ಬೆಳಗಾವಿ: ಬೆಳಗಾವಿಯ ಶೆಟ್ಟಿ ಗಲ್ಲಿಯಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸ ಓಡಾಡುತ್ತಿದ್ದ ವ್ಯಕ್ತಿ ವಿರುದ್ಧ ಮಾರ್ಕೆಟ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸುಜಲ್ ಕೃಷ್ಣಾನಾಥ ಪಾಟೀಲ (19) ಬಂಧಿತ ಆರೋಪಿ. ಆರೋಪಿಯನ್ನು ಹಿಡಿದುಕೊಂಡು ವಿಚಾರಣೆ ಮಾಡಿದಾಗ ಮಾದಕ ಪದಾರ್ಥ ಸೇವನೆ ಮಾಡಿರುವುದು ಕಂಡು ಬಂದಿದೆ. ಮಾರ್ಕೆಟ್ ಪೊಲೀಸ್ ಪಿಎಸ್ಐ ವಿಠಲ ಹಾವನ್ನವರ ಹಾಗೂ ಸಿಬ್ಬಂದಿಯವರು ಆರೋಪಿತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವನ ವಿರುದ್ಧ ಮಾರ್ಕೆಟ್ ಪೋಲೀಸ್ ಠಾಣೆ ಪ್ರಕರಣ ಸಂಖ್ಯೆ.51/2026 ಕಲಂ.27(b) …
Read More »ಸರಸ್ವತಿ, ಜಾವೇದ್ ಯೂನಿವರ್ಸಿಟಿ ಬ್ಲೂ
ಸವದತ್ತಿ: ನಗರದ ಕೆಎಲ್ಇ ಸಂಸ್ಥೆಯ ಎಸ್ವಿಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪರವಾಗಿ ಏರ್ಪಡಿಸಿದ್ದ ಹ್ಯಾಂಡ್ಬಾಲ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ. ಬಿಎ ತೃತೀಯ ವರ್ಷದ ವಿದ್ಯಾರ್ಥಿನಿ ಸರಸ್ವತಿ ಮಾದರ ಮಹಿಳಾ ಹ್ಯಾಂಡ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದು, ಮಾ.22ರಿಂದ 26ರವರೆಗೆ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ದಣ ಭಾರತ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ತಂಡದಿವನ್ನು ಪ್ರತಿನಿಧಿಸಲಿದ್ದಾರೆ. ಬಿಕಾಂ …
Read More »ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ
ನಿಪ್ಪಾಣಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಅಭಿವದ್ಧಿ ಹಾಗೂ ನಿಪ್ಪಾಣಿ ಕ್ಷೇತ್ರದ ವಿಕಾಸವನ್ನು ಮೆಚ್ಚಿ ಭೀಮಾಪುರವಾಡಿ ಗ್ರಾಮದ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು. ನಗರದ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಸಭಾಭವನದಲ್ಲಿ ಗುರುವಾರ ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ಸೇರ್ಪಡೆಯಿಂದ ಬಿಜೆಪಿ ಶಕ್ತಿ ಮತ್ತಷ್ಟು ಹೆಚ್ಚಿದೆ. ಕಾರ್ಯಕರ್ತರ ಆಶಯದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು …
Read More »ಗಡಿ ಗ್ರಾಮಗಳಲ್ಲಿ ಜಲ ಸಮಸ್ಯೆ
ಸಂಬರಗಿ: ಶಿರೂರು, ಪಾಂಡೇಗಾಂವ್, ಜಂಬಗಿ, ಸಂಬರಗಿ, ಜಕಾರಟಿ ಸೇರಿದಂತೆ ಗಡಿಭಾಗದ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ. ಕೃಷಿ ಜಮೀನಿಗೂ ನೀರಿನ ಕೊರತೆ ಕಾಡುತ್ತಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ರೈತರು ಅಗ್ರಹಿಸಿದ್ದಾರೆ. ಜಲ ಜೀವನ ಯೋಜನೆಯಡಿ ನಿರಂತರ ನೀರು ಸರಬರಾಜು ಸ್ಥಗಿತಗೊಂಡಿದೆ. ಜಿಲ್ಲಾಡಳಿತ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ, ಅಧಿಕಾರಿಗಳು ಸೂಚನೆ ಪಾಲಿಸುತ್ತಿಲ್ಲ. ಇದರಿಂದ ನೀರಿನ ಸಮಸ್ಯೆ ದಿನೇದಿನೆ …
Read More »ಐಶ್ವರ್ಯಾಗೆ ಮಿಸೆಸ್, ಲಬ್ಧಿಗೆ ಮಿಸ್ ಪಟ್ಟ
ನಿಪ್ಪಾಣಿ: ಜೊಲ್ಲೆ ಗ್ರೂಪ್, ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ವತಿಯಿಂದ ಕೃಷಿ ಉತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮಿಸೆಸ್’ ನಿಪ್ಪಾಣಿ ಸ್ಪರ್ಧೆಯಲ್ಲಿ ನಗರದ ಐಶ್ವರ್ಯಾ ಖಾಂಡಕೆ ಪ್ರಥಮ, ಅನುರಾಧಾ ಮೇಸ್ತ್ರೀ ಮತ್ತು ರಾಜಶ್ರೀ ಪಾಟೀಲ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ‘ಮಿಸ್’ ನಿಪ್ಪಾಣಿ ಸ್ಪರ್ಧೆಯಲ್ಲಿ ಲಬ್ಧಿ ಶಾ. ಪ್ರಥಮ, ರೋಹಿಣಿ ಪಾಟೀಲ ಮತ್ತು ಮಾನಸಿ ಸದಾವರ್ತೆ ಕ್ರಮವಾಗಿ ದ್ವಿತೀಯ ಮತ್ತು ತೃತೀಯ …
Read More »ಕೃಷಿ ಉತ್ಸವಕ್ಕೆ ಉತ್ತಮ ಸ್ಪಂದನೆ
ನಿಪ್ಪಾಣಿ: ರೈತರಿಗೆ ಅನುಕೂಲಕ್ಕಾಗಿ ಕೃಷಿ ಉತ್ಸವ ಹಮ್ಮಿಕೊಳ್ಳಲಾಗಿದೆ. ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕಳೆದ ವರ್ಷಕ್ಕಿಂತ ಹೆಚ್ಚು ರೈತರು ಕೃಷಿ ಉತ್ಸವಕ್ಕೆ ಆಗಮಿಸುತ್ತಿರುವುದು ಖುಷಿ ತಂದಿದೆ ಎಂದು ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು. ನಗರದಲ್ಲಿ ಜೊಲ್ಲೆ ಗ್ರೂಪ್ ಮತ್ತು ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕೃಷಿ ಉತ್ಸವದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದರು. ಉತ್ಸವದಲ್ಲಿ ಕೃಷಿಗೆ ಸಂಬಂಧಿತ ವಿವಿಧ ಬೀಜಗಳು, ರಸಗೊಬ್ಬರಗಳು, ಯಂತ್ರೋಪಕರಣಗಳು ಕಾರ್ಯವಿಧಾನದ ಮಾಹಿತಿ ಪಡೆದುಕೊಂಡರು. …
Read More »ನಾಗರಮುನ್ನೋಳಿ ಪ್ರೌಢಶಾಲೆ ಉನ್ನತೀಕರಣ
ಚಿಕ್ಕೋಡಿ: ನಾಗರಮುನ್ನೋಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲು ಶಾಲಾ ಶಿಕ್ಷಣ ಸಾಕ್ಷರತಾ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು. ತಾಲೂಕಿನ ನಾಗರಮುನ್ನೋಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನಲೆ, ಈಚೆಗೆ ಗ್ರಾಮಸ್ಥರು ಅವರನ್ನು ಪಟ್ಟಣದ ಸ್ವಗೃಹ ಕಚೇರಿ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ನಾಗರಮುನ್ನೋಳಿ ಗ್ರಾಪಂ ಅಧ್ಯಕ್ಷ, ಸದಸ್ಯರು ಮುಖ್ಯಶಿಕ್ಷಕ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು …
Read More »ಸುಂದರ ಮತ್ತು ಹಸಿರು ಯರಗಟ್ಟಿ ನಮ್ಮ ಗುರಿ: ಉದ್ಯಾನವನ ಅಭಿವೃದ್ಧಿಗೆ ಚಾಲನೆ
ಯರಗಟ್ಟಿ ಪಟ್ಟಣದ ಜನತೆಗೆ ಹಾಗೂ ವಿಶೇಷವಾಗಿ ವಿಜಯ ನಗರದ ನಿವಾಸಿಗಳಿಗೆ ಇಂದು ಸಂತಸದ ದಿನ. ಸನ್ 2024-25ನೇ ಸಾಲಿನ ಅಮೃತ-2.0 ಯೋಜನೆಯಡಿಯಲ್ಲಿ, ಯರಗಟ್ಟಿ ಪಟ್ಟಣದ ವಿಜಯ ನಗರದಲ್ಲಿ ಉದ್ಯಾನವನ (Park) ಅಭಿವೃದ್ಧಿ ಪಡಿಸುವ ಮಹತ್ವಾಕಾಂಕ್ಷೆಯ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಯೋಜನೆಯ ಮುಖ್ಯಾಂಶಗಳು: ✨ ಸ್ಥಳ: ವಿಜಯ ನಗರ, ಯರಗಟ್ಟಿ ಪಟ್ಟಣ. ✨ ಯೋಜನೆ: ಅಮೃತ-2.0 ಯೋಜನೆ (ಕರ್ನಾಟಕ ಸರ್ಕಾರ). ✨ ಉದ್ದೇಶ: ಸ್ಥಳೀಯ ನಿವಾಸಿಗಳಿಗೆ, …
Read More »3.23 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ: ಪೂಜೆ ನೆರವೇರಿಸಿ ಚಾಲನೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುವೆಂಪು ನಗರದ ಕೆ.ಎಲ್.ಇ ಇಂಟರ್ನ್ಯಾಷನಲ್ ಸ್ಕೂಲ್ ನ ಮುಖ್ಯ ರಸ್ತೆ ಹಾಗೂ ಜಯನಗರದ ಪ್ರಮುಖ ರಸ್ತೆಗಳ ನಿರ್ಮಾಣಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಶನಿವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ಸುಮಾರು 3.23 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆಗಳು ನಿರ್ಮಾಣಗೊಳ್ಳಲಿವೆ. ನಿಗದಿತ ಸಮಯದಲ್ಲಿ, ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಈ ವೇಳೆ ಸ್ಥಳೀಯ ನಿವಾಸಿಗಳು …
Read More »ಎರಡು ದಿನಗಳ ಉಚಿತ ಶ್ರವಣ ಪರೀಕ್ಷಾ ಶಿಬಿರ
ಬೆಳಗಾವಿ: ಯುಗಾದಿ ಹಬ್ಬದ ಅಂಗವಾಗಿ ವಿಶ್ವ ಸ್ಪೀಚ್ ಆ್ಯಂಡ್ ಹಿಯರಿಂಗ್ ಎಯ್ಡ್ ಸೆಂಟರ್ ವತಿಯಿಂದ ಮಾ.15 ಮತ್ತು 16ರಂದು ಬೆಳಗ್ಗೆ 10.30ರಿಂದ ಸಂಜೆ 6.30ರ ವರೆಗೆ ನಗರದ ಛತ್ರಪತಿ ಶಿವಾಜಿ ರಸ್ತೆಯಲ್ಲಿರುವ ರೇಡಿಯೋ ಕಾಂಪ್ಲೆಕ್ಸ್‌ದಲ್ಲಿ ಉಚಿತ ಶ್ರವಣ ಪರೀಕ್ಷಾ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಎಲ್ಲ ವಯೋಮಾನದವರಿಗೂ ಉಚಿತವಾಗಿ ಕಿವಿ ಕೇಳುವಿಕೆ (ಶ್ರವಣ) ಪರೀಕ್ಷೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಶ್ರವಣ ಸಮಸ್ಯೆಗಳು ಕಂಡು ಬರುತ್ತಿದೆ. ಮಕ್ಕಳಿಂದ ವಯೋವೃದ್ಧರ ತನಕ ಕಡಿಮೆ …
Read More »
Laxmi News 24×7