್ಕೆ ಬಸವನಕುಡಚಿಯ ಭಾರತ ಪೆಟ್ರೋಲ್ ಬಂಕ್, ಪಶ್ಚಿಮಕ್ಕೆ ಬೆನಕನಳ್ಳಿ ಕ್ರಾಂತಿ ನಗರ, ಉತ್ತರಕ್ಕೆ ಯಮುನಾಪುರದ ಸತ್ಯಸಾಯಿ ಟೆಂಪಲ್, ದಕ್ಷಿಣಕ್ಕೆ ಯಳ್ಳೂರು ರಸ್ತೆ ಕೆಎಲ್ಇ ಸೆಂಟಿನರಿ ಹಾಸ್ಪಿಟಲ್ ಪ್ರದೇಶ ಬಫರ್ ಝೋನ್ ಅಡಿ ಬರುತ್ತದೆ.

ಏನಿದು ಕಂಟೈನ್ಮೆಂಟ್, ಬಫರ್ ಝೋನ್?

ಸಾಂಕ್ರಾಮಿಕ ರೋಗ ಬಂದ ಸಂದರ್ಭದಲ್ಲಿ ರೋಗ ಹರಡಬಾರದೆನ್ನುವ ಕಾರಣಕ್ಕೆ ಕಂಟೈನ್ಮೆಂಟ್ ಝೋನ್ ಮತ್ತು ಬಫರ್ ಝೋನ್ ಘೋಷಿಸಲಾಗುತ್ತದೆ.

ಈ ಭಾಗದ ನಿವಾಸಿಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಸಂಬಂಧಿಸಿದ ಭೌಗೋಳಿಕ ಪ್ರದೇಶವನ್ನು ನಿಷೇಧಿತ ಪ್ರದೇಶ (Containment Zone) ಎಂದು, ನಿಷೇಧಿತ ಪ್ರದೇಶದ ಹೊರಗಿನ 2 ಕಿ.ಮೀ. ವ್ಯಾಪ್ತಿಯನ್ನು (Buffer Zone) ಎಂದು ಘೋಷಿಸಲಾಗುತ್ತದೆ.
ಈಗ ಆಜಾದ್ ಗಲ್ಲಿಯ ಯುವತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ  ಯಾವುದೇ ವ್ಯಕ್ತಿ/ ಜನರು ಕಾಲ್ನಡಿಗೆ, ಇನ್ಯಾವುದೋ ವಾಹನಗಳ ಮೂಲಕ ಒಳ ಪ್ರವೇಶಿಸುವುದು ಹಾಗೂ ನಿರ್ಗಮಿಸುವುದನ್ನು ನಿರ್ಬಂಧಿಸಲಾಗಿದೆ. ಕರ್ತವ್ಯ ನಿರತ ವಾಹನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.
ಸದರಿ ನಿಷೇಧಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಎಲ್ಲ ನಿವಾಸಿಗಳು ಮುಂದಿನ ಆದೇಶವಾಗುವರೆಗೆ ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿಕೊಂಡು ಬರಬೇಕು, ಸದರಿ ನಿಷೇಧಿತ ಪ್ರದೇಶಗಳ  ವ್ಯಾಪ್ತಿಯಲ್ಲಿರುವ ನಿವಾಸಿಗಳು ತಮ್ಮ ಬಡಾವಣಿಯ ಓಣಿಯ ಗಲ್ಲಿಯಲ್ಲಿ ಶುಚಿತ್ವವನ್ನು ತಪ್ಪದೆ ಕಾಪಾಡಿಕೊಂಡು ಬರಬೇಕು.
ನಿಷೇಧಿತ ಪ್ರದೇಶಗಳ  ವ್ಯಾಪ್ತಿಯಲ್ಲಿ ಐದಕ್ಕೂ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ, ಧಾರ್ಮಿಕ ಉತ್ಸವ, ಉರುಸು, ಮದುವೆ, ಕ್ರೀಡೆ, ಸಂತೆ, ಜಾತ್ರೆ, ಸಮ್ಮೇಳನ,ನಾಟಕೋತ್ಸವ, ವಿಚಾರ ಗೋಷ್ಟಿ ಮುಂತಾದವುಗಳನ್ನು ಜರುಗಿಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಿಷೇಧಿತ ಪ್ರದೇಶದಲ್ಲಿನ ಎಲ್ಲಾ ಕಚೇರಿಗಳು (ಸರಕಾರಿ ಕಚೇರಿಗಳನ್ನು ಹೊರತುಪಡಿಸಿ), ಅಂಗಡಿ, ಮಳಿಗೆ, ದಾಸ್ತಾನು ಕೇಂದ್ರಗಳನ್ನು (ದಿನಸಿ, ಹಾಲು, ಹಣ್ಣು, ತರಕಾರಿ ಮತ್ತು ಔಷಧಿ ಅಂಗಡಿಗಳು ಹೊರತುಪಡಿಸಿ) ಮುಚ್ಚುವುದು.
ಅಗತ್ಯ ವಸ್ತುಗಳಾದ (ದಿನಸಿ, ಹಾಲು, ಹಣ್ಣು ಮತ್ತು ತರಕಾರಿಗಳನ್ನು ಪ್ರತಿದಿನ ಬೆಳಿಗ್ಗೆ ೮  ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಖರೀದಿಸಲು ಅವಕಾಶವಿರುತ್ತದೆ.
ಆಗತ್ಯ ವಸ್ತುಗಳನ್ನು ಖರೀದಿಸುವ ಸ್ಥಳದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಿದೆ.
ಈ ಗ್ರಾಮದ ಎಲ್ಲಾ ಮನೆಗಳಲ್ಲಿ ಸದಸ್ಯರು ಅವರ ಮನೆ ಬಿಟ್ಟು ಹೊರಗಡೆ ತಿರುಗಾಡುವಂತಿಲ್ಲ ಮತ್ತು ಇತರರ ಮನೆಗಳಿಗೆ ಹೋಗುವಂತಿಲ್ಲ. ಸದರಿ ಪ್ರದೇಶದಲ್ಲಿರುವ ಎಲ್ಲಾ ಮನೆಗಳ ಸದಸ್ಯರು ಗೃಹ ಸಂಪರ್ಕ ತಡೆ (HomeQuarantine) ಯಲ್ಲಿರುವುದು.
ಗ್ರಾಮದಲ್ಲಿ ವಾಸಿಸುತ್ತಿರುವ ಜನರ ಆರೋಗ್ಯವನ್ನು ಆರೋಗ್ಯ ಇಲಾಖೆಯು ತಂಡಗಳನ್ನು ರಚಿಸಿಕೊಂಡು ಪರಿಶೀಲಿಸಬೇಕು.
ನಿಷೇಧಿತ ಪ್ರದೇಶದ ಹೊರಗಿನ  ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಘೋಷಿಸಲಾಗಿರುವುದರಿಂದ ಆರೋಗ್ಯದ ದೃಷ್ಟಿಯಿಂದ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಬೇಕು.
ಸದರಿ ಆದೇಶವನ್ನು ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಲು  ಮಹಾನಗರ ಪಾಲಿಕೆ ಆಯುಕ್ತರನ್ನು ನೋಡಲ್ ಅಧಿಕಾರಿ ಎಂದು ಜಿಲ್ಲಾಧಿಕಾರಿಗಳು ನೇಮಿಸಿದ್ದಾರೆ.
ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ  ಆದೇಶ ಜಾರಿಗೆ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.
 ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ರ ಪ್ರಕಾರ ಕ್ರಮ‌ಕೈಗೊಳ್ಳಲಾಗುತ್ತದೆ.

Spread the love

About Laxminews 24x7

Check Also

ಬೆಳಗಾವಿಯಲ್ಲೂ ಗುಳೆ ಹೋಗುವವರ ಸಂಖ್ಯೆ ದುಪ್ಪಟ್ಟಾಗಿದೆ. ಕೆಲಸ ಹುಡುಕಿಕೊಂಡು ನಿತ್ಯ ಸಾವಿರಾರು ಜನರು ಗೋವಾ, ಉಡುಪಿ, ಮಂಗಳೂರು ಕಡೆಗೆ ವಲಸೆ

Spread the loveಬೆಳಗಾವಿಯಲ್ಲೂ ಇದೇ ಸ್ಥಿತಿ: ಜಿಲ್ಲೆಯ 506 ಗ್ರಾಪಂ ವ್ಯಾಪ್ರಿಯ 640ಕ್ಕೂ ಅಧಿಕ ಹಳ್ಳಿಗಳಲ್ಲಿ ರೈತರು, ಕೂಲಿಕಾರರಿಗೆ ನರೇಗಾ ಯೋಜನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ