ಬೆಳಗಾವಿಯಲ್ಲಿ ಅತ್ತೆಯೇ ಅಳಿಯನ ಮನೆಗೆ ಕನ್ನ ಹಾಕಿರುವ ಘಟನೆ ನಡೆದಿದೆ. ಪುತ್ರಿಯರ ಮದುವೆ ಸಾಲ ತೀರಿಸಲು ಅಡ್ಡದಾರಿ ಹಿಡಿದ ಮಹಿಳೆ, ಅಳಿಯನ ಮನೆಯಲ್ಲೇ ಚಿನ್ನಾಭರಣ ಕದ್ದು ಸಿಕ್ಕಿಬಿದ್ದಿದ್ದಾಳೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಳಗಾವಿಯ ಪಿರಣವಾಡಿ ನಿವಾಸಿ ಉಜ್ವಲಾ ಕಮ್ಮಾರ, ಶಿವಾ ಅಪ್ಪಯನವರ ಬಂಧಿತ ಆರೋಪಿಗಳು. ಚಿಕ್ಕ ಮಗಳ ಮದುವೆ ಸಾಲ ತೀರಿಸಲು ಹಿರಿಯ ಅಳಿಯನ ಮನೆಯಲ್ಲಿ ಮಹಿಳೆ ಉಜ್ವಲಾ, 16.57 ಲಕ್ಷ ಮೌಲ್ಯದ 110 ಗ್ರಾಮ್ ಚಿನ್ನದ ಆಭರಣ ಕಳ್ಳತನ ಮಾಡಿದ್ದಾಳೆ. ಸಂಬಂಧಿ ಶಿವಾ ಅಪ್ಪಯನವರ ಜೊತೆಗೂಡಿ ಈ ಕೃತ್ಯ ಎಸಗಿದ್ದಾಳೆ. ಮದುವೆ ಇದ್ದ ಕಾರಣ ಅತ್ತೆಯನ್ನ ಮನೆಯಲ್ಲಿ ಇರಿಸಿ ಅಳಿಯ, ಮದುವೆಗೆ ಹೋಗಿದ್ದ. ಈ ವೇಳೆ ಮನೆಯಲ್ಲಿದ್ದ ಪುತ್ರಿಯ ಚಿನ್ನದ ಬಳೆ, ಉಂಗುರ, ನೆಕ್ಲೇಸ್, ಗಂಟನ್ ಸೇರಿ 110 ಗ್ರಾಮ್ ಚಿನ್ನಾಭರಣವನ್ನ ಅತ್ತೆ ಕಳ್ಳತನ ಮಾಡಿ, ಏನು ಗೊತ್ತಿಲ್ಲದಂತೆ ನಾಟಕ ಮಾಡಿದ್ಲು. ಅನುಮಾನ ಬಂದು ಅತ್ತೆ ಮೇಲೆ ಅಳಿಯ ಪೊಲೀಸರಿಗೆ ದೂರು ಕೊಟ್ಟಿದ್ದ. ವಿಚಾರಣೆ ಮಾಡಿದಾಗ ಅತ್ತೆಯ ನೌಟಂಕಿ ಆಟ ಬಯಲಾಗಿದೆ.
Check Also
ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ
Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ ಘಟನೆ ದಾವಣಗೆರೆಯ ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …
Laxmi News 24×7