Breaking News
Home / ರಾಜಕೀಯ (page 766)

ರಾಜಕೀಯ

ಕಾಲುವೆಗೆ ಹಾರಿ ಎರಡು ಹೆಣ್ಣುಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡ ತಾಯಿ

ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದಿದೆ‌. ಗ್ರಾಮದ ಹೊರ ಭಾಗದಲ್ಲಿರೋ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗೆ ಹಾರಿ ಸಾವನ್ನಪ್ಪಿದ್ದಾಳೆ‌. ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹಾರಿದ್ದಾಳೆ. ರೇಣುಕಾ ಅಮೀನಪ್ಪ ಕೋನಿನ್ (26 ), ಯಲ್ಲವ್ವ (2) ಅಮೃತಾ (1) ಮೃತರಾದ ದುರ್ದೈಗಳು. ಕಳೆದ ಎರಡು ದಿನಗಳ …

Read More »

ಇನ್ಮುಂದೆ ಮನೆಯಲ್ಲೇ ಕುಳಿತು `ರೇಷನ್ ಕಾರ್ಡ್’ ಗೆ ಅರ್ಜಿ ಸಲ್ಲಿಸಬಹುದು

ಬೆಂಗಳೂರು : ರಾಜ್ಯದ ನಾಗರೀಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ahara.kar.nic.in ಜಾಲತಾಣದ ಮೂಲಕ, ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕ ಪಡಿತರ ಚೀಟಿ ( New Ration Card ) ಪಟ್ಟಿ 2022 ರಲ್ಲಿ ಹೆಸರು ಇಲ್ಲದ ಎಲ್ಲಾ ಜನರು ಈಗ ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು, ಜೊತೆಗೆ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಕರ್ನಾಟಕದಲ್ಲಿ ಹೊಸ ಎಪಿಎಲ್ / ಬಿಪಿಎಲ್ ಪಡಿತರ ಚೀಟಿಗೆ ( BPL, …

Read More »

ಮರ ಎಂದು ಭ್ರಮಿಸಿ ಟ್ರಾನ್ಸ್‌ಫಾರ್ಮರ್‌ ಮೇಲೆ ಹತ್ತಿದ ಚಿರತೆ ವಿದ್ಯುತ್‌ ಆಘಾತಕ್ಕೆ ಸಾವು!

ತುಮಕೂರು: ರಾಜ್ಯದೆಲ್ಲೆಡ ಚಿರತೆ ದಾಳಿಯದ್ದೇ ಸುದ್ದಿ. ಹಳ್ಳಿ ಹಳ್ಳಿಗಳು ಮಾತ್ರವಲ್ಲ ನಗರ ಪ್ರದೇಶಗಳೂ ಚಿರತೆ ದಾಳಿಯಿಂದ ನಲುಗಿವೆ. ಕುರುಚಲು ಕಾಡುಗಳಲ್ಲಿ ವಾಸಿರುವ ಈ ಪ್ರಾಣಿಗಳು ಈಗ ನಾನಾ ಕಾರಣಕ್ಕೆ ಜನವಸತಿ ಪ್ರದೇಶವನ್ನೇ ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿವೆ. ಹೀಗಾಗಿ ದನ, ನಾಯಿಗಳನ್ನು ಹೊತ್ತೊಯ್ಯುವ, ಮನುಷ್ಯರ ಪ್ರಾಣವನ್ನೇ ತೆಗೆಯುವ (Leopard death) ಸುದ್ದಿಗಳು ಜೋರಾಗಿ ಕೇಳಿಬರುತ್ತಿವೆ. ಟ್ರಾನ್ಸ್‌ಫಾರ್ಮರ್‌ನಲ್ಲಿ ಸಿಲುಕಿದ ಚಿರತೆಇದರ ನಡುವೆ ಇಲ್ಲೊಂದು ಚಿರತೆ ಬೇರೆ ಕಾರಣಕ್ಕಾಗಿ ಸುದ್ದಿಯಾಗಿದೆ. ಅಂದ ಹಾಗೆ ಇದು ಒಂದು …

Read More »

ಸಿಎಂ ಆಗಮನ ವೇಳೆ ತರಾತುರಿಯಲ್ಲಿ ಮೆಟ್ಟಿಲಿಂಗ್ ರಸ್ತೆ ನಿರ್ಮಾಣ

ಹನೂರು: ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಕೆಸರಿನಿಂದ ಕೂಡಿದ ರಸ್ತೆಯನ್ನು ಪಿಡಬ್ಯುಡಿ ಇಲಾಖೆಯ ಅಧಿಕಾರಿಗಳು ಸಿಎಂ ಆಗಮಿಸುವ ಒಂದೂವರೆ ಗಂಟೆ ಮುಂಚಿತವಷ್ಟೇ ತರಾತುರಿಯಲ್ಲಿ ಮೆಟ್ಲಿಂಗ್ ರಸ್ತೆಯನ್ನು ನಿರ್ಮಿಸಲಾಯಿತು. ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಮುಖ್ಯದ್ವಾರದಿಂದ ವೇದಿಕೆಗೆ ತೆರಳುವ ರಸ್ತೆಯು ಕೆಸರಿನಿಂದ ಕೂಡಿತ್ತು. ಈ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಮತಟ್ಟು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ದಿಸೆಯಲ್ಲಿ ಜೇಡಿಮಣ್ಣು ಸುರಿದು ಸಮತಟ್ಟು ಮಾಡಲಾಗಿತ್ತು. ಆದರೂ ಕೆಸರುಗದ್ದೆಯಂತಾಗಿತ್ತು. ಇದರಿಂದ ಸಿಎಂ …

Read More »

ಮಹದಾಯಿ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಸಿಎಂಬೊಮ್ಮಾಯಿ

ಮೈಸೂರು: ಕಾಂಗ್ರೆಸ್ ಜನರಿಗೆ ಮರೆವಿದೆ ಎಂದು ತಿಳಿದಂತಿದೆ. ಆದರೆ ಕಾಂಗ್ರೆಸ್ ನ ಪರಿಚಯ ಜನರಿಗಿದೆ. ಮಹದಾಯಿ ಸಮಸ್ಯೆ ಉಂಟಾಗಲು ಕಾಂಗ್ರೆಸ್ ಕಾರಣ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.   ಮೈಸೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಒಟ್ಟಾಗಿ ಹೋಗುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಒಟ್ಟಾಗಿ ಹೋಗುವುದು ಅವರಿಗೆ ಸಂಬಂಧಿಸಿದ ಆಂತರಿಕ ವಿಚಾರ. ನಾವು ಹೇಳುವುದೇನೂ ಇಲ್ಲ. ಮಹದಾಯಿ, ಕೃಷ್ಣಾ ಹಾಗೂ …

Read More »

ಬೊಮ್ಮಾಯಿಗೆ ಹೈಕಮಾಂಡ್ ಬುಲಾವ್.. ಫಲಿಸುತ್ತಾ ಬಿಜೆಪಿ ನಾಯಕರ ತಂತ್ರಗಾರಿಕೆ..?

ಕಾಂಗ್ರೆಸ್ ಹೈಕಮಾಂಡ್ ಚುನಾವಣೆ ತಂತ್ರ ಮಾಡ್ತಿದ್ದಂತೆ ಇತ್ತ ಬಿಜೆಪಿ ಹೈಕಮಾಂಡ್ ತಂತ್ರ ರೂಪಿಸಲು ಪ್ಲಾನ್ ಮಾಡಿದೆ. ಅದಕ್ಕಾಗಿ ಬುಧವಾರದ ಮುಹೂರ್ತ ಫಿಕ್ಸ್ ಮಾಡಿರೋ ಕಮಲ ನಾಯಕರು, ಸಿಎಂ ಬೊಮ್ಮಾಯಿಗೆ ಬುಲಾವ್ ನೀಡಿದ್ದಾರೆ. ಅವತ್ತು ಇಡೀ ದಿನ ದೆಹಲಿಯಲ್ಲಿ ರಾಜ್ಯ ಗೆಲ್ಲುವ ರಣತಂತ್ರದ ಬಗ್ಗೆಯೇ ಚರ್ಚೆ ನಡೆಯಲಿದೆ. ಗುಜರಾತ್ ಗೆದ್ದು ಬೀಗಿದ ಕೇಸರಿ ಬ್ರಿಗೇಡ್, ಕರ್ನಾಟಕದತ್ತ ಚಿತ್ತ ಹರಿಸಿದೆ. ಈಗಾಗಲೇ ಬಿಜೆಪಿ ಕೈಯಲ್ಲಿರೋ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿಸೋ ನಿಟ್ಟಿನಲ್ಲಿ ಇಡೀ …

Read More »

ಗಡಿ ವಿವಾದದ ಕಿಚ್ಚು ಹೊತ್ತಿರುವಾಗಲೇ ಮಂಗಳವಾರ ಬೆಳಗಾವಿ ನಗರಕ್ಕೆ ಆಗಮಿಸಿದ ಮಹಾರಾಷ್ಟ್ರದ ಎನ್ ಸಿಪಿ‌ ಶಾಸಕ ರೋಹಿತ್ ಪವಾರ್

ಗಡಿ ವಿವಾದದ ಕಿಚ್ಚು ಹೊತ್ತಿರುವಾಗಲೇ ಮಂಗಳವಾರ ಬೆಳಗಾವಿ ನಗರಕ್ಕೆ ಆಗಮಿಸಿದ ಮಹಾರಾಷ್ಟ್ರದ ಎನ್ ಸಿಪಿ‌ ಶಾಸಕ ರೋಹಿತ್ ಪವಾರ್ ಜಿಲ್ಲಾಡಳಿತಕ್ಕೆ ಟಾಂಗ್ ನೀಡಿದ್ದಾರೆ. ಮಂಗಳವಾರ ನಗರದ ವಿವಿಧ ಪ್ರದೇಶಕ್ಕೆ‌ ತೆರಳಿ ಮರಾಠಿ ಸಮಾಜದ ಸಮಸ್ಯೆ ಆಲಿಸಿದ ಎನ್ ಸಿಪಿ ಶಾಸಕ ರೋಹಿತ್ ಎಂಇಎಸ್ ಮುಖಂಡ ದೀಪಕ ದಳವಿ ಮನೆಗೆ ತೆರಳಿ ಮಾತುಕತೆ ನಡೆಸಿದರು. ಇದಕ್ಕೂ‌ ಮೊದಲು ಹುತಾತ್ಮ ಚೌಕ ಬಳಿ ಬಂದು ಎಂಇಎಸ್ ನಾಯಕರನ್ನು ಭೇಟಿಯಾದರು. ಬಳಿಕ ಶಿವಾಜಿ ಮಹಾರಾಜರ …

Read More »

ಅಪ್ಪನ ಹತ್ಯೆಗೈದು 30 ತುಂಡು ತುಂಡಾಗಿ ಕತ್ತರಿಸಿ ಮೃತದೇಹ ಎಸೆದ ಮಗ.. ಬೆಚ್ಚಿಬಿದ್ದ ಬಾಗಲಕೋಟೆ

ಬಾಗಲಕೋಟೆ: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಶ್ರದ್ಧಾ ಹತ್ಯೆ ಮಾದರಿಯಲ್ಲೇ ಪಾಪಿ ಮಗನೊಬ್ಬ ತಂದೆಯನ್ನ ಹತ್ಯೆ ಮಾಡಿ 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಕೊಳವೆ ಬಾವಿಗೆ ಬಿಸಾಕಿರುವ ಭಯಾನಕ ಘಟನೆ ಮುಧೋಳ ನಗರದಲ್ಲಿ ನಡೆದಿದೆ. ಮುಧೋಳದ ಪರಶುರಾಮ ಕುಳಲಿ (54) ಹತ್ಯೆಯಾದ ವ್ಯಕ್ತಿ. ಮಗ ವಿಠಲ ಕುಳಲಿ (20) ತಂದೆಯನ್ನು ರಾಡ್​ನಿಂದ ಹೊಡೆದು ಕೊಲೆ ಮಾಡಿದ ಆರೋಪಿ. ಕುಡಿದ ಮತ್ತಲ್ಲಿ ತಂದೆ ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಡಿಸೆಂಬರ್​ 6 …

Read More »

ಬಗರ್ ಹುಕುಂ ಭೂಮಿ ಸಕ್ರಮ, ಮಹತ್ವದ ಆದೇಶ

ಬೆಂಗಳೂರು, ಡಿಸೆಂಬರ್ 13; ನಗರಗಳು ಮತ್ತು ನಗರ ಪುರಸಭೆ ಪರಿಮಿತಿಯೊಳಗೆ ಬಗರ್‌ ಹುಕುಂಭೂಮಿಮಂಜೂರು ಮಾಡುವ ಕುರಿತು ಕರ್ನಾಟಕದ ಕಂದಾಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.   ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್. ಜಯರಾಮ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ನಿರ್ದಿಷ್ಟಪಡಿಸಿರುವ ಪರಿಮಿತಿಗಳಿಂದ ಅಂತರದೊಳಗೆ ಬರುವ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ ಎಂದು ಸೂಚನೆ ನೀಡಲಾಗಿದೆ.   ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಎ)ರನ್ವಯ ವಿಧಾನಸಭಾ ಕ್ಷೇತ್ರವಾರು ಬಗ‌ರ್ …

Read More »

ಆವರಗೆರೆಯಲ್ಲಿ ಹೊರರೋಗಿಗಳ ಸೇವೆಗೆ ‘ನಮ್ಮ ಕ್ಲಿನಿಕ್‌’

ದಾವಣಗೆರೆ : ನಗರದೊಳಗಿನ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಸುಲಭದಲ್ಲಿ ಸಿಗುವಂತಾಗಲು ‘ನಮ್ಮ ಕ್ಲಿನಿಕ್‌’ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ದಾವಣಗೆರೆಯ ಆವರಗೆರೆಯಲ್ಲಿ ಜಿಲ್ಲೆಯ ಮೊದಲ ‘ನಮ್ಮ ಕ್ಲಿನಿಕ್‌’ ಉದ್ಘಾಟನೆಗೆ ಸಿದ್ಧವಾಗಿದೆ. ಎಂಬಿಬಿಎಸ್‌ ವೈದ್ಯರು ಒಬ್ಬರು, ಶುಶ್ರುಷಕರೊಬ್ಬರು, ಲ್ಯಾಬ್‌ ಟೆಕ್ನಿಷಿಯನ್‌ ಒಬ್ಬರು, ಡಿ ಗ್ರೂಪ್‌ ನೌಕರರೊಬ್ಬರು ಒಟ್ಟು ನಾಲ್ವರು ಈ ‘ನಮ್ಮ ಕ್ಲಿನಿಕ್‌’ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸೋಮವಾರದಿಂದ ಶನಿವಾರದ ವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ, ಮಧ್ಯಾಹ್ನ 1.45ರಿಂದ ಸಂಜೆ 4.30ರವರೆಗೆ ಈ …

Read More »