Breaking News

ಕುರುಬ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಪ್ರಕರಣ: 9 ಜನರ ವಿರುದ್ಧ ಎಫ್ಐಆರ್

Spread the love

ಬೆಳಗಾವಿಯ ಕೊಂಡಸಕೊಪ್ಪ ಗ್ರಾಮದಲ್ಲಿ ಕುರುಬ ಸಮಾಜದಿಂದ ಕುರುಬ ಕುಟುಂಬಕ್ಕೆ ಸಾಮಾಜೀಕ ಬಹಿಷರ ಹಾಕಿದ ಪ್ರಕರಣದಲ್ಲಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ದೇವಸ್ಥಾನದ ಪೂಜೆ ಮತ್ತು ವೈಯಕ್ತಿಕ ಕಾರಣಗಳಿಗಾಗಿ ನರಸೋಬಾ ಕರೆಪ್ಪ ಸಾಂಬ್ರೇಕರ ಅವರ ಕುಟುಂಬವನ್ನು ಗ್ರಾಮದಿಂದ ದೂರ ಇಟ್ಟಿರುವ ಸಂಬಂಧ ಇದೀಗ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಗ್ರಾಮದ ಪಂಚರು ನರಸೋಬಾ ಕುಟುಂಬದೊಂದಿಗೆ ಯಾರೂ ಮಾತನಾಡಬಾರದು ಎಂದು ಫರ್ಮಾನು ಹೊರಡಿಸಿದ್ದು ನಿಯಮ ಉಲ್ಲಂಘಿಸಿ ಮಾತನಾಡಿದವರಿಗೆ 5,000 ರೂಪಾಯಿ ದಂಡ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಈ ಕುಟುಂಬದೊಂದಿಗೆ ಮಾತನಾಡಿದವರ ಬಗ್ಗೆ ಮಾಹಿತಿ ನೀಡಿದವರಿಗೆ 1,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸುವ ಮೂಲಕ ಗ್ರಾಮದಲ್ಲಿ ದ್ವೇಷದ ವಾತಾವರಣ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬದ ರೇಣುಕಾ ಸಾಂಬ್ರೇಕರ್ ಅವರು ಕಳೆದ ತಿಂಗಳ 6 ರಂದು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈಗ ಕ್ರಮ ಕೈಗೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಪ್ಪ ಸಾಂಬ್ರೇಕರ, ವಿಠಲ, ಬಾಗಣ್ಯ ರಮೇಶ್, ಮಾಳಿಂಗ ಸೇರಿದಂತೆ ಒಟ್ಟು ಒಂಬತ್ತು ಜನರ ಮೇಲೆ ದೂರು ದಾಖಲಾಗಿದೆ.

ಸದ್ಯ ಹಿರೇಬಾಗೇವಾಡಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು ಸಂತ್ರಸ್ತ ಕುಟುಂಬಕ್ಕೆ ರಕ್ಷಣೆ ನೀಡಲು ಮತ್ತು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.


Spread the love

About Laxminews 24x7

Check Also

ಮುಂಗಾರು ಕೊರತೆ ಎಫೆಕ್ಟ್: ಹಾರಂಗಿ ಜಲಾಶಯ ಒಳಹರಿವು ತೀವ್ರ ಕುಸಿತ

Spread the loveಮಡಿಕೇರಿ : ಮುಂಗಾರು ಮಳೆ (Monsoon) ಕೊರತೆಯಿಂದ ಕೊಡಗು ಜಿಲ್ಲೆಯ ಏಕೈಕ ಜಲಾಶಯವಾದ ಹಾರಂಗಿ ಜಲಾಶಯದ ಒಳಹರಿವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ