Breaking News
Home / ರಾಜಕೀಯ / ಕಲಬುರಗಿ ಪಾಲಿಕೆ ಚುನಾವಣೆ: ಯಾರಿಗೂ ಸ್ಪಷ್ಟ ಬಹುಮತ ಇಲ್ಲ; ಜೆಡಿಎಸ್ ಕಿಂಗ್ ಮೇಕರ್- ಗೆದ್ದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಕಲಬುರಗಿ ಪಾಲಿಕೆ ಚುನಾವಣೆ: ಯಾರಿಗೂ ಸ್ಪಷ್ಟ ಬಹುಮತ ಇಲ್ಲ; ಜೆಡಿಎಸ್ ಕಿಂಗ್ ಮೇಕರ್- ಗೆದ್ದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

Spread the love

2021: ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಜೆಡಿಎಸ್ ಯಾರಿಗೆ ಜೈ ಅಂತಾರೋ ಅವರೇ ಪಾಲಿಕೆ ಮೇಯರ್ ಆಗಲಿದ್ದಾರೆ. ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ 27 ಸ್ಥಾನ, ಬಿಜೆಪಿ 23 ಸ್ಥಾನ, ಜೆಡಿಎಸ್ 4 ಸ್ಥಾನದಲ್ಲಿ ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

ಕಲಬುರಗಿ: ಕಲಬುರಗಿ ಪಾಲಿಕೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಲಭಿಸಿಲ್ಲ. ಜೆಡಿಎಸ್ ಬೆಂಬಲಿಸಿದ ಪಕ್ಷಕ್ಕೆ ಮೇಯರ್ ಸ್ಥಾನ ಸಿಗಲಿದೆ. ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗಿದೆ. ಕಲಬುರಗಿ ಪಾಲಿಕೆ ಮತ ಎಣಿಕೆ ಮುಕ್ತಾಯವಾಗಿದೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಜೆಡಿಎಸ್ ಯಾರಿಗೆ ಜೈ ಅಂತಾರೋ ಅವರೇ ಪಾಲಿಕೆ ಮೇಯರ್ ಆಗಲಿದ್ದಾರೆ. ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ 27 ಸ್ಥಾನ, ಬಿಜೆಪಿ 23 ಸ್ಥಾನ, ಜೆಡಿಎಸ್ 4 ಸ್ಥಾನದಲ್ಲಿ ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಘಟಾನುಘಟಿ ನಾಯಕರು ಕಲಬುರಗಿ ನಗರದಲ್ಲಿ ಟಿಕಾಣಿ ಹೂಡಿದ್ದರು. ಆದ್ರೆ ಕಲಬುರಗಿ ಜನರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಎಸ್ ಜೊತೆ ಸೇರಿ ಮೇಯರ್ ಸ್ಥಾನ ಪಡೆಯಲು‌ ಯೋಚನೆ ನಡೆದಿದೆ ಎಂದು ವಿಧಾನಸಭೆ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಈ ನಡುವೆ, ಸಂಜೆ ಐದು ಗಂಟೆಗೆ ಬಿಜೆಪಿ ನಾಯಕರು ಸುದ್ದಿಗೋಷ್ಟಿ ನಡೆಸಲಿದ್ದಾರೆ. ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ನಾಯಕರು ರಣತಂತ್ರ ಹೆಣೆಯುತ್ತಿದ್ದಾರೆ.

ಕೆಲ ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸಿದ್ದು ಕಾಂಗ್ರೆಸ್, ಬಿಜೆಪಿ ಪಕ್ಷಕ್ಕೆ ಮುಳುವಾಯ್ತೇ?
ಕಾಂಗ್ರೆಸ್ ಕೆಲ ಹಾಲಿ ಪಾಲಿಕೆ ಸದಸ್ಯರಿಗೆ ಟಿಕೆಟ್ ನೀಡಿರಲಿಲ್ಲ. ಹೀಗಾಗಿ ಅನೇಕರು ಜೆಡಿಎಸ್​ಗೆ ಹೋಗಿದ್ದರು. ವಾರ್ಡ್ ನಂಬರ್ 42 ರಿಂದ ಸ್ಪರ್ದಿಸಿ ಗೆಲವು ಸಾಧಿಸಿರೋ ಅಲಿಮುದ್ದೀನ್ ಮೊದಲು ಕಾಂಗ್ರೆಸ್​ನಲ್ಲಿದ್ದರು. ಅನೇಕರಿಗೆ ಕಾಂಗ್ರೆಸ್ ನಾಯಕರು ಟಿಕೆಟ್ ನೀಡಲು ಮೀನಾಮೇಷ ಎಣಿಸಿದ್ದರಿಂದ ಅವರು ಜೆಡಿಎಸ್​ನಿಂದ ಸ್ಪರ್ದಿಸಿ ಗೆಲುವು ಸಾಧಿಸಿದ್ದಾರೆ. ಅನೇಕ ವಾರ್ಡ್​ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಇದೇ ಕಾರಣವಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಎರಡ್ಮೂರು ವಾರ್ಡ್​ಗಳಲ್ಲಿ ಕಾಂಗ್ರೆಸ್ ಗಲುವಿನ ಸಾಧ್ಯತೆ ಕಳೆದುಕೊಂಡಿದೆ.

ಬಿಜೆಪಿ ಕೂಡ ಕೆಲವರಿಗೆ ಟಿಕೆಟ್ ನೀಡಲಿಲ್ಲ. ವಾರ್ಡ್ ನಂಬರ್ 34 ರ ವಿಶಾಲ್ ನವರಂಗ್ ಬಿಜೆಪಿ ಟಿಕೆಟ್ ಕೇಳಿದ್ದರು. ಆದ್ರೆ ಟಿಕೆಟ್ ಸಿಗದೇ ಇದ್ದಾಗ ಜೆಡಿಎಸ್ ಸೇರಿ ಗೆಲುವು ಸಾದಿಸಿದ್ದಾರೆ. ವಾರ್ಡ್ ನಂಬರ್ 36 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಶಂಭುಲಿಂಗ್ ಗೆದ್ದಿದ್ದಾರೆ. ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೂ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಗೆದ್ದಿದ್ದಾರೆ.

ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಗೆಲವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ:

ಕಾಂಗ್ರೆಸ್ 27 ಅಭ್ಯರ್ಥಿಗಳು
ವಾರ್ಡ್ 1- ಪುತಳಿ ಬೇಗಂ
ವಾರ್ಡ್ 3 – ಮಹ್ಮದ ಅಬ್ದುಲ್ ಹಮೀದ್
ವಾರ್ಡ್ 4 – ರಿಯಾಸ್ ಅಹ್ಮದ್
ವಾರ್ಡ್ 10- ಹೀನಾ ಬೇಗಂ
ವಾರ್ಡ್ 12- ಪ್ರಕಾಶ ಕಪನೂರ
ವಾರ್ಡ್ 13- ತಹಶೀನಾ ಬೇಗಂ
ವಾರ್ಡ್ 14- ಅಲಿಖಾನ್ ಮಹ್ಮದ ಖಾನ್
ವಾರ್ಡ್ 15- ನಜ್ಮಾ ಬೇಗಂ
ವಾರ್ಡ್ 17 – ಅಯಾಸ್ ಖಾನ್
ವಾರ್ಡ್ 18- ಸೈಯದ್ ಅಹ್ಮದ್
ವಾರ್ಡ್ 19- ಪರ್ವಿನ್ ಬೇಗಂ
ವಾರ್ಡ್ 20- ಫರ್ಹಾನಾಜ್ ಇಸ್ಮಾಯಿಲ್ ಖಾನ್
ವಾರ್ಡ್ 21- ಅಜ್ಮಲ್ ಗೋಲಾ
ವಾರ್ಡ್ 22- ಸೈಯದ್ ನಜ್ಮೋದೀನ್.
ವಾರ್ಡ್ 26- ಅನುಪಮಾ ರಮೇಶ ಕಮಕನೂರ
ವಾರ್ಡ್ 28- ಸೈಯಿದಾ ನಸ್ರಿನ್
ವಾರ್ಡ್ 29- ಮಹ್ಮದ ಇಮ್ರಾನ್
ವಾರ್ಡ್ 33- ರಾಗಮ್ಮ
ವಾರ್ಡ್ 39- ರೇಣುಕಾ ಪರುಶರಾಮ
ವಾರ್ಡ್ 40- ಶೇಖ ಹುಸೇನ್ ಅಬ್ದುಲ್ ಕರಿಂ
ವಾರ್ಡ್ 41 ಇರ್ಫಾನಾ ಪರ್ವಿನ್
ವಾರ್ಡ್ 43 ವರ್ಷಾ ರಾಜು ಜಾನೆ, ಕಾಂಗ್ರೆಸ್ ಅಭ್ಯರ್ಥಿ
ವಾರ್ಡ್ 44- ಸಚಿನ ಶಿರವಾಳ
ವಾರ್ಡ್ 45 – ತೃಪ್ತಿ ಲಾಕೆ
ವಾರ್ಡ್ 49- ಲತಾ ರಾಠೋಡ್
ವಾರ್ಡ್ 53- ಯಲ್ಲಪ್ಪ ನಾಯಕೋಡಿ
ವಾರ್ಡ್ 54- ನಿಂಗಮ್ಮ ಚಂದಪ್ಪ ಕಟ್ಟಿಮನಿ

ಬಿಜೆಪಿ 23 ಅಭ್ಯರ್ಥಿಗಳು
ವಾರ್ಡ್ 2- ಸುನೀಲ್ ಮಚ್ಚಟ್ಟಿ
ವಾರ್ಡ್ 5- ಗಂಗಮ್ಮ ಬಸವರಾಜ ಮುನ್ನಳ್ಳಿ
ವಾರ್ಡ್ 6- ಅರುಣಾದೇವಿ
ವಾರ್ಡ್ 7- ಕೃಷ್ಣಾ ನಾಯಕ
ವಾರ್ಡ್ 8- ಸಚಿನ ಹೊನ್ನಾ
ವಾರ್ಡ್ 9- ಸುನೀಲ್ ಬನಶೇಟ್ಟಿ
ವಾರ್ಡ್ 11- ಪ್ರಭು ಹಾದಿಮನಿ
ವಾರ್ಡ್ 23- ದಿಗಂಬರ್ ಮಾಗನಗೇರಿ
ವಾರ್ಡ್ 24- ಪ್ರಿಯಾಂಕಾ ಭೂವಿ
ವಾರ್ಡ್ 25- ಶಿವಾನಂದ ಪಿಸ್ತಿ
ವಾರ್ಡ್ 30- ಮೇಘನಾ ಕಳಸ್ಕರ್
ವಾರ್ಡ್ 31- ಶಾಂತಾಬಾಯಿ ಹಲ್ಲಮಠ
ವಾರ್ಡ್ 32- ಯಂಕಮ್ಮ
ವಾರ್ಡ್ 35- ವಿಜಯಕುಮಾರ ಸೇವಲಾನಿ
ವಾರ್ಡ್ 37- ರೇಣುಕಾ ರಾಮು ಗುಮ್ಮಟ
ವಾರ್ಡ್ 38- ಗುರುರಾಜ ಪಟ್ಟಣ
ವಾರ್ಡ್ 46 – ವಿಶಾಲ ಧರ್ಗಿ
ವಾರ್ಡ್ 48- ವೀರಣ್ಣಾ ಹೊನ್ನಳ್ಳಿ
ವಾರ್ಡ್ 50- ಮಲ್ಲಿಕಾರ್ಜುನ ಉದನೂರ
ವಾರ್ಡ್ 51- ಪಾರ್ವತಿ ರಾಜೀವ ದೇವದುರ್ಗ
ವಾರ್ಡ್ 52- ಶೋಭಾ ದೇಸಾಯಿ
ವಾರ್ಡ್ವ55- ಅರ್ಚನಾ ಬಸವರಾಜ

ಜೆಡಿಎಸ್ 4 ಅಭ್ಯರ್ಥಿಗಳು
ವಾರ್ಡ್ 16- ವಿಜಯಲಕ್ಷ್ಮಿ ರೆಡ್ಡಿ
ವಾರ್ಡ್ 27- ಸಾಜೀದ್ ಕಲ್ಯಾಣಿ
ವಾರ್ಡ್ 34- ವಿಶಾಲ ನವರಂಗ
ವಾರ್ಡ್ ನಂ 42- ಅಲೀಮುದ್ದಿನ್ ಪಟೇಲ್

ಸ್ವತಂತ್ರ 1 ಅಭ್ಯರ್ಥಿಗಳು
ವಾರ್ಡ್ 36- ಶಂಬುಲಿಂಗ್ ಬಳಬಟ್ಟಿ


Spread the love

About Laxminews 24x7

Check Also

ಅರ್ಥಿಂಗ್ ಸಮಸ್ಯೆ – ಶೌಚಾಲಯಕ್ಕೆ ಬೀಗ, ಬಹಿರ್ದೆಸೆಗೆ ಮಹಿಳೆಯರ ಅಲೆದಾಟ

Spread the loveಸಿಂಧನೂರು: ನಗರದ ವಾರ್ಡ್ ನಂ.19ರ ವ್ಯಾಪ್ತಿಗೊಳಪಡುವ ಶರಣಬಸವೇಶ್ವರ ಕಾಲೊನಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ