Breaking News
Home / ಜಿಲ್ಲೆ / ರಾಮನಗರ

ರಾಮನಗರ

ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಗಡಿಪಾರಿಗೆ ಆಗ್ರಹ

  ರಾಮನಗರ : ಹಿರಿಯ ಸಾಹಿತಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಖಂಡಿಸಿ ಪ್ರಗತಿಪರ ಹಾಗೂ ದಲಿತ ಸಮಾನ ಮನಸ್ಕರ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿದರು. ವಕೀಲೆ ಮೀರಾ ರಾಘವೇಂದ್ರ ಅವರ ಗಡಿಪಾರಿಗೆ ಆಗ್ರಹಿಸಿದರು. ಇಲ್ಲಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಪ್ರಾರಂಭಿಸಿದರು.ಪ್ರೊ. ಕೆ. ಎಸ್. ಭಗವಾನ್ ಮುಖಕ್ಕೆ ಮಸಿ‌ ಬಳಿದ ವಕೀಲೆ ವೀರಾ ರಾಘುವೇಂದ್ರ‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ದೇಶದ ಸಂವಿಧಾನದ …

Read More »

ಜೆಡಿಎಸ್ – ಬಿಜೆಪಿ ಹೊಂದಾಣಿಕೆ ವಿಚಾರ ಅದು ಅವರವರ ಪಕ್ಷಗಳಿಗೆ ಬಿಟ್ಟ ವಿಚಾರ, ಯಾರು ಯಾರ ಜೊತೆಯಾದರೂ ಹೋಗಬಹುದು:ಡಿಕೆಶಿ

ರಾಮನಗರ(ಡಿಸೆಂಬರ್​. 22): ಜೆಡಿಎಸ್ – ಬಿಜೆಪಿ ಹೊಂದಾಣಿಕೆ ವಿಚಾರ ಅದು ಅವರವರ ಪಕ್ಷಗಳಿಗೆ ಬಿಟ್ಟ ವಿಚಾರ, ಯಾರು ಯಾರ ಜೊತೆಯಾದರೂ ಹೋಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಹೆಂಡತಿ ಉಷಾ ಜೊತೆಗೆ ಗ್ರಾ.ಪಂ ಚುನಾವಣೆ ಹಿನ್ನೆಲೆ ಮತದಾನ ಮಾಡಲು ಕನಕಪುರದ ಹುಟ್ಟೂರು ದೊಡ್ಡಾಲಹಳ್ಳಿಗೆ ಆಗಮಿಸಿದ್ದ ಡಿಕೆಶಿ ಮತಗಟ್ಟೆ ಸಂಖ್ಯೆ 3 ರಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಕೀಯ ಅಂದ್ರೆ ಸಾಧ್ಯತೆಗಳ ಕಲೆ, …

Read More »

ಮಾಂಸದೂಟ ಸೇವಿಸಿ ಅಸ್ವಸ್ಥವಾಗಿದ್ದ 6ವರ್ಷದ ಮಗು ಸಾವು

ರಾಮನಗರ: ಬುಧವಾರದಂದು ಚನ್ನಪಟ್ಟಣ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದಲ್ಲಿ ಬೀಗರ ಔತಣ ಕೂಟದಲ್ಲಿ ಮಾಂಸದೂಟ ಸೇವಿಸಿ ಜನರು ಅಸ್ವಸ್ಥತಗೊಂಡ ಘಟನೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಅಸ್ಪತ್ರೆಯಲ್ಲಿ 6 ವರ್ಷದ ಹೆಣ್ಣುಮಗು ಮೃತಪಟ್ಟಿದೆ. ಬೀಗರ ಔತಣದಲ್ಲಿ ಊಟ ಮಾಡಿದ್ದ 6 ವರ್ಷದ ಹೆಣ್ಣು ಮಗು ಚೈತನ್ಯ ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದು, ಗ್ರಾಮದ ವೆಂಕಟಭೈರ-ಸೌಮ್ಯ ದಂಪತಿಯ ಮಗು ಚೈತನ್ಯ ಬೀಗರೂಟದಲ್ಲಿ ಫುಡ್ ಪಾಯ್ಸನ್ ನಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ …

Read More »

ಕುಮಾರಸ್ವಾಮಿ ಸರ್ಕಾರವನ್ನ ಸ್ಕೆಚ್ ಹಾಕಿ ತೆಗೆದಿದ್ದು ನಾನೇ. ನನ್ನನ್ನ ಡಿಕೆಶಿ-ಹೆಚ್‍ಡಿಕೆ ಸೇರಿ ಸೋಲಿಸಿದ್ದರು.

ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಎಂಎಲ್‍ಸಿ ಸಿ ಪಿ ಯೋಗೇಶ್ವರ್ ಅವರು ಹೆಚ್‍ಡಿಕೆ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗ್ರಾ.ಪಂ ಚುನಾವಣೆ ಹಿನ್ನೆಲೆ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ಅವರು, ಕುಮಾರಸ್ವಾಮಿ ಸರ್ಕಾರವನ್ನ ಸ್ಕೆಚ್ ಹಾಕಿ ತೆಗೆದಿದ್ದು ನಾನೇ. ನನ್ನನ್ನ ಡಿಕೆಶಿ-ಹೆಚ್‍ಡಿಕೆ ಸೇರಿ ಸೋಲಿಸಿದ್ದರು. ಅದಕ್ಕಾಗಿ ನಾನು ಬೆಂಗಳೂರಿನಲ್ಲಿ ಸ್ಕೆಚ್ ಹಾಕಿ ಸರ್ಕಾರ …

Read More »

ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಬಿಜೆಪಿ ಇನ್ನಿಲ್ಲದ ಕಸರತ್ತು

ರಾಮನಗರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಅಕ್ರಮ ಸಂಪತ್ತು ಗಳಿಕೆ ಪ್ರಕರಣದ ವಿಚಾರವಾಗಿ ಹಿಂದಿನ ವರ್ಷ ಇಡಿ ಅಧಿಕಾರಿಗಳು ಡಿಕೆಶಿ ಅವರನ್ನು ಬಂಧಿಸಿದ್ದ ಸಂದರ್ಭದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. ಆ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ – ಪಾಸ್ತಿಗೆ ನಷ್ಟ ಉಂಟಾಗಿತ್ತು. ಸದ್ಯ ನಷ್ಟದ ವಿಚಾರಣೆಗೆ ಸರ್ಕಾರ, ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಸಿದ …

Read More »

ಕೋವಿಡ್‌ 19 ಸೋಂಕಿಗೆ ಮೂವರು ಕೋವಿಡ್‌ ವಾರಿಯರ್ ಮೃತ

ರಾಮನಗರ: ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿಗೆ ಮೂವರು ಕೋವಿಡ್‌ ವಾರಿಯರ್ ಮೃತಪಟ್ಟಿದ್ದು, ವಾರಿಯರ್ಸ್ ಗೆ ಸರ್ಕಾರ ಘೋಷಿಸಿರುವ ಪರಿಹಾರದ ಮೊತ್ತ ಮೃತರ ಕುಟುಂಬವನ್ನು ಇನ್ನಷ್ಟೇ ತಲುಪಬೇಕಾಗಿದೆ. ವಾರಿಯರ್ಸ್ ಗೆ 50 ಲಕ್ಷ ರೂ. ವರೆಗೆ ಪರಿಹಾರ: ಇಬ್ಬರು ಸರ್ಕಾರಿ ವೈದ್ಯರು, ಒಬ್ಬ ಪೊಲೀಸ್‌ ಪೇದೆ ಸೇರಿ ಜಿಲ್ಲೆಯಲ್ಲಿ ಮೂವರು ಕೋವಿಡ್‌ ವಾರಿಯರ್ಸ್ ಮೃತ ಪಟ್ಟಿದ್ದಾರೆ. ಕೋವಿಡ್‌ ವಾರಿಯರ್ಸ್ ಗೆ ಸಿಗಬೇಕಾದ ಪರಿಹಾರದ ಮೊತ್ತಕ್ಕೆ ಸಂಬಂಧಿಸಿದ ಇಲಾಖೆಗಳು ಅರ್ಜಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಇನ್ನಷ್ಟೇ ಈ …

Read More »

ನಾಪತ್ತೆಯಾಗಿದ್ದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ.

ರಾಮನಗರ : ಜಿಲ್ಲೆಯ ಮಾಗಡಿ ತಾಲೂಕಿನ ಬೆಟ್ಟಹಳ್ಳಿಯಿಂದ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ. ಅಕ್ಟೋಬರ್​ 8 ರಂದು ಮನೆಯಿಂದ ಕಾಣೆಯಾಗಿದ್ದ 19 ವರ್ಷದ ಯುವತಿ ಹೇಮಲತಾಳ ಮೃತದೇಹ ಇಂದು  ಪತ್ತೆಯಾಗಿದೆ. ಯುವತಿ ಕಾಣೆಯಾದ ಬೆನ್ನಲ್ಲೇ ಅಕ್ಟೋಬರ್ 9 ರಂದು ಕುದೂರು ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲಾಗಿತ್ತು. ಇದೀಗ ಹೇಮಲತಾಳ ಮೃತದೇಹ ಆಕೆಯ ಮನೆಯ ಸಮೀಪವೇ ಇದ್ದ ಜಮೀನಿನಲ್ಲಿ ಪತ್ತೆಯಾಗಿದೆ. ಯುವತಿಯ ದೊಡ್ಡಪ್ಪ ರವೀಂದ್ರಕುಮಾರ್ ಜಮೀನಿನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. …

Read More »

ಮೇಕೆದಾಟು ಯೋಜನಾ ಪ್ರದೇಶಕ್ಕೆ‌ ಭೇಟಿ‌ ನೀಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌

ರಾಮನಗರ:   ಜಿಲ್ಲೆಯ ಮುಗ್ಗೂರು ಮತ್ತು ಹನೂರು ಅರಣ್ಯ ವಲಯದಲ್ಲಿರುವ ಒಂಟಿಗುಂಡುವಿನ ಬಳಿ ಮೇಕೆದಾಟು ಸಮಾನಾಂತರ ಅಣೆಕಟ್ಟು ನಿರ್ಮಾಣ ಮಾಡಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡಿದ ಕೂಡಲೇ ಯೋಜನೆ‌ ಪ್ರಾರಂಭಿಸಲಾಗುವುದು‌ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ತಿಳಿಸಿದರು. ಮೇಕೆದಾಟು ಯೋಜನಾ ಪ್ರದೇಶಕ್ಕೆ‌ ಭೇಟಿ‌ ನೀಡಿ, ಸ್ಥಳ ಪರಿಶೀಲನೆ ಮಾಡಿದ ಸಚಿವರು, ಅಣೆಕಟ್ಟು ನಿರ್ಮಾಣ ಸಂಬಂಧ ಕೇಂದ್ರದ ಜಲಶಕ್ತಿ ಸಚಿವಾಲಯ ಈಗಾಗಲೇ ಅನುಮತಿ ನೀಡಿದೆ.   …

Read More »

ಪಿಯು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ

ರಾಮನಗರ: ಕೋವಿಡ್‌-19 ಲಾಕ್‌ಡೌನ್‌ ಕಾರಣಕ್ಕೆ ಕಲಿಕೆಯಿಂದ ವಿಮುಖರಾಗಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯು ಆನ್‌ಲೈನ್‌ ಪಾಠ ಆರಂಭಿಸಿದೆ. ಈ ಮೂಲಕ ಮನೆಯಲ್ಲೇ ಕಲಿಕೆ ಮುಂದುವರಿಸುವ ಅವಕಾಶ ನೀಡಿದೆ.   ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ವಿವಿಧ ವಿಷಯಗಳ ನುರಿತ ಉಪನ್ಯಾಸಕರಿಂದ ಪಠ್ಯದ ವಿವಿಧ ಅಧ್ಯಾಯಗಳನ್ನು ವಿಡಿಯೊ ರೂಪದಲ್ಲಿ ಸಂಗ್ರಹಿಸಿ ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡಲಾಗುತ್ತಿದೆ. ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮಗಳೆಡರಲ್ಲೂ ಈ ಪಾಠಗಳು ಲಭ್ಯವಿದೆ. ಕಳೆದ ಜುಲೈನಿಂದಲೇ ಈ …

Read More »

ಅಗಸರು- ಕ್ಷೌರಿಕರಿಗೆ 5000ರೂ. ಕೋವಿಡ್ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ರಾಮನಗರ ಜೂ.30-ಅಗಸರು ಹಾಗೂ ಕ್ಷೌರಿಕರಿಗೆ ಕೋವಿಡ್-19ರ ಲಾಕ್‌ಡೌನ್ ಕಾರಣ 5000 ರೂ.ಗಳ ಪರಿಹಾರ ನೆರವು ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ಗಡುವನ್ನು ಜುಲೈ 10ರ ವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವನ್ನಾಗಿ ನಿಗದಿಪಡಿಸಲಾಗಿತ್ತು. ಆದರೆ, ಈ ಸಂಬಂಧ ರಾಮನಗರ ಜಿಲ್ಲೆಯ 04 ತಾಲ್ಲೂಕುಗಳಿಂದ ಇಲ್ಲಿಯವರೆಗೂ 1041 ಅರ್ಜಿಗಳು ಮಾತ್ರ ಆನ್‌ಲೈನ್ ಅಲ್ಲಿ ಸ್ವೀಕೃತಗೊಂಡಿವೆ.ಈ ವೃತ್ತಿಯಲ್ಲಿ ಯಾವುದೇ ಅಗಸ, ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವ ಕಾರ್ಮಿಕರು …

Read More »