ವಿಶ್ವರತ್ನ ಡಾ . ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ತಾಲೂಕಿನಾದ್ಯಂತ ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಿ ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿ ನಗರದಲ್ಲಿ ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು …
Read More »ಸಂಸತ್ತು,ಶಾಸಕಾಂಗ ಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳ
ಬೆಳಗಾವಿ:ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಂಸತ್ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪದಿಂದಾಗಿ ಕೇಂದ್ರ ಸರ್ಕಾರವು ನಾರಿ ಶಕ್ತಿ ವಂದನ ಅಧಿನಿಮಯ ಜಾರಿಗೊಳಿಸುವ ಮೂಲಕ ಗತಕಾಲದ ಕನಸುಗಳನ್ನು ಸಾಕಾರಗೊಳ್ಳಿಸುವುದು ಅಲ್ಲದೆ, ಭವಿಷ್ಯದ ಸಂಕಲ್ಪ ಈಡೇರಲಿವೆ ಎಂದರು. 2023ರಲ್ಲಿ …
Read More »ಸುವರ್ಣ ಘಳಿಗೆಯಲ್ಲಿ ಜೀವ ಉಳಿಸುವುದು ಮಹತ್ಕಾರ್ಯ
ಬೆಳಗಾವಿ: ಅಫಘಾತದ ಸಂದರ್ಭದಲ್ಲಿ ರಕ್ತಸ್ರಾವ ಅಧಿಕವಾಗುವುದರಿಂದ ಸುವರ್ಣ ಘಳಿಗೆಯಲ್ಲಿ ವೈದ್ಯರು ಕಾರ್ಯಪ್ರವೃತ್ತರಾಗುವುದು ಬಹಳ ಮುಖ್ಯ. ವೈಜ್ಞಾನಿಕವಾಗಿ ವೈದ್ಯಕೀಯ ಸೇವೆಯೊಂದಿಗೆ, ಜೀವ ಉಳಿಸುವ ಮಹತ್ಕಾರ್ಯವನ್ನೂ ಅತ್ಯಂತ ಶೀಘ್ರದಲ್ಲಿ ನೆರವೇರಿಸಬೇಕು ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ್‌ಎಜ್ಯುಕೇಶನ ಆ್ಯಂಡ್ ರಿಸರ್ಚ್ ಉಪಕುಲಪತಿ ಡಾ.ಸಂದೀಪ ಶ್ರೀವಾತ್ಸವ ಹೇಳಿದರು. ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆ್ಯಂಡ್ ರಿಸರ್ಚ್‌ನ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಸೈಂಟಿಫಿಕ್ ಸೊಸೈಟಿಯ 44ನೇ ವಾರ್ಷಿಕ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದ …
Read More »ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ
ಬೆಳಗಾವಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಎ.ಬಿ. ರಜಪೂತ ನಿವಾಸ, ಕಚೇರಿ ಸೇರಿ 7 ಸ್ಥಳದ ಮೇಲೆ ಮಂಗಳವಾರ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಶುಕ್ರವಾರ ಮೂರನೇ 14ಕೋಟಿ ರೂ.ಗಿಂತ ಆಸ್ತಿ ಪತ್ತೆಯಾಗಿದೆ. ಬೆಳಗಾವಿ ಮಹಾನಗರದಲ್ಲಿ 3ಮನೆ, ಸವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿ ನಗರದಲ್ಲಿ ಐದು ನಿವೇಶನ, 5.960 ಕೆಜಿ ಚಿನ್ನ ಹಾಗೂ ವಜ್ರದ …
Read More »ಬಾಣಂತಿ, ಮಗು ಸಾವು – ಬಿಮ್ಸ್ ವೈದ್ಯರ ನಿರ್ಲಕ್ಷ್ಯ ಆರೋಪ
ಬೆಳಗಾವಿ: ಬಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಹಾಗೂ ಮಗು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ತುರಮರಿ ಗ್ರಾಮದ ಬಾಣಂತಿ 21 ವರ್ಷದ ಈರಮ್ಮ ಶಿಗೀಹಳ್ಳಿ ಏಪ್ರಿಲ್ 10 ರಂದು ಮಧ್ಯಾಹ್ನ 12ಗಂಟೆಗೆ ಬೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಆಸ್ಪತ್ರೆಗೆ ದಾಖಲಾದಾಗಿಂದ ಇಲ್ಲಿಯವರೆಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ಇಂದು ಮಧ್ಯರಾತ್ರಿ 1.30ಕ್ಕೆ ಬಾಣಂತಿ …
Read More »ಧಾರವಾಡ: ಇಸ್ಮಾಯಿಲ್ ತಮಟಗಾರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಹಿಂದೂ ಸಂಘಟನೆಗಳು
ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ವಿರುದ್ಧ ಇದೀಗ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಈ ಸಂಬಂಧ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡರು ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವರದಿ: ಕಳೆದ ಏಪ್ರಿಲ್ 7 ರಂದು ಧಾರವಾಡದ ಸುಭಾಷ್ ರಸ್ತೆಯಲ್ಲಿ ಲವ್ ಜಿಹಾದ್ ವಿರುದ್ಧ ‘ಜನಾಕ್ರೋಶ ಪ್ರತಿಭಟನೆ’ …
Read More »ಕ್ಷೇತ್ರದ ಸಹೋದರಿಯರ ಬಾಳಿಗೆ ಆಸರೆ: 28 ಕುಟುಂಬಗಳಿಗೆ “ಅಣ್ಣನ ಉಡುಗೊರೆ” ವಿತರಣೆ
ಸವದತ್ತಿ: ನನ್ನ ಕ್ಷೇತ್ರದ ಪ್ರತಿಯೊಂದು ಬಡ ಕುಟುಂಬದ ಕಷ್ಟ-ಸುಖಗಳಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಇಂದು ಮದುವೆಯ ಸಂಭ್ರಮದಲ್ಲಿರುವ ಸವದತ್ತಿ ಮತಕ್ಷೇತ್ರದ ಸುಮಾರು 28 ಬಡ ಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ “ಅಣ್ಣನ ಉಡುಗೊರೆ”ಯನ್ನು ನನ್ನ ಧರ್ಮಪತ್ನಿಯವರಾದ ಶ್ರೀಮತಿ Shruti Vaidya (ಶೃತಿ ವಿಶ್ವಾಸ್ ವೈದ್ಯ) ಅವರು ವಿತರಿಸಿದರು. ಹೊಸ ಬಾಳಿಗೆ ಪಾದಾರ್ಪಣೆ ಮಾಡುತ್ತಿರುವ ನನ್ನ ಕ್ಷೇತ್ರದ ಸಹೋದರಿಯರಿಗೆ ನೆರವಾಗಲು ಅಡುಗೆ ಮನೆಯ ಭಾಂಡೆ ಸಾಮಗ್ರಿಗಳು, ಟ್ರೇಸುರಿ, ಮಂಚ (ಕಾಟ್) ಹಾಗೂ …
Read More »2.50 ಕೋಟಿ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣ: ಕಾಮಗಾರಿಗೆ ಚಾಲನೆ
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ತುರಮುರಿ ಹಾಗೂ ಕೋನೆವಾಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಅನುದಾನ ಮಂಜೂರಾಗಿದ್ದು, ಸುಮಾರು 2.50 ಕೋಟಿ ರೂ.ಗಳ ವೆಚ್ಚದಲ್ಲಿ 2.7 ಕಿ.ಮೀ ರಸ್ತೆ ನಿರ್ಮಾಣವಾಗಲಿದೆ. ರಸ್ತೆಯ ಗುಣಮಟ್ಟ …
Read More »ಬಸವೇಶ್ವರ ಜಯಂತಿ ನಿಮಿತ್ಯ ಲಿಂಗಾಯತ ಮುಖಂಡರು ಸಭೆ
ಬೆಳಗಾವಿ: ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ಯ ಬೆಳಗಾವಿ ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ಇಂದು ಸರ್ವಪಕ್ಷಗಳ ಲಿಂಗಾಯತ ಮುಖಂಡರು ಸಭೆ ನಡೆಸಿದರು. ಈ ಸಭೆಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ, ರಾಜ್ಯ ಸಭೆ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ, ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್ ಹುಕ್ಕೇರಿ, ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ, ಸಂಸದ ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, ಈ …
Read More »ಇಬ್ಬರು ಅಪರಾಧಿಗಳಿಗೆ ಪೋಕ್ಸೊ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ
ಬೆಳಗಾವಿ : ಬಾಲಕಿ ಮೇಲೆ ಅಪರಾಧ ಶಿಕ್ಷೆ ಅತ್ಯಾಚಾರ ಎಸಗಿದ್ದ ಅಪರಾಧಿ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ನಿವಾಸಿ ಕಲ್ಲಪ ಪರುಶುರಾಮ ಸುತಾರ(೨೨) ಎಂಬಾತನಿಗೆ ೩೦ ವರ್ಷ ಕಾರಾಗೃಹ ಶಿಕ್ಷೆ ಮತ್ತು ೧ ಲಕ್ಷ ರೂ. ದಂಡ ಹಾಗೂ ಮತ್ತೊಂದು ಪ್ರಕರಣದಲ್ಲಿ ಅಪ್ರಾಪ್ತೆಗೆ ಕಿರುಕುಳ ನೀಡಿದ್ದ ಬೈಲಹೊಂಗಲ ಪಟ್ಟಣದ ನಿವಾಸಿ ನಂದೀಶ ಉರ್ಪ ನಂದು ಬಂಡಿವಡ್ಡರ ಎಂಬಾತನಿಗೆ ೩ ವರ್ಷ ಕಾರಾಗೃಹ ಶಿಕ್ಷೆ ಮತ್ತು ೧೦ ಸಾವಿರ ರೂ. ದಂಡ …
Read More »
Laxmi News 24×7