ನವದೆಹಲಿ: ಸರ್ಕಾರವು ಒಬ್ಬ ‘ಪ್ರಧಾನ್’ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಮೂಲಕ ಸ್ವತಃ ‘ಪ್ರಧಾನ ಮಂತ್ರಿ’ಯವರನ್ನು ಬಚಾವ್ ಮಾಡಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ, ಕನ್ನೌಜ್ ಸಂಸದ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಲೋಕಸಭೆಯಲ್ಲಿ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ತಡೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಯುವಜನರ ಒಗ್ಗಟ್ಟು ಮತ್ತು ಮನೋಬಲಕ್ಕೆ ನಾನು ತಲೆಬಾಗುತ್ತೇನೆ. ಯುವಕರ ಆಕ್ರೋಶಕ್ಕೆ ಬೆದರಿ ಸರ್ಕಾರ ಮಂಡಿಯೂರುವಂತಾಯಿತು. ತಾವು ಸೋಲಿಸಲಾಗದವರು ಎಂದು ಭಾವಿಸಿದ್ದ ಸರ್ಕಾರಕ್ಕೆ ‘ಜಗತ್ತು ಬಗ್ಗುತ್ತದೆ, ಬಗ್ಗಿಸುವವರು ಬೇಕು’ ಎಂಬುದನ್ನು ಯುವಕರು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳ ಈ ಹೋರಾಟಕ್ಕೆ ಪೋಷಕರಿಂದಲೂ ವ್ಯಾಪಕ ಬೆಂಬಲ ಸಿಕ್ಕಿದೆ. ಸರ್ಕಾರಗಳು ಕೇವಲ ಒತ್ತಡಕ್ಕೆ ಸಿಲುಕಿದಾಗ ಮಾತ್ರ ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ರೈತರ ಪ್ರತಿಭಟನೆಯ ವೇಳೆಯೂ ನಾವು ಇದನ್ನು ನೋಡಿದ್ದೇವೆ. ಚುನಾವಣೆ ಹತ್ತಿರ ಬಂದಾಗ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು ಎಂದು ಸ್ಮರಿಸಿದರು.
Laxmi News 24×7