Breaking News

ಸುವರ್ಣ ಘಳಿಗೆಯಲ್ಲಿ ಜೀವ ಉಳಿಸುವುದು ಮಹತ್ಕಾರ್ಯ

Spread the love

ಬೆಳಗಾವಿ: ಅಫಘಾತದ ಸಂದರ್ಭದಲ್ಲಿ ರಕ್ತಸ್ರಾವ ಅಧಿಕವಾಗುವುದರಿಂದ ಸುವರ್ಣ ಘಳಿಗೆಯಲ್ಲಿ ವೈದ್ಯರು ಕಾರ್ಯಪ್ರವೃತ್ತರಾಗುವುದು ಬಹಳ ಮುಖ್ಯ. ವೈಜ್ಞಾನಿಕವಾಗಿ ವೈದ್ಯಕೀಯ ಸೇವೆಯೊಂದಿಗೆ, ಜೀವ ಉಳಿಸುವ ಮಹತ್ಕಾರ್ಯವನ್ನೂ ಅತ್ಯಂತ ಶೀಘ್ರದಲ್ಲಿ ನೆರವೇರಿಸಬೇಕು ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ್‌ಎಜ್ಯುಕೇಶನ ಆ್ಯಂಡ್ ರಿಸರ್ಚ್ ಉಪಕುಲಪತಿ ಡಾ.ಸಂದೀಪ ಶ್ರೀವಾತ್ಸವ ಹೇಳಿದರು.
ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆ್ಯಂಡ್ ರಿಸರ್ಚ್‌ನ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಸೈಂಟಿಫಿಕ್ ಸೊಸೈಟಿಯ 44ನೇ ವಾರ್ಷಿಕ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದ ಪ್ರಯುಕ್ತ ಏರ್ಪಡಿಸಿದ್ದ  ‘ಗೋಲ್ಡನ್ ಹಾವರ್ ಮ್ಯಾಟರ್ಸ್ ಅಪಡೇಟ್ ಆನ್ ಟ್ರಾಮ್ ಆ್ಯಂಡ್ ಎಮರ್ಜೆನ್ಸಿ ಕೇರ್’ ಕುರಿತ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರ ಸೇವಾಕಾರ್ಯ ಅತ್ಯಂತ ಕಠಿಣ. ಸಮಾಜದಲ್ಲಿ ಸುಂದರವಾದ ಬದಲಾವಣೆ ತರುವುದು ಬಹಳ ಪ್ರೋತ್ಸಾಹಕಾರಿಯಾಗಿರುತ್ತದೆ. ಸಮಾಜದಲ್ಲಿ ಆರೋಗ್ಯ ರಕ್ಷಣೆ ಬಹಳ ಪರಿಣಾಮಕಾರಿಯಾಗಿರುತ್ತದೆ ಎಂದರು.
ಜೆಎನ್‌ಎಂಸಿ ಪ್ರಾಚಾರ್ಯ ಡಾ.ರಾಜೇಶ ಪವಾರ ಮಾತನಾಡಿ, ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಆಗಮಿಸದೇ ಕಾಲಹರಣ ಮಾಡುವುದರಿಂದ ಸುವರ್ಣ ಘಳಿಗೆಯು ಕೊನೆಗೊಂಡು ಪ್ರಾಣಹಾನಿಯಾಗುವ ಸಂದರ್ಭ ಅಧಿಕವಾಗಿರುತ್ತದೆ. ಇಂದಿನ ಆಧುನಿಕತೆಯಲ್ಲಿ ಸಮೀಪದಲ್ಲಿರುವ ಆಸ್ಪತ್ರೆಗಳ ಮಾಹಿತಿ ಬೆರಳ ತುದಿಯಲ್ಲಿ ಸಿಗುತ್ತದೆ. ಆದ್ದರಿಂದ ಪ್ರಾಣಹಾನಿ ತಪ್ಪಿಸಲು ವೈದ್ಯರೊಂದಿಗೆ ಸಾರ್ವಜನಿಕರೂ ಕೈಜೋಡಸಬೇಕು ಎಂದರು.
ಬಿ.ಎಸ್.ಜಿರಗೆ ದತ್ತಿ ಉಪನ್ಯಾಸದಲ್ಲಿ ಸಶಸ್ತ್ರ ಪಡೆಯ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಕಮಾಂಡೆಂಟ್ ಲೆಪ್ಟಿನಂಟ್ ಜನರಲ್ ಪಂಕಜ ಪಿ. ರಾವ್ ಮಾತನಾಡಿ, ಇಂದು ಯುದ್ದದ ಮುಖಚರ್ಯೆ ಬದಲಾಗಿದೆ. ಗಡಿಯಲ್ಲಿ ಸೆಣಸಾಡುವ ಬದಲಿಗೆ ಸೈಬರ ದಾಳಿ, ವೈದ್ಯಕೀಯ ವ್ಯವಸ್ಥೆಯ ಮೇಲೆ ದಾಳಿ ಹಾಗೂ ಯಾವುದೋ ಮೂಲೆಯಲ್ಲಿ ಕುಳಿತು ಯುದ್ದ ಮಾಡಲಾಗುತ್ತಿದೆ. ಹೀಗಾಗಿ, ಭಾರತೀಯ ಸೇನೆಯು ದೇಶದ ವಿವಿಧ ಪ್ರದೇಶಗಳಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಹಾಸಿಗೆಗಳ ಆಸ್ಪತ್ರೆಯನ್ನು ಹೊಂದಿದ್ದು, ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸುವ ಸಕಲ ವ್ಯವಸ್ಥೆ ಹೊಂದಿದೆ ಎಂದು ವಿವರಿಸಿದರು.
ಸೈಂಟಿಫಿಕ್ ಸೊಸೈಟಿಯ ಜರ್ನಲ್ ಈ ವೇಳೆ ಬಿಡುಗಡೆಗೊಂಡಿತು. ಕಾಹೆರ್ ಕುಲಸಚಿವ ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ, ಉಪಪ್ರಾಚಾರ್ಯ ಡಾ.ಶಿವಾನಂದ ಬುಬನಾಳೆ, ಡಾ.ನಯನಾ ಹಾಶೀಲಕರ, ವೈದ್ಯಕೀಯ ಅಧೀಕ್ಷಕ ಡಾ.ಆರಿಫ್ ಮಾಲ್ದಾರ, ಸಂಘಟನಾ ಕಾರ್ಯಾಧ್ಯಕ್ಷ ಹಾಗೂ ಎಲಬು ಕೀಲು ವಿಭಾಗದ ಮುಖ್ಯಸ್ಥ  ಡಾ.ರವಿ ಎಸ್. ಜತ್ತಿ, ಡಾ.ಎಸ್.ವಿ.ಉದಪುಡಿ, ಕಾರ್ಯದರ್ಶಿ ಡಾ. ರಮೇಶ ಕೌಜಲಗಿ, ಡಾ.ಆರತಿ ಭೋಸಲೆ ಇತರರಿದ್ದರು.

Spread the love

About Laxminews 24x7

Check Also

ಬಾಣಂತಿ, ಮಗು ಸಾವು – ಬಿಮ್ಸ್ ವೈದ್ಯರ ನಿರ್ಲಕ್ಷ್ಯ ಆರೋಪ

Spread the loveಬೆಳಗಾವಿ: ಬಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಹಾಗೂ ಮಗು ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ತುರಮರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ