ಉಡುಪಿ: ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಹೇಳಿದರು. ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪರಮೇಶ್ವರ್ ಪೆಟ್ರೋಲ್, ಡೀಸೆಲ್, ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲೂ ಬಿಜೆಪಿ ಗೆಲುವು ಸಾಧಿಸಿರುವುದು ಅಧಿಕಾರ ದುರುಪಯೋಗದಿಂದ ಎಂದರು. ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷವನ್ನು ನಿರಾಶೆಗೊಳಿಸಿಲ್ಲ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ …
Read More »ಖಾನಾಪುರ ಎಡಿಎಲ್ಆರ್ ಕಚೇರಿಯ ಸರ್ವೇಯರ್ ಎಸಿಬಿ ಬಲೆಗೆ
ಖಾನಾಪುರ – ಇಲ್ಲಿಯ ಎಡಿಎಲ್ಆರ್ ಕಚೇರಿಯ ಸರ್ವೇಯರ್ ಒಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ. ತಾಲೂಕಿನ ಸುರಾಪುರದ ಶಶಿಕಾಂತ ತಳವಾರ ಎನ್ನುವವರಿಂದ 6 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಡಿಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಯಿತು. ಒಟ್ಟೂ 10 ಸಾವಿರ ರೂ. ಲಂಚ ಕೇಳಿದ್ದ ಸರ್ವೇಯರ್ ಶಶಿಕಾಂತ ಮದವಾಲ ಈ ಮೊದಲು 4 ಸಾವಿರ ರೂ. ಪಡೆದಿದ್ದ. ಇದೀಗ ಕಚೇರಿಯಲ್ಲೇ 6 ಸಾವಿರ ರೂ. ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ …
Read More »ಗಣೇಶೋತ್ಸವಕ್ಕೆ ಹೊಸ ಗೈಡ್ ಲೈನ್; 5 ದಿನದ ಬದಲು 3 ದಿನಕ್ಕೆ ಸೀಮಿತ; ಷರತ್ತಿನ ಮೇಲೆ ಷರತ್ತು ಹಾಕಿದ ಬಿಬಿಎಂಪಿ
ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕದ ನಡುವೆ ಇದೀಗ ನಿಫಾ ವೈರಸ್ ಭೀತಿ ಕೂಡ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಬಿಬಿಎಂಪಿ ಷರತ್ತುಗಳ ಮೇಲೆ ಷರತ್ತು ವಿಧಿಸಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ 5 ದಿನಗಳ ಕಾಲ ಅವಕಾಶ ನೀಡಿತ್ತು. ಆದರೆ ಬಿಬಿಎಂಪಿ ಬೆಂಗಳೂರಿಗೆ ಪ್ರತ್ಯೇಕ ಗಣೇಶೋತ್ಸವ ಗೈಡ್ ಲೈನ್ ಪ್ರಕಟಿಸಿದ್ದು, 3 ದಿನಗಳು ಮಾತ್ರ ಗಣೇಶೋತ್ಸವ ಆಚರಿಸಲು ಅನುಮತಿ ನೀಡಿದೆ. ಹೊಸ ಗೈಡ್ ಲೈನ್: ವಾರ್ಡ್ ಗೆ …
Read More »ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಬುಧವಾರ ಬೆಳಗಾವಿಗೆ
ಬೆಳಗಾವಿ – ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಬುಧವಾರ ಬೆಳಗಾವಿಗೆ ಆಗಮಿಸಲಿದ್ದಾರೆ. ಸಚಿವರಾದ ನಂತರ ಇದು ಬೆಳಗಾವಿಗೆ ಅವರ ಮೊದಲ ಭೇಟಿಯಾಗಿದೆ. ಕಂಗ್ರಾಳಿಯ ಕೆಎಸ್ ಆರ್ ಪಿ ತರಬೇತಿ ಶಾಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ನಡೆಯಲಿರುವ ಸಶಸ್ತ್ರ ಮೀಸಲು ಪೊಲೀಸ್ ಕಾನ್ ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮ ಪಥ ಸಂಚಲನ ಕಾರ್ಯಕ್ರಮಕ್ಕೆ ಅರಗ ಜ್ಞಾನೇಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕರ್ನಾಟಕ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ …
Read More »ಮಕ್ಕಳ ಮನೋಸ್ಥಿತಿ ಅರಿತು ಶಿಕ್ಷಣ ನೀಡಿ : ಸಚಿವ ಗೋವಿಂದ ಕಾರಜೋಳ
ಬಾಗಲಕೋಟೆ: ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಮನೋವಿಜ್ಞಾನಿಯಾಗಿ, ತತ್ವಜ್ಞಾನಿಯಾಗಿ ಮಕ್ಕಳ ಮನಸ್ಥಿತಿ ಅರಿತು ಶಿಕ್ಷಣ ನೀಡುವಂತಾಗಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಕೇವಲ ಸಂಬಳಕ್ಕಾಗಿ ಕೆಲಸ ಮಾಡದೇ ಉತ್ತಮ ಭವಿಷ್ಯ ನಿರ್ಮಿಕಸುವ ಕಾರ್ಯವಾಗಬೇಕು. …
Read More »200 ಕೋಟಿ ಸುಲಿಗೆ ಪ್ರಕರಣ: ‘ಮದ್ರಾಸ್ ಕೆಫೆ’ ನಟಿ ಬಂಧನ
ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ, ರೂಪದರ್ಶಿ ಲೀನಾ ಮರಿಯಾ ಪೌಲ್ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವ ವಿಚಾರ ಹೊರಬಿದ್ದಿದೆ. ಉದ್ಯಮಿಯೊಬ್ಬರ ಪತ್ನಿಯಿಂದ 200 ಕೋಟಿ ಸುಲಿಗೆ ಮಾಡಲು ಯತ್ನಿಸಿರುವ ಕೇಸ್‌ನಲ್ಲಿ ತನ್ನ ಬಾಯ್‌ಫ್ರೆಂಡ್‌ಗೆ ಸಹಾಯ ಮಾಡಿರುವ ಆರೋಪದಲ್ಲಿ ನಟಿಯನ್ನು ಭಾನುವಾರ (ಸೆಪ್ಟೆಂಬರ್ 5) ಅರೆಸ್ಟ್ ಮಾಡಲಾಗಿದೆ ಎಂದು ತಿಳಿದಿದೆ. ಪಿಟಿಐನಲ್ಲಿ ವರದಿಯ ಪ್ರಕಾರ, ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಎಂಸಿಒಸಿಎ (Maharashtra Control of Organised Crime (MCOCA) ಕಾಯ್ದೆ ಜಾರಿ …
Read More »ವಿಜಯಪುರ ಜಿಲ್ಲೆಯಾದ್ಯಂತ ವರುಣನ ಆರ್ಭಟ
ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಭಾರೀ ಮಳೆ ಸುರಿಯತೊಡಗಿದೆ. ಸೋಮವಾರ ಮಧ್ಯಾಹ್ನ ಆರಂಭವಾದ ಮಳೆ ಎಡಬಿಡದೆ ಸುರಿಯತೊಡಗಿದ್ದು, ಇಡೀ ಜಿಲ್ಲೆ ಮಳೆನಾಡಿನಂತಾಗಿದೆ. ವಿಜಯಪುರ, ಬಸವನ ಬಾಗೇವಾಡಿ, ತಾಳಿಕೋಟೆ, ದೇವರ ಹಿಪ್ಪರಗಿ, ತಿಕೋಟಾ, ಬಬಲೇಶ್ವರ, ಹೊರ್ತಿ, ಕೊಲ್ಹಾರ, ಇಂಡಿ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗತೊಡಗಿದೆ. ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೊಲಗಳಲ್ಲಿ ನೀರು ನಿಂತಿದ್ದು, ಬೆಳೆಗೆ ಸಮಸ್ಯೆಯಾಗುವ ಆತಂಕ ಎದುರಾಗಿದೆ. ಭಾರೀ ಮಳೆಯಿಂದ …
Read More »ಡಿ.ಕೆ.ಶಿವಕುಮಾರ್ ವಿಫಲ ಅಧ್ಯಕ್ಷ ಎಂಬುದು ಸಾಬೀತು; ಕಾಂಗ್ರೆಸ್ ಒಳಜಗಳ ಬಯಲಾಗಿದೆ; ಬಿಜೆಪಿ ರಾಜ್ಯಾಧ್ಯಕ್ಷ್ ವಾಗ್ದಾಳಿ
ಬೆಂಗಳೂರು: ಬಿ ಎಸ್ ವೈ ಮಾರ್ಗದರ್ಶನದಲ್ಲಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಟೀಲ್, ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ ಎಂಬುದು ಮತ್ತೊಮ್ಮೆ ಖಚಿತವಾಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಟೀಲ್, ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ ಎಂಬುದು ಮತ್ತೊಮ್ಮೆ ಖಚಿತವಾಗಿದೆ. ಕಾಂಗ್ರೆಸ್ ಒಳಜಗಳ ಸಾಬೀತಾಗಿದ್ದು, ಡಿ.ಕೆ.ಶಿವಕುಮಾರ್ ವಿಫಲ ಅಧ್ಯಕ್ಷ …
Read More »ಕಲಬುರಗಿ ಪಾಲಿಕೆ ಚುನಾವಣೆ: ಯಾರಿಗೂ ಸ್ಪಷ್ಟ ಬಹುಮತ ಇಲ್ಲ; ಜೆಡಿಎಸ್ ಕಿಂಗ್ ಮೇಕರ್- ಗೆದ್ದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
2021: ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಜೆಡಿಎಸ್ ಯಾರಿಗೆ ಜೈ ಅಂತಾರೋ ಅವರೇ ಪಾಲಿಕೆ ಮೇಯರ್ ಆಗಲಿದ್ದಾರೆ. ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ 27 ಸ್ಥಾನ, ಬಿಜೆಪಿ 23 ಸ್ಥಾನ, ಜೆಡಿಎಸ್ 4 ಸ್ಥಾನದಲ್ಲಿ ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಕಲಬುರಗಿ: ಕಲಬುರಗಿ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಲಭಿಸಿಲ್ಲ. ಜೆಡಿಎಸ್ ಬೆಂಬಲಿಸಿದ ಪಕ್ಷಕ್ಕೆ ಮೇಯರ್ ಸ್ಥಾನ ಸಿಗಲಿದೆ. ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಪಕ್ಷ ಕಿಂಗ್ …
Read More »20 ವರ್ಷಗಳಿಂದ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಜನಿಯರ್ ಕೊನೆಗೂ ಎತ್ತಂಗಡಿ
ಬೆಳಗಾವಿ: ಕಳೆದ ಹಲವು ವರ್ಷಗಳಿಂದ ಒಂದೇ ಜಾಗದಲ್ಲಿ ಜಾಂಡ ಹೂಡಿದ್ದ ಎಂಜನಿಯರ್ನನ್ನು 20 ವರ್ಷಗಳ ಬಳಿಕ ಕೊನೆಗೂ ಎತ್ತಂಗಡಿ ಮಾಡಲಾಗಿದೆ. ಎಸ್.ಆರ್ .ಚೌಗಲಾ ಎಂಬ ದಿನಗೂಲಿ ಎಂಜನಿಯರ್, 1995ರಲ್ಲಿ ದಿನಗೂಲಿ ಆಧಾರದ ಮೇಲೆ ಜ್ಯೂನಿಯರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಬಳಿಕ ಚೌಗಲಾ ತಮ್ಮ ಪ್ರಭಾವ ಬಳಸಿ ಇಪ್ಪತ್ತು ವರ್ಷಗಳಿಂದ ಬಹುತೇಕ ಕಾಲ ರಾಯಭಾಗ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಕುಡಚಿ ಪುರಸಭೆ, ರಾಯಭಾಗ ಪಟ್ಟಣ ಪಂಚಾಯಿತಿ, ಮುಗಳಖೋಡ, …
Read More »
Laxmi News 24×7