Breaking News
Home / ಜಿಲ್ಲೆ / ಬೆಳಗಾವಿಯಲ್ಲಿ 5 ಹೊಸ ಕೊರೊನ ಸೋಂಕಿತರ ಪ್ರಕರಣ,ಒಟ್ಟೂ 41 ಜನರಿಗೆ ಸೋಂಕು

ಬೆಳಗಾವಿಯಲ್ಲಿ 5 ಹೊಸ ಕೊರೊನ ಸೋಂಕಿತರ ಪ್ರಕರಣ,ಒಟ್ಟೂ 41 ಜನರಿಗೆ ಸೋಂಕು

Spread the love

ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ರಾಜ್ಯದಲ್ಲಿ ಇಂದು ಹೊಸದಾಗಿ ಮತ್ತೆ 44 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ.

ಬೆಳಗಾವಿಯಲ್ಲಿ 5 ಹೊಸ ಕೊರೊನ ಸೋಂಕಿತರ ಪ್ರಕರಣ ಕಂಡುಬಂದಿದ್ದು, ಇವರಲ್ಲಿ ಮೂವರನ್ನು ಐಸಿಯುನಲ್ಲಿ ಇರಿಸಲಾಗಿದೆ. ಇದರಿಂದಾಗಿ ಬೆಳಗಾವಿಯಲ್ಲಿ ಒಟ್ಟೂ 41 ಜನರಿಗೆ ಸೋಂಕು ತಗುಲಿದಂತಾಗಿದೆ. ಬೆಂಗಳೂರಿನಲ್ಲಿ 1 ಹೊಸ ಪ್ರಕರಣ ಪತ್ತೆಯಾಗಿದೆ.,

ಬೆಳಿಗ್ಗೆಯಷ್ಟೇ ರಾಜ್ಯದಲ್ಲಿ 38 ಪ್ರಕರಣ ಪತ್ತೆಯಾಗಿತ್ತು. ಆದರೆ ಸಂಜೆ ವೇಳೆಗೆ ಮತ್ತೆ 6 ಜನರಲ್ಲಿ ಹೊಸದಾಗಿ ಕೊರೊನ ಸೋಂಕು ಇರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಘೋಷಿಸಿದ್ದರೂ ಕೂಡ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಇಂದು ಸಂಜೆ ಬಿಡುಗಡೆಯಾಗಿರುವ ಬುಲಿಟೀನ್ ನಲ್ಲಿ ಐವರಿಗೆ ಸೊಂಕು ಇರುವದು ದೃಡವಾಗಿದ್ದು ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ

ಇಂದು ಕೊರೋನಾ ಸೊಂಕು ಇರುವ ಐದೂ ಜನರು ತಬ್ಲೀಗ್ ಜಮಾತಿನ ನಂಟು ಹೊಂದಿದವರು ಎಂದು ತಿಳಿದು ಬಂದಿದೆ.

ಇಂದು ಪತ್ತೆಯಾಗಿರುವ ಐದು ಜನ ಬೆಳಗಾವಿ ಪಕ್ಕದ ಬೆಳಗುಂದಿ ಗ್ರಾಮದವರು


Spread the love

About Laxminews 24x7

Check Also

ಸಣ್ಣ ರಾಜ್ಯಗಳು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿವೆ: ಸತೀಶ ಜಾರಕಿಹೊಳಿ

Spread the love ಬೆಳಗಾವಿ: ‘ಸಣ್ಣ ರಾಜ್ಯಗಳು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ