ಶಿವಮೊಗ್ಗ: ನಾವು ರಾಜೀನಾಮೆ ನೀಡಿ ಬಿಜೆಪಿ ಬರದಿದ್ದರೆ ಸಚಿವರಾಗುತ್ತಿರಲಿಲ್ಲಎಂದು ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದರು. ಈಸೂರು ಹುತಾತ್ಮರ ಸ್ಮಾರಕ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಮ್ಮ ಜೊತೆ ಗಟ್ಟಿಯಾಗಿ ನಿಂತಿದ್ದರಿಂದಲೇ ನಾವು ಬಿಜೆಪಿಗೆ ಬಂದಿದ್ದು. ನಂಬಿದವರಿಗೆ ಒಳ್ಳೆಯದನ್ನು ಮಾಡಲು ತಮ್ಮ ಸ್ಥಾನ ಬಿಡಲೂ ಯಡಿಯೂರಪ್ಪ ಅಂಜುವುದಿಲ್ಲ. ಯಡಿಯೂರಪ್ಪ ಅವರು ಜಾತ್ಯಾತೀತ ನಾಯಕ. ನಾವು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ 17 ಜನರಲ್ಲಿ ಇಬ್ಬರು …
Read More »ಗಂಗಾವತಿ : ಭತ್ತದ ಗದ್ದೆಗೆ ನುಗ್ಗಿದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್
ಗಂಗಾವತಿ : ಗಂಗಾವತಿ ಹುಲಿಗಿ ಮುನಿರಾಬಾದ್ ಸಂಚರಿಸುವ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸು ಇಂದು ತಾಲ್ಲೂಕಿನ ಬಸಾಪುರ ಹತ್ತಿರ ಭತ್ತ ಗದ್ದೆಗೆ ನುಗ್ಗಿ ಅಪಘಾತಕ್ಕೀಡಾಗಿದೆ . ಗಂಗಾವತಿಯಿಂದ ಹುಲಿಗಿಯ ಕಡೆ ಹೊರಟಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸು ಅಪಘಾತಕ್ಕೀಡಾಗಿದೆ ಎದುರಿಗೆ ಬಂದ ವಾಹನಕ್ಕೆ ಆಗುವ ಅಪಘಾತವನ್ನು ತಪ್ಪಿಸಲು ಬಸ್ ಚಾಲಕ ಸ್ಟೇರಿಂಗ್ ಅನ್ನು ತಿರುಗಿಸಿದ್ದರಿಂದ ಸ್ಟೇರಿಂಗ್ ಮುರಿದು ಬಸ್ಸು ಭತ್ತದ ಗದ್ದೆಗೆ ನುಗ್ಗಿ ಗದ್ದೆಯ ಬದುವಿಗೆ ನಿಂತುಕೊಂಡಿದೆ .ಯಾವುದೇ …
Read More »ಒಂದು ಲಕ್ಷ ರುಪಾಯಿ ಮೊತ್ತದ ಪರಿಹಾರ ಚೆಕ್ ನ್ನು ಪತ್ರಕರ್ತ ಯಲ್ಲಪ್ಪ ಕಾನಾರ ಅವರ ಕುಟುಂಬಕ್ಕೆ ವಿತರಿಸಿದ ಬೊಮ್ಮಾಯಿ
ಬೆಳಗಾವಿ – ಇತ್ತೀಚೆಗೆ ಅಕಾಲಿಕವಾಗಿ ಮರಣಹೊಂದಿದ ಖಾನಾಪುರದ ಪತ್ರಕರ್ತ ಯಲ್ಲಪ್ಪ ಕಾನಾರ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ಲಕ್ಷ ರುಪಾಯಿ ಮೊತ್ತದ ಪರಿಹಾರ ಚೆಕ್ ನ್ನು ಬೆಳಗಾವಿಯಲ್ಲಿ ವಿತರಿಸಿದರು. ಲೋಂಡಾದ ಯಲ್ಲಪ್ಪ ಕಾನಾರ ಕೊರೋನಾದಿಂದಾಗಿ ಈಚೆಗೆ ನಿಧನರಾಗಿದ್ದಾರೆ. ಸುಂಮಾರು 25 ವರ್ಷಗಳ ಕಾಲ ಯಲ್ಲಪ್ಪ ಪತ್ರಿಕಾ ವರದಿಗಾರರಾಗಿ, ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.
Read More »ಜಾತಿ ಸಮೀಕ್ಷೆ ಪ್ರಚಾರಕ್ಕೆ ಸೀಮಿತ: ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ರಾಮನಗರ: ‘ಜಾತಿ ಸಮೀಕ್ಷೆ ಬಗ್ಗೆ ಸದನದಲ್ಲಿ ಮಾತನಾಡುವುದನ್ನು ಬಿಟ್ಟು ಬೀದಿಯಲ್ಲಿ ಮಾತನಾಡುವುದು ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ’ ಎಂದು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. ಬಿಡದಿಯ ತೋಟದ ಮನೆಯಲ್ಲಿ ಭಾನುವಾರ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು. ಹತ್ತು ದಿನಗಳ ಕಾಲ ಸದನ ನಡೆದಿತ್ತು. ಸದನದಲ್ಲಿ ನಿಯಮ 69ರಲ್ಲಿ ಈ ವಿಚಾರವನ್ನು ಚರ್ಚೆಗೆ ತರಬಹುದಿತ್ತು. ಈ ಮೂಲಕ ರಾಜ್ಯದ ಜನತೆ ಮುಂದೆ ಸತ್ಯ ತೆರೆದಿಡಬಹುದಿತ್ತು. …
Read More »ಬೆಂಗಳೂರು: ಚರ್ಚ್ ಸ್ಟ್ರೀಟ್ ಯೋಜನೆ ನಗರದ ಇನ್ನೂ ಮೂರು ರಸ್ತೆಗಳಿಗೆ ವಿಸ್ತರಣೆ
ಬೆಂಗಳೂರು: ಚರ್ಚ್ ಸ್ಟ್ರೀಟ್ ರಸ್ತೆ ನಿರ್ಮಾಣ ಯೋಜನೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರ ಮತ್ತು ಭೂ ಸಾರಿಗೆ ಇಲಾಖೆ(Department of Urban and Land Transport) ಅದೇ ಮಾದರಿಯ ಯೋಜನೆಯನ್ನು ನಗರದ ಮೂರು ರಸ್ತೆಗಳಿಗೆ ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. ಮಲ್ಲೇಶ್ವರಂ 8ನೇ ಕ್ರಾಸ್, ಜಯನಗರ 10ನೇ ಮುಖ್ಯರಸ್ತೆ ಮತ್ತು ಗಾಂಧಿ ಬಜಾರ್ ರಸ್ತೆಗಳನ್ನು ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ಉನ್ನತ ದರ್ಜೆಗೆ ಏರಿಸಲಾಗುವುದು. ಇದೇ ವೇಳೆ ನಗರ …
Read More »ರಸ್ತೆ ಗುಂಡಿ ಸರಿಪಡಿಸದ ಇಂಜಿನಿಯರ್ಗಳಿಗೆ ಅಮಾನತು ಶಿಕ್ಷೆ.!
ನಗರದ ಕೆಟ್ಟ ರಸ್ತೆಗಳಿಗೆ ಪಾಲಿಕೆ ನಾಲ್ವರು ಇಂಜಿನಿಯರ್ಗಳೇ ನೇರ ಹೊಣೆ ಎಂದು ಹೇಳಿದ ಮಹಾರಾಷ್ಟ್ರದ ಥಾಣೆ ನಾಗರಿಕ ಆಯುಕ್ತ ಡಾ. ವಿಪಿನ್ ಶರ್ಮಾ ಅವರನ್ನು ಅಮಾನತುಗೊಳಿಸಿದ್ದಾರೆ. ಈ ನಾಲ್ವರು ಇಂಜಿನಿಯರ್ಗಳು ರಸ್ತೆಗಳಲ್ಲಿ ಗುಂಡಿ ತುಂಬಿಸುವ ಕಾರ್ಯ ಮಾಡಿಲ್ಲ ಹಾಗೂ ಗುತ್ತಿಗೆದಾರರ ಕಳಪೆ ಕಾಮಗಾರಿಯ ಬಗ್ಗೆಯೂ ಲಕ್ಷ್ಯ ನೀಡಿಲ್ಲ ಎಂದು ಶರ್ಮಾ ಹೇಳಿದ್ದಾರೆ. ಉತ್ತಲ್ಸರ್ ವಾರ್ಡ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಚೇತನ್ ಪಡೆಲ್, ವಾರ್ತಾಕ್ ನಗರ ವಾರ್ಡ್ನ ಪ್ರಕಾಶ್ ಕಡ್ತಾರೆ, ಜ್ಯೂನಿಯರ್ ಇಂಜಿನಿಯರ್ …
Read More »ಕಾಸ್ಮೊಪಾಲಿಟನ್ ಸಂಸ್ಕೃತಿ ಹೊಂದಿರುವ ಬೆಳಗಾವಿಯಲ್ಲಿ ಇಡೀ ಭಾರತವೇ ಇದೆ: ಬೊಮ್ಮಾಯಿ
ಬೆಳಗಾವಿ: ಬೆಳಗಾವಿಯಲ್ಲಿ ಇಡೀ ಭಾರತವೇ ಇದೆ. ಕಾಸ್ಮೊಪಾಲಿಟನ್ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ವಿಶಾಲ ಮನೋಭಾವದ ಜನರು ಈ ನಗರದವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಎಸ್‌ಪಿಎಂ ರಸ್ತೆಯಲ್ಲಿ ಶಿವಾಜಿ ಉದ್ಯಾನದ ಸಮೀಪದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಲಾದ ರವೀಂದ್ರ ಕೌಶಿಕ್ ಇ- ಗ್ರಂಥಾಲಯವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂಕುಚಿತ ಮನೋಭಾವಕ್ಕೆ ಇಲ್ಲಿ ಜಾಗ ಇಲ್ಲ ಎನ್ನುವುದನ್ನು ಈಚೆಗೆ ನಡೆದ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ತೋರಿಸಿಕೊಟ್ಟಿದ್ದಾರೆ. ಅಭಿವೃದ್ಧಿಗೆ …
Read More »ನಾಳೆ ಎಂದಿನಂತೆ ರಾಜ್ಯದಲ್ಲಿ ಸಂಚರಿಸಲಿದೆ ಸಾರಿಗೆ ಬಸ್
ಬೆಂಗಳೂರು : ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿದ್ದು, ಈ ವೇಳೆ ಸಂಚರಿಸಲಿರುವ ಬಿಎಂಟಿಸಿ ಹಾಗೂ ಕೆಎಸ್‌ಆರ್ಟಿಸಿ ಬಸ್ ಗಳಿಗೆ ಭದ್ರತೆ ಕೋರಿ ಪೊಲೀಸರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕೆಎಸ್‌ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ, ಸೋಮವಾರ ರಾಜ್ಯದಲ್ಲಿ ಎಂದಿನಂತೆ ಸಾರಿಗೆ ಬಸ್ ಸಂಚರಿಸಲಿದ್ದು, ಬಸ್ ಮತ್ತು ಸಂಸ್ಥೆಯ ಆಸ್ತಿಗೆ ಹಾನಿಯಾಗದಂತೆ ಭದ್ರತೆ ಒದಗಿಸಲು …
Read More »ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಚಿಂತನೆ : ಬಸವರಾಜ ಬೊಮ್ಮಾಯಿ
ಬೆಳಗಾವಿ: ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಿಟ್ಟು, ಅನುಮೋದನೆ ಪಡೆಯಲಾಗುವುದು. ಈಗಾಗಲೇ ಅನೇಕ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರಿಸಲಾಗಿದೆ. ಡಿಸೆಂಬರ್ ಒಳಗಡೆ ಸಾಧ್ಯವಿರುವ ಮತ್ತಷ್ಟು ಕಚೇರಿಗಳನ್ನು ಸ್ಥಳಾಂತರ ಮಾಡಲಾಗುವುದು ಎಂದರು. ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಲಾಗಿದೆ. ಬಾಕಿ ಪಾವತಿಸದಿದ್ದಲ್ಲಿ …
Read More »ಸಿಎಂ ಬೊಮ್ಮಾಯಿ ಎದುರೇ ಧಿಕ್ಕಾರ ಕೂಗಿದ ಜೆಡಿಎಸ್ ಕಾರ್ಯಕರ್ತರು.. ನಡೆದಿದ್ದೇನು..?
ತುಮಕೂರು: ಸಿಎಂ ಬಸವರಾಜ ಬೊಮ್ಮಾಯಿಗೆ ಸ್ವತಃ ಅವರ ಎದುರಲ್ಲೇ ಧಿಕ್ಕಾರ ಕೂಗಿದ ಘಟನೆ ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ಮಹಿಳೆಗೆ ಅತ್ಯಾಚಾರವೆಸಗಿ ಕೊಲೆ ಆರೋಪಿಗಳನ್ನ ಬಂಧಿಸಲು ಈ ವೇಳೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿಗಳನ್ನ ಬಂಧಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲು ಜೆಡಿಎಸ್ ಕಾರ್ಯಕರ್ತರು ಬಂದಿದ್ದರು.. ಕಾರ್ಯಕರ್ತರ ಮನವಿ ಪಡೆಯದೇ ಹೊರಟ ಸಿಎಂಗೆ ಕಾರ್ಯಕರ್ತರು …
Read More »
Laxmi News 24×7