Breaking News

ಗಡಿ ಗ್ರಾಮಗಳಲ್ಲಿ ಜಲ ಸಮಸ್ಯೆ

Spread the love

ಸಂಬರಗಿ: ಶಿರೂರು, ಪಾಂಡೇಗಾಂವ್, ಜಂಬಗಿ, ಸಂಬರಗಿ, ಜಕಾರಟಿ ಸೇರಿದಂತೆ ಗಡಿಭಾಗದ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ. ಕೃಷಿ ಜಮೀನಿಗೂ ನೀರಿನ ಕೊರತೆ ಕಾಡುತ್ತಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ರೈತರು ಅಗ್ರಹಿಸಿದ್ದಾರೆ. ಜಲ ಜೀವನ ಯೋಜನೆಯಡಿ ನಿರಂತರ ನೀರು ಸರಬರಾಜು ಸ್ಥಗಿತಗೊಂಡಿದೆ. ಜಿಲ್ಲಾಡಳಿತ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ, ಅಧಿಕಾರಿಗಳು ಸೂಚನೆ ಪಾಲಿಸುತ್ತಿಲ್ಲ. ಇದರಿಂದ ನೀರಿನ ಸಮಸ್ಯೆ ದಿನೇದಿನೆ ಹೆಚ್ಚುತ್ತಿದೆ. ತೋಟಪಟ್ಟಿ ಪ್ರದೇಶದಲ್ಲಿನ ಮಹಿಳೆಯರು ನೀರು ತರಲು ಕಿ.ಮೀ.ಗಟ್ಟಲೇ ನಡೆದು ಹೋಗಬೇಕಿದೆ. ಸಂಬಂಧಪಟ್ಟವರು ನೀರು ಪೂರೈಕೆಗೆ ತುರ್ತು ಕ್ರಮವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಅಂತರರಾಷ್ಟ್ರೀಯ ರೋಬೋಟಿಕ್ಸ್ ಸ್ಪರ್ಧೆ ಗೆದ್ದ ಬೆಳಗಾವಿ ವಿದ್ಯಾರ್ಥಿಗಳು

Spread the love ಬೆಳಗಾವಿ : ನಗರದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಒಬ್ಬರು ವಿದ್ಯಾರ್ಥಿಗಳು ಇಂಡೋನೇಷ್ಯಾದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ