Breaking News

ರಾಜಕೀಯ

ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ:ಡಾ.ಎಸ್.ಬಿ.ಬೊಮ್ಮನಹಳ್ಳಿ

ಬೆಳಗಾವಿ, : ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹೋಟೆಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ. ಕ್ವಾರಂಟೈನ್ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ. ಎಲ್ಲ ಕ್ವಾರಂಟೈನ್ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ವೈಯಕ್ತಿಕ ಸ್ವಚ್ಛತೆ ಸೇರಿದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಕ್ವಾರಂಟೈನ್ …

Read More »

ಬೆಳಗಾವಿಯಲ್ಲಿ 5 ಹೊಸ ಕೊರೊನ ಸೋಂಕಿತರ ಪ್ರಕರಣ,ಒಟ್ಟೂ 41 ಜನರಿಗೆ ಸೋಂಕು

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ರಾಜ್ಯದಲ್ಲಿ ಇಂದು ಹೊಸದಾಗಿ ಮತ್ತೆ 44 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ 5 ಹೊಸ ಕೊರೊನ ಸೋಂಕಿತರ ಪ್ರಕರಣ ಕಂಡುಬಂದಿದ್ದು, ಇವರಲ್ಲಿ ಮೂವರನ್ನು ಐಸಿಯುನಲ್ಲಿ ಇರಿಸಲಾಗಿದೆ. ಇದರಿಂದಾಗಿ ಬೆಳಗಾವಿಯಲ್ಲಿ ಒಟ್ಟೂ 41 ಜನರಿಗೆ ಸೋಂಕು ತಗುಲಿದಂತಾಗಿದೆ. ಬೆಂಗಳೂರಿನಲ್ಲಿ 1 ಹೊಸ ಪ್ರಕರಣ ಪತ್ತೆಯಾಗಿದೆ., ಬೆಳಿಗ್ಗೆಯಷ್ಟೇ ರಾಜ್ಯದಲ್ಲಿ 38 ಪ್ರಕರಣ …

Read More »

ವಿದೇಶಿ ನೆಲದಲ್ಲಿ ಐಪಿಎಲ್ ಆಯೋಜಿಸುವ ಕುರಿತು ಪ್ರತಿಕ್ರಿಯೆ ನೀಡಿರುವ ಆರ್‌ಸಿಬಿ ಕೋಚ್

ಮುಂಬೈ: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಐಪಿಎಲ್ 2020 ಟೂರ್ನಿಯನ್ನು ಬಿಸಿಸಿಐ ಅಧಿಕೃತವಾಗಿ ಮುಂದೂಡಿದೆ. ಶೆಡ್ಯೂಲ್ ಅನ್ವಯ ಮಾರ್ಚ್ 29 ರಿಂದ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಏ.15ಕ್ಕೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ ದೇಶಾದ್ಯಂತ ಲಾಕ್‍ಡೌನ್ ಮೇ 3ರ ವರೆಗೂ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಮತ್ತೆ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಕಾರಣ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಆದರೂ ದೇಶ ಸಹಜ ಸ್ಥಿತಿಗೆ …

Read More »

ಲಾಕ್ ಡೌನ‌ನಿಂದ ಬಾಲಕನ‌ ಚಿಕಿತ್ಸೆಗಾಗಿ ವಾಹನ‌ ಸಿಗದೆ ಕುಟುಂಬಸ್ಥರ ಪರದಾಟ. ೫ ರೂಪಾಯಿ ನಾಣ್ಯ ನುಂಗಿದ ಬಾಲಕ.

  ದೇಶಾದ್ಯಂತ ಕೊರೋನಾ ಸೋಂಕು ಹರಡುತ್ತಿರುವ ಹಿನ್ನಲೆ ಲಾಕ್ ಡೌನ.ಲಾಕ್ ಡೌನ‌ನಿಂದ ಬಾಲಕನ‌ ಚಿಕಿತ್ಸೆಗಾಗಿ ವಾಹನ‌ ಸಿಗದೆ ಕುಟುಂಬಸ್ಥರ ಪರದಾಟ.೫ ರೂಪಾಯಿ ನಾಣ್ಯ ನುಂಗಿದ ಬಾಲಕ. ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ಸೈದಾಪೂರ ಸಮೀರವಾಡಿ ಗ್ರಾಮಸಲ್ಲಿ ಘಟನೆ.ನಾಣ್ಯ ನುಂಗಿದ ಕುತಬು ಎನ್ನುವ ಬಾಲಕ. ಅಂಬ್ಯುಲೆನ್ಸ್ ಸಿಗದೇ ಕಾರಣ ಕುಟುಂಬಸ್ಥರಲ್ಲಿ ಆತಂಕ.ಗ್ರಾಮದ ಪಂಚಾಯತ ಸದಸ್ಯ ಓಸ್ವಾಲ್ ಕಾರು ತೆಗೆದುಕೊಂಡು ಬಂದು ಬಾಲಕನನ್ನು ಆಸ್ಪತ್ರೆ ರವಾನೆ ಪೋನ ಕರೆಗೆ ತಕ್ಷಣ ನೇರವಿಗೆ ಬಂದ …

Read More »

ಕೊರೊನಾ ಲಾಕ್‍ಡೌನ್ ಹಿನ್ನೆಲೆ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸಕ್ಕೆ ನೆಲಮಂಗಲ ಪೊಲೀಸರು

ಬೆಂಗಳೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸಕ್ಕೆ ನೆಲಮಂಗಲ ಪೊಲೀಸರು ಮುಂದಾಗಿದ್ದಾರೆ. ಕರುಣೆಯ ಗೋಡೆ ಎಂಬ ನೂತನ ಯೋಜನೆಯನ್ನು ಉದ್ಘಾಟನೆ ಮಾಡಿ ಬಡ ಜೀವಗಳಿಗೆ ನೆರವಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಸ್ ನಿಲ್ದಾಣದ ಬಳಿ ಕರುಣೆಯ ಗೋಡೆ ಉದ್ಘಾಟಿಸಲಾಗಿದ್ದು, ತಹಶೀಲ್ದಾರ್ ಶ್ರೀನಿವಾಸಯ್ಯ, ಡಿವೈಎಸ್‍ಪಿ ಮೋಹನ್ ಕುಮಾರ್ ಮತ್ತು ಪಿಎಸ್‍ಐ ಮಂಜುನಾಥ್‍ರಿಂದ ಯೋಜನೆಗೆ ಚಾಲನೆ ದೊರಕಿದೆ. ಈ ಕರುಣೆಯ ಗೋಡೆಯಲ್ಲಿ ಬ್ರೆಡ್, ರಸ್ಕ್, ಬಿಸ್ಕತ್, ಹಣ್ಣುಗಳು, ನೀರಿನ …

Read More »

ಮೈಸೂರಿನಲ್ಲಿ ಒಬ್ಬನಿಂದ 11 ಮಂದಿಗೆ ಸೋಂಕು – ರಾಜ್ಯದಲ್ಲಿ ಒಂದೇ ದಿನ 38 ಮಂದಿಗೆ ಕೊರೊನಾ

ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವತ್ತು ಒಂದೇ ದಿನ 38 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 353ಕ್ಕೆ ಏರಿಕೆ ಕಂಡಿದೆ. ಬೆಳಗ್ಗೆ ಒಟ್ಟು 38 ಜನರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಮೈಸೂರಿನಲ್ಲೇ ಇಂದು 12 ಮಂದಿಗೆ ಕೊರೊನಾ ದೃಢವಾಗಿದೆ. ಇನ್ನೂ ಬಳ್ಳಾರಿಯಲ್ಲಿ ಒಬ್ಬ ಸೋಂಕಿತನಿಂದ ಏಳು ಮಂದಿಗೆ ಕೊರೊನಾ ಬಂದಿದೆ. ಬೆಂಗಳೂರಿನಲ್ಲಿ 9 …

Read More »

ಬುದ್ದಿ ಕಲಿಯದ ಜನರೇ ಎಚ್ಚರ ಎಚ್ಚರ, ಮನೆಯಿಂದ ಹೊರಗೆ ಬಂದ್ರೆ ಸಾಯ್ತಿರಾ..!

ಬೆಂಗಳೂರು,ಏ.17- ನಮ್ ಜನಕ್ಕೆ ಅದೇನಾಗಿದೆಯೋ ಏನೋ… ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸೋಂಕಿತರು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸಾವನ್ನಪ್ಪುವವರ ಪ್ರಮಾಣವೂ ಹೆಚ್ಚಾಗುತ್ತಿದೆ. ಹೀಗಿದ್ದರೂ ಜನರ ಅನಗತ್ಯ ಓಡಾಟ ನಿಂತಿಲ್ಲ. ಹೀಗಿದ್ದರೂ ಲಾಕ್‍ಡೌನ್ ನಿಯಮಗಳನ್ನು ಪಾಲಿಸದೆ ಮನದಂತೆ ಓಡಾಡುತ್ತಿರುವ ಪರಿ ನೋಡಿದರೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂಬ ಆತಂಕ ಎದುರಾಗಿದೆ. ಮನುಕುಲಕ್ಕೆ ಕಂಟಕವಾಗಿರುವ ಮಹಾಮಾರಿಯನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾ.24ರಂದು 21 ದಿನಗಳ ಕಾಲ …

Read More »

ತುಮಕೂರು ಜಿಲ್ಲೆ ಜನರಿಗೆ ಬಿಗ್ ರಿಲೀಫ್.

ತುಮಕೂರು,ಏ.17- ದೇಶಾದ್ಯಂತ ಕೋರಾನಾ ಸೋಂಕು ಎಲ್ಲೆಡೆ ಅಟ್ಟಹಾಸ ದಿಂದ ಮೆರೆಯುತ್ತಿದ್ದ ರೆ ತುಮಕೂರಿನಲ್ಲಿ ಕಳೆದ 28 ದಿನಗಳ ಹಿಂದೆ ಶಿರಾದಲ್ಲಿ ವೃದ್ದನೊಬ್ಬ ಮೃತಪಟ್ಟಿದ್ದ ಈತನ ಹಿಸ್ಟರಿ ನೋಡಿ ತುಮಕೂರು ಜಿಲ್ಲಾಡಳಿತ ಬೆಚ್ತಿಬಿದ್ದಿತ್ತು . ದೆಹಲಿಯ ಜಮಾತ್ ಹೋಗಿ ಬಂದಿದ್ದು ಹಾಗೂ ಮೂರು ಜನ ಪತ್ನಿಯರು 16 ಜನ ಮಕ್ಕಳುನ್ನು ಹೊಂದಿದ್ದ ವೃದ್ದ ಮೃತಪಟ್ಟ ನಂತರ ಅವರ ಕುಟುಂಬದವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅದರೆ ಅದೃಷ್ಟವಶಾತ್ ಅತನ ಮಗನಿಗೆ …

Read More »

ಲಾಕ್‍ಡೌನ್ ಹಿನ್ನೆಲೆಯಲ್ಲಿ ಏ.20ರಿಂದ ಓಡಾಟಕ್ಕೆ ಪಾಸ್ ಅವಶ್ಯಕತೆ ಇಲ್ಲ.: ಅಶ್ವತ್ಥನಾರಾಯಣ್

ಬೆಂಗಳೂರು, ಏ.17- ಲಾಕ್‍ಡೌನ್ ಹಿನ್ನೆಲೆಯಲ್ಲಿ ಏ.20ರಿಂದ ಓಡಾಟಕ್ಕೆ ಪಾಸ್ ಅವಶ್ಯಕತೆ ಇರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ. ಐಟಿ, ಬಿಟಿ ಉದ್ದಿಮೆಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಯಥಾ ಪ್ರಕಾರ ಇರುತ್ತದೆ. ಇದು ಎಷ್ಟು ದಿನ ಅನ್ನೋದು ಗೊತ್ತಿಲ್ಲ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವು ಕೆಲಸ ಕಾರ್ಯ ಆರಂಭಿಸಬೇಕಿದೆ ಎಂದು ಹೇಳಿದ್ದಾರೆ. ಐಟಿ ನೌಕರರ ಓಡಾಟಕ್ಕೆ ಪಾಸ್ ಅಗತ್ಯ ಉದ್ಭವ …

Read More »

ಬೆಂಗಳೂರಿಗರೇ ಹುಷಾರ್, ಹೊಸಬರಿಗೆ ಮನೆ ಬಾಡಿಗೆ ಕೊಡಬೇಡಿ..!

ಬೆಂಗಳೂರು,ಏ.17-ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನು ತಡೆಗಟ್ಟಲು ಮುಂದಾಗಿರುವ ಬಿಬಿಎಂಪಿ ಅಕ್ಕಪಕ್ಕದ ಮನೆಗಳಿಗೆ ಹೊಸಬರು ಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಕೆಲವು ವ್ಯಕ್ತಿಗಳು ಮನೆ ಖಾಲಿ ಮಾಡಿಕೊಂಡು ಬೇರೆ ವಾರ್ಡ್‍ಗಳಿಗೆ ತೆರಳುತ್ತಿರುವುದು ಸಾಬೀತಾದ ನಂತರ ಬಿಬಿಎಂಪಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಹೊಸಬರು ಮನೆ ಕೇಳಿಕೊಂಡು ಬಂದರೆ ಬಾಡಿಗೆ ನೀಡಬೇಡಿ. ಒಂದು ವೇಳೆ ನಿಮ್ಮ ಅಕ್ಕಪಕ್ಕದ ಮನೆಗಳಿಗೆ ಹೊಸಬರು ಬಂದರೆ …

Read More »