Breaking News

ರಾಜಕೀಯ

ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಿ ಅಂತ ಹೇಳಿದ್ದು ಚಂದ್ರಶೇಖರ ಶ್ರೀಗಳು :C.M.ಡಿಸ್ಟರ್ಬ್ಡ್

ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ತಲುಪಿದ್ದಾರೆ. ದೆಹಲಿ ಭೇಟಿಯ ಉದ್ದೇಶವನ್ನು ಮುಖ್ಯಮಂತ್ರಿಯವರು ಬೆಳಗ್ಗೆ ಬೆಂಗಳೂರಲ್ಲಿ ಹೇಳಿದ್ದರು. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಂಜೂರು ಮಾಡಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮತ್ತು ಅವುಗಳಿಗಾಗಿ ಅನುದಾನ ಮಂಜೂರು ಮಾಡಿಸಿಕೊಳ್ಳುವ ಬಗ್ಗೆ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. ಇಂದು ಬೆಂಗಳೂರಲ್ಲಿ ಚಂದ್ರಶೇಖರ ಶ್ರೀಗಳು ಆಡಿದ ಮಾತಿನ ಬಗ್ಗೆ ಶಿವಕುಮಾರ್ ಸಮ್ಮುಖದಲ್ಲೇ …

Read More »

ಹಿರಿಯ ಸಹಕಾರಿ ಧುರೀಣ ರಾವಸಾಹೇಬ ಪಾಟೀಲ ನಿವಾಸಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಭೇಟಿ- ಕುಟುಂಬಸ್ತರಿಗೆ ಸಾಂತ್ವನ

ಹಿರಿಯ ಸಹಕಾರಿ ಧುರೀಣ ರಾವಸಾಹೇಬ ಪಾಟೀಲ ನಿವಾಸಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಭೇಟಿ- ಕುಟುಂಬಸ್ತರಿಗೆ ಸಾಂತ್ವನ ಗೋಕಾಕ- *ಕಳೆದ ಮಂಗಳವಾರದಂದು ನಿಧನರಾದ ಅರಿಹಂತ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷರು, ಸಹಕಾರಿ ರಂಗದ ಹಿರಿಯ ಮುಖಂಡರೂ ಆಗಿದ್ದ ರಾವಸಾಹೇಬ್ ಪಾಟೀಲ ಅವರ ಬೋರಗಾಂವ ನಿವಾಸಕ್ಕೆ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಿಂದು ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಸೂಚಿಸಿದರು. ಈ ಸಂದರ್ಭದಲ್ಲಿ ದಿವಂಗತರ ಪುತ್ರರಾದ ಉದ್ಯಮಿಗಳಾದ ಅಭಿನಂದನ್ ಪಾಟೀಲ, ಉತ್ತಮ …

Read More »

ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ 13ಕ್ಕೂ ಹೆಚ್ಚು ಜನ ಸಾವು

ಹಾವೇರಿ, ಜೂನ್​ 28: ಬ್ಯಾಡಗಿ (Byadagi) ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 13 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ (TT Vehicle) ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಟಿಟಿ ವಾಹನದಲ್ಲಿದ್ದ 7 ಮಂದಿ ಮಹಿಳೆಯರು ಸೇರಿದಂತೆ 13 ಜನ ಮೃತಪಟ್ಟಿದ್ದಾರೆ. ಪರಶುರಾಮ್ ​​(45), ಭಾಗ್ಯ (40), ನಾಗೇಶ (50), ವಿಶಾಲಾಕ್ಷಿ (40), ಅರ್ಪಿತಾ (18), ಸುಭದ್ರಾ …

Read More »

ದರ್ಶನ್ ವಿರುದ್ಧ ಸುಮಾರು 30ಕ್ಕೂ ಅಧಿಕ ಸಾಕ್ಷ್ಯಗಳು ಸಿಕ್ಕಿವೆ?

ಕೊಲೆ ಕೇಸ್​ನಲ್ಲಿ ದರ್ಶನ್ ಪಾತ್ರದ ಬಗ್ಗೆ ಸಿಕ್ಕಿವೆ 30ಕ್ಕೂ ಅಧಿಕ ಸಾಕ್ಷಿ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಕೊಲೆಯಲ್ಲಿ ಅವರ ಪಾತ್ರವೂ ಇದೆ ಎನ್ನಲಾಗಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ದರ್ಶನ್ ವಿರುದ್ಧ ಸುಮಾರು 30ಕ್ಕೂ ಅಧಿಕ ಸಾಕ್ಷ್ಯಗಳು ಸಿಕ್ಕಿವೆ ಎಂದು ವರದಿ ಆಗಿದೆ. ನಟ ದರ್ಶನ್ ಅವರು ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಮಾಡಿದ ಆರೋಪವನ್ನು …

Read More »

ಧಾರವಾಡ ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವ: ಶ್ರೀಯಾಗೆ 3 ಚಿನ್ನದ ಪದಕ

ಧಾರವಾಡ ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವ: ಶ್ರೀಯಾಗೆ 3 ಚಿನ್ನದ ಪದಕ ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 37ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ‌ ಥಾವರಚಂದ್ ಗೆಹ್ಲೋತ್ ಅವರು ಪದವೀಧರರಿಗೆ ಪ್ರಮಾಣ ಪತ್ರ ಪದಾನ ಮಾಡಿದರು. ಬಿ.ಎಸ್ಸಿ (ಆನರ್ಸ್‌) ಕೃಷಿ ಸ್ನಾತಕ ಪದವಿ ಕೋರ್ಸ್‌ನಲ್ಲಿ ಶ್ರೀಯಾ ಎಸ್.ಕರಿ ಅವರು ಮೂರು ಚಿನ್ನದ ಪದಕ ಪಡೆದಿದ್ದಾರೆ. ವಿಶ್ವವಿದ್ಯಾಲಯದಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 933 ಮಂದಿ ವಿವಿಧ ಪದವಿ ಪೂರೈಸಿದ್ದಾರೆ. ಪಿಎಚ್.ಡಿ 69, ಸ್ನಾತಕೋತ್ತರ …

Read More »

ಕೆಟ್ಟು ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ: ಓರ್ವ ಸ್ಥಳದಲ್ಲೇ ಮೃತ್ಯು, 10ಕ್ಕೂ ಹೆಚ್ಚು ಗಾಯ

ಕಾನಾಹೊಸಹಳ್ಳಿ,-ವಿಜಯನಗರ: ಕಾನಾಹೊಸಹಳ್ಳಿ ಠಾಣಾ ವ್ಯಾಪ್ತಿಯ ಆಲೂರು ಹುಲಿಕೆರೆ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ50 ರಲ್ಲಿ ಗುರುವಾರ ತಡರಾತ್ರಿ ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲ್ಲರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಒಬ್ಬರು ಸಾವನ್ನಪ್ಪಿದ್ದು , ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಕೃಷ್ಣಪ್ಪ (62 ವರ್ಷ) ಮೃತ ದುರ್ದೈವಿಯಾಗಿದ್ದು ಟಿಟಿ ವಾಹನವು ಕಲಬುರಗಿ ಯಿಂದ ಚಿಕ್ಕಬಳ್ಳಾಪುರ ತಾಲೂಕಿನ ಆರೋಡಿ ಗ್ರಾಮಕ್ಕೆ ತೆರಳುತ್ತಿದ್ದು ಕಲಬರುಗಿಯಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ಸ್ವ ಗ್ರಾಮ ಆರೋಡಿಗೆ ವಾಪಸು …

Read More »

ರಾಜ್ಯದಲ್ಲಿ ಆತಂಕ ಮೂಡಿಸಿದ ‘ಡೇಂಘಿ’ ಜ್ವರ : ಹಾವೇರಿಯಲ್ಲಿ ಮಹಾಮಾರಿಗೆ ಮೊದಲ ಬಲಿ!

ಹಾವೇರಿ : ರಾಜ್ಯದಲ್ಲಿ ಡೇಂಘಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ಹಾವೇರಿ ಜಿಲ್ಲೆಯಲ್ಲಿ ಡೇಂಘಿ ಮಹಾಮಾರಿಗೆ ಮೊದಲ ಬಲಿಯಾಗಿದ್ದು, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದ 30 ವರ್ಷದ ಮಹಿಳೆ ಡೇಂಘಿಗೆ ಸಾವನ್ನಪ್ಪಿದ್ದಾರೆ. ಹೌದು ಮಹಾಮಾರಿ ಡೇಂಘಿಗೆ 30 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.ಹಾನಗಲ್ ತಾಲೂಕಿನ ನರೇಗಲ್ಲ ಗ್ರಾಮದ ಗೌಸಿಯ (30) ಎಂಬ ಮಹಿಳೆ ಇದೀಗ ಸಾವನ್ನಪ್ಪಿದ್ದಾರೆ.ಹಾವೇರಿ ನಗರದ ಮಲ್ಲಾಡದ ಆಸ್ಪತ್ರೆಯಲ್ಲಿ ನಿನ್ನೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ತೀವ್ರ ಜ್ವರದಿಂದ …

Read More »

3 ದಿನ ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ

ಬೆಂಗಳೂರು : ರಾಜ್ಯಕ್ಕೆ ಬರುವ ಅನುದಾನಗಳ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನಿಂದ ಮೂರು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲದೆ ನಾಳೆ ಮೂರನೇ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅಭಿನಂದನೆ ತಿಳಿಸಲಿದ್ದಾರೆ. ಹೌದು ಇಂದಿನಿಂದ ಮೂರು ದಿನಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯಕ್ಕೆ ಬರಬೇಕಿರುವ ಅನುದಾನಗಳ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಿದ್ದಾರೆ. ಕೇಂದ್ರ ಸಚಿವರನ್ನು ಭೇಟಿಯಾಗಿ ಮುಖ್ಯಮಂತ್ರಿ …

Read More »

ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ನೌಕರಿ ನೀಡಲು ಒತ್ತಾಯ

ಇಳಕಲ್: ಕೊಲೆಯಾಗಿರುವ ಚಿತ್ರದುರ್ಗದ ರೇಣುಕಸ್ವಾಮಿ ಅವರ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು. ಕೊಲೆ ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ, ಇಲ್ಲಿಯ ಕಂಠಿ ವೃತ್ತದಲ್ಲಿ ಮಂಗಳವಾರ ವೀರಮಾಹೇಶ್ವರ ಜಂಗಮ ಸಮಾಜದವರು ತಹಶೀಲ್ದಾರ್‌ ಸತೀಶ ಕೂಡಲಗಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಗರದ ಪ್ರವಾಸಿ ಮಂದಿರ ಹತ್ತಿರದ ರೇಣುಕಾಚಾರ್ಯ ವೃತ್ತದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಬಸ್ ನಿಲ್ದಾಣ ಮಾರ್ಗವಾಗಿ ಕಂಠಿ ವೃತ್ತ ತಲುಪಿದರು. ಸಂದೇಶಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್‌ …

Read More »

ವೀರಶೈವ ಲಿಂಗಾಯತ ವಧು-ವರರ ಮುಖಾಮುಖಿ ಸಮಾವೇಶ

ಬೆಂಗಳೂರು: ಡಾಕ್ಟರ್ಸ್‌, ಇಂಜಿನಿಯರ್ಸ್‌, ವಿವಿಧ ಪದವೀಧರರು, ಎನ್‌ಆರ್‌ಐಗಳು ಹಾಗೂ ಇನ್ನಿತರೆ ಎಲ್ಲ ವೀರಶೈವ ಲಿಂಗಾಯತ ವಧು-ವರರ ಮಾಸಿಕ ಮುಖಾ-ಮುಖಿ ಸಮಾವೇಶವು ಜೂ.30 ಭಾನುವಾರ ಮಧ್ಯಾಹ್ನ 2ಕ್ಕೆ ಹಮ್ಮಿಕೊಂಡಿರುವುದಾಗಿ ಲಿಂಗಾಯತ ಕಲ್ಯಾಣ ಟ್ರಸ್ಟ್ ತಿಳಿಸಿದೆ. ಗಾಂಧಿನಗರದ 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಸಮಾವೇಶ ನಡೆಯಲಿದ್ದು, ಆಸಕ್ತ ವಧು-ವರರು ಮತ್ತು ಪೋಷಕರು ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬಹುದು. ಆನ್‌ಲೈನ್ ಮುಖಾಂತರ ಹೆಸರು ನೋಂದಾಯಿಸಲು www.lingayathkalyanatrust.org ಲಾಗ್‌ಇನ್ ಆಗಿ. ಹೆಚ್ಚಿನ ಮಾಹಿತಿಗೆ ದೂ: 080 …

Read More »