Breaking News

ಪತ್ನಿಗೆ ನೇಣು ಹಾಕಿ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್‌ ಮಾಡಿ ತೋರಿಸಿದ ಸೈಕೋ ಪತಿ

Spread the love

ಬಾಗಲಕೋಟೆ: ವ್ಯಕ್ತಿಯೊಬ್ಬ ಪತ್ನಿಗೆ  ನೇಣು ಹಾಕಿ ಆಕೆ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್‌ ಮಾಡಿ ತೋರಿಸಿದ ಅಮಾನವೀಯ ಘಟನೆ ಬೀಳಗಿ  ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.

ಭಾಗ್ಯಶ್ರೀ ಜಿಗಳೂರು (23) ಕೊಲೆಯಾದ ಮಹಿಳೆ. ಆಕೆಯ ಪತಿ  ಪ್ರವೀಣ್ ಜಿಗಳೂರು ಹತ್ಯೆಗೈದ ಆರೋಪಿ. ಪತ್ನಿ ಮೇಲೆ ಅನೈತಿಕ ಸಂಬಂಧದ ಅನುಮಾನದ ಮೇಲೆ ಕಟ್ಟಿಗೆಯಿಂದ ಹಲ್ಲೆಗೈದು ಆಕೆಗೆ ನೇಣು ಬಿಗಿದಿದ್ದ. ಬಳಿಕ ಆಕೆ ಪ್ರಾಣಸಂಕಟದಲ್ಲಿ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್‌ ಮಾಡಿ ತೋರಿಸಿದ್ದಾನೆ.

ಅಲ್ಲದೇ ಆಕೆ ಒದ್ದಾಡುವುದನ್ನು ವಿಡಿಯೋ ಮಾಡಿದ್ದಾನೆ. ವಿಡಿಯೋದಲ್ಲಿ ನೇಣು ಕುಣಿಕೆ ಹಿಂದೆ ಮದುವೆ ಸಮಯದ ಇಬ್ಬರ ಹೆಸರು ಸಹ ಸೆರೆಯಾಗಿದೆ.

ಪತ್ನಿ ಜಗಳವಾಡಿ ಎರಡು ತಿಂಗಳ ಹಿಂದೆ ತವರುಮನೆ ಮಹಾಲಿಂಗಪುರಕ್ಕೆ ಹೋಗಿದ್ದಳು. ಚೆನ್ನಾಗಿ ಕೂಡಿ ಬಾಳುತ್ತೇವೆ ಎಂದು ಜು.27 ರಂದು ಗಲಗಲಿಗೆ ಕರೆತಂದಿದ್ದ ಪ್ರವೀಣ. ಅದೇ ದಿನ ಸಂಜೆ ಆಕೆಯನ್ನು ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಬೀಳಗಿ ಪೊಲೀಸರು, ಎಸ್‌ಪಿ ಸಿದ್ದಾರ್ಥ್ ಗೋಯೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ