ಬೆಳಗಾವಿ:ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಂಸತ್ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪದಿಂದಾಗಿ ಕೇಂದ್ರ ಸರ್ಕಾರವು ನಾರಿ ಶಕ್ತಿ ವಂದನ ಅಧಿನಿಮಯ ಜಾರಿಗೊಳಿಸುವ ಮೂಲಕ ಗತಕಾಲದ ಕನಸುಗಳನ್ನು ಸಾಕಾರಗೊಳ್ಳಿಸುವುದು ಅಲ್ಲದೆ, ಭವಿಷ್ಯದ ಸಂಕಲ್ಪ ಈಡೇರಲಿವೆ ಎಂದರು.
2023ರಲ್ಲಿ ಈ ಕಾಯ್ದೆಯನ್ನು ಮಂಡಿಸಿದಾಗ ಎಲ್ಲ ಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿದ್ದವು. 2029ರ ವೇಳೆಗೆ ಇದನ್ನು ಜಾರಿಗೊಳಿಸಬೇಕು ಎಂದು ಎಲ್ಲರೂ ಸಾಮೂಹಿಕ ಬೇಡಿಕೆಯಾಗಿತ್ತು. ಏ,16,17 ಮತ್ತು 18ರಂದು ನಡೆಯಲಿರುವ ಸಂಸತ್ತಿ ವಿಶೇಷ ಅಧಿವೇಶನದಲ್ಲಿ ನಾರಿ ಶಕ್ತಿ ವಂದನ ಅಧಿನಿಮಯದ ಹೊಸ ರೂಪದಲ್ಲಿ ಬರಲಿದೆ ಎಂದು ತಿಳಿಸಿದರು.
ಈಗಾಗಲೇ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯು ಮಹಿಳಾ ಪ್ರಾತಿನಿಧ್ಯವು ಸಾರ್ವಜನಿಕ ನೀತಿ ಹೆಚ್ಚು ಸಾರ್ವಜನಿಕ ಸ್ನೇಹಿ ಮತ್ತು ಪರಿಣಾಮಕಾರಿಯಾಗಿ ಮಾಡಿದೆ. ಇದು ಸಂಸತ್ತು ಮತ್ತು ಶಾಸಕಾಂಗ ಸಭೆಯ ಮಟ್ಟದಲ್ಲಿ ಗೋಚರಿಸುತ್ತದೆ. ಅಭಿವೃದ್ಧಿಯನ್ನು ಹೆಚ್ಚು ಸಮತೋಲಿತ ಮತ್ತು ಸಮಗ್ರವಾಗಿರುತ್ತದೆ. ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನವು ಸಾಮಾಜಿಕ ಗ್ರಹಿಕೆಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿದೆ. ಸುಖನ್ಯಾ ಸಮೃದ್ಧಿ ಯೋಜನೆಯಡಿ 46 ಮಿಲಿನಿಯನ್‌ಗಿಂತಲೂ ಹೆಚ್ಚು ಖಾತೆ ತರೆಯಲಾಗಿದೆ. ಮಾತೃ ವಂದಾನ ಯೋಜನೆಯಡಿ 42.7 ಮಿಲಿಯನ್ ಹೆಚ್ಚು ಮಹಿಳೆಯರು ಪೌಷ್ಠೀಕಾಂಶ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದರು.
ದೇಶದಲ್ಲಿ ನಾರಿ ಶಕ್ತಿ ವಂದನಾ ಕಾಯ್ದೆಯನ್ನು ಪರಿಣಾಮಕಾತಿಯಾಗಿ ಜಾರಿಗೆ ತರಲು ಕೇಂದ್ರ ಸರ್ಕಾರವು ಬಲವಾದ ಅಡಿಪಾಯ ಸೃಷ್ಟಿಸಿದೆ.ಸಂಸತ್ತು ಮತ್ತು ಶಾಸಕಾಂಗ ಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾದಂತೆ ಹೊಸ ನೀತಿ ರೂಪಿಸುವಲ್ಲಿ ಮಹಿಳೆಯರು ಸಕ್ರಮ ಪಾತ್ರ ವಹಿಸಲಿದ್ದಾರೆ. ಈ ಕಾಯ್ದೆಯು ಕೇವಲ ಸಾಂವಿಧಾನಿಕ ನಿಬಂಧನೆಯಲ್ಲ. ಆದರೆ, ಅಭಿವೃದ್ಧಿ ಹೊಂದಿದ ಭಾರತ 2047ರ ದೃಷ್ಟಿ ಕೋನವನ್ನು ಸಾಧಿಸುತ್ತದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಉಜ್ವಲಾ ಬಡವನಾಚೆ, ಭಾರತಿ ಮೊಗದೂಮ್ಮ ಇತರರಿದ್ದರು.
Laxmi News 24×7