Breaking News

Laxminews 24x7

ಜಾಮೀನಿನ ಮೇಲೆ ಹೊರಬಂದ ಬೆನ್ನಲ್ಲೇ ಮತ್ತೆ ಅಕ್ರಮ ಗರ್ಭಪಾತ ದಂಧೆ?

ಬಾಗಲಕೋಟೆ: ಅಕ್ರಮ ಗರ್ಭಪಾತ ಹಾಗೂ ಹೆಣ್ಣು ಭ್ರೂಣಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ನಕಲಿ ವೈದ್ಯೆಯೊಬ್ಬಳು, ಮತ್ತೆ ಅದೇ ಕರಾಳ ದಂಧೆಯಲ್ಲಿ ಸಕ್ರಿಯವಾಗಿರುವ ಗಂಭೀರ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಆಕೆಯ ಮನೆಗೆ ಭೇಟಿ ನೀಡಿ ಕಠಿಣ ಎಚ್ಚರಿಕೆಯ ನೋಟಿಸ್ ಅಂಟಿಸಿದ್ದಾರೆ. ಮಹಾಲಿಂಗಪುರ ಪಟ್ಟಣದ ನಿವಾಸಿ ಕವಿತಾ ಬಾಡನವರ ಈ ಹಿಂದೆ …

Read More »

ಮಾಂಜಾ ದಾರ ಸಿಲುಕಿ ಬೈಕ್‌ ಸವಾರ ಸಾವು – ಕಠಿಣ ಕ್ರಮಕ್ಕೆ ಮುಂದಾದ ಪಾಲಿಕೆ

ಬೆಳಗಾವಿ: ಗಾಳಿಪಟದ ಮಾಂಜಾ ದಾರ  ಸಿಲುಕಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮಹಾಂತೇಶ್ ನಗರದ ನಿವಾಸಿ ದ್ರುವ ಸಂತೋಷ ಕರ್ಜಗಿ (19) ಮೃತ ದುರ್ದೈವಿ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮೃತ ದ್ರುವ ಮರಣೋತ್ತರ ಪರೀಕ್ಷೆ ನಡೆದಿದೆ. ಇದ್ದ ಒಬ್ಬ ಮಗನನ್ನೂ ಕಳೆದುಕೊಂಡ ಪೋಷಕರ ಆಕ್ರಂದನ ಶವಾಗಾರದ ಬಳಿ ಮುಗಿಲುಮುಟ್ಟಿತ್ತು. ಮಾಂಜಾ ದಾರವನ್ನು ಬ್ಯಾನ್ ಮಾಡಲಾಗಿದ್ದರೂ ಪೊಲೀಸರು, ಪಾಲಿಕೆ ಅಧಿಕಾರಿಗಳು ಯಾವ ಕ್ರಮವನ್ನು ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆಕ್ರೋಶ …

Read More »

ಶ್ರೀನಿವಾಸ ಸಾಗರ ಡ್ಯಾಮ್‌ನಲ್ಲಿ ಮುಳುಗಿ ತಾಯಿ, ಮಗ ದುರ್ಮರಣ – ತಂದೆ, ಮಗಳು ಪಾರು

ಚಿಕ್ಕಬಳ್ಳಾಪುರ: ಶ್ರೀನಿವಾಸ ಸಾಗರ ಡ್ಯಾಮ್‌ಗೆ ಪ್ರವಾಸಕ್ಕೆ ಬಂದಿದ್ದ ತಾಯಿ, ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಮುಳುಗುತ್ತಿದ್ದ ತಂದೆ ಹಾಗೂ ಮಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ರೇಖಾ (39) ಹೇಮಂತ್ (19) ಮೃತ ದುರ್ದೈವಿಗಳು. ರಾಜು ಹಾಗೂ ಮಗಳು ದೀಪ ಅಪಾಯದಿಂದ ಪಾರಾಗಿದ್ದಾರೆ. ಆಟೋ ಚಾಲಕರಾಗಿರುವ ರಾಜು, ಮಕ್ಕಳಿಗೆ ಗಾಂಧಿ ಜಯಂತಿ ರಜೆ ಇದ್ದಿದ್ದರಿಂದ ಕುಟುಂಬ ಸಮೇತ ಜಲಾಶಯಕ್ಕೆ ಬಂದಿದ್ದರು. ಈ ವೇಳೆ, ಜಲಾಶಯದ ನೀರಿನಲ್ಲಿ ಆಟ ಆಡಲು ನೀರಿನಲ್ಲಿ …

Read More »

ಬಾಲಿ ಟ್ರಿಪ್‌ ವೇಳೆ ಅಪಘಾತ; ಬೆನ್ನು ಮೂಳೆ ಮುರಿದುಕೊಂಡ ಬಾಲಿವುಡ್‌ ನಟಿ ನುಸ್ರತ್​

ಮುಂಬೈ: ಖ್ಯಾತ ಬಾಲಿವುಡ್ ನಟಿ ನುಸ್ರತ್ ಭರುಚಾಗೆ  ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಅವರ ಬೆನ್ನುಮೂಳೆ ಮುರಿದುಕೊಂಡಿದ್ದಾರೆ. ಸದ್ಯ ನುಸ್ರತ್ ಬಾಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸಿನಿಮಾ ತಂಡದ ಪ್ರಚಾರಕಿ ಸಂಚಿತಾ ತ್ರಿವೇದಿ ಮಾಹಿತಿ ನೀಡಿದ್ದು, ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳ ಬಳಿಕ ನುಸ್ರತ್ ಅವರ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಬಾಲಿಯಿಂದ ಮುಂಬೈಗೆ ವಿಮಾನದ ಮೂಲಕ ಕರೆತರಲು ಸಿದ್ಧತೆ ನಡೆಯುತ್ತಿದ್ದು, …

Read More »

ಒಂದೇ ದಿನ 6 ಚಿನ್ನ ಸೇರಿ 10 ಪದಕ – 5ನೇ ಸ್ಥಾನಕ್ಕೆ ಭಾರತ ಹೈಜಂಪ್‌

ನಗೋಯ: ಏಷ್ಯನ್‌ ಗೇಮ್ಸ್‌ನಲ್ಲಿ ಇಂದು ಭಾರತ ಒಂದೇ ದಿನ 6 ಚಿನ್ನದ ಪದಕವನ್ನು ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ. ಗುರುವಾರ ಭಾರತ 10 ಚಿನ್ನ, 23 ಬೆಳ್ಳಿ, 33 ಕಂಚಿನ ಪದಕವನ್ನು ಸೇರಿ ಒಟ್ಟು 66 ಪದಕ ಪಡೆಯುವ ಮೂಲಕ 8ನೇ ಸ್ಥಾನದಲ್ಲಿತ್ತು. ಆದರೆ ಇಂದು 6 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕ ಸೇರಿ ಒಟ್ಟು 10 ಪದಕ ಪಡೆದಿದೆ. ಇಂದು ಬಾಕ್ಸಿಂಗ್‌ನಲ್ಲಿ …

Read More »

ಜ್ಞಾನೇಶ್ ಕುಮಾರ್ ರಿಸೈನ್‌ ಮಾಡದಿದ್ದರೆ ಮೋದಿ ರಾಜೀನಾಮೆಗೆ ದೇಶವ್ಯಾಪಿ ಹೋರಾಟ: ಅಭಿಜಿತ್‌ ದೀಪ್ಕೆ

ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು, ಒಂದು ವೇಳೆ ಅವರು ರಾಜೀನಾಮೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ನಾವು ನೇರವಾಗಿ ನರೇಂದ್ರ ಮೋದಿ i ಅವರ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಹೇಳಿದ್ದಾರೆ. ಮುಂಬೈ ಶಿವಾಜಿ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಜ್ಞಾನೇಶ್ ಕುಮಾರ್ …

Read More »

ಫ್ಲೈದುಬೈ ವಿಮಾನದಲ್ಲಿ ನಡೆದ ಘಟನೆ ಭಯೋತ್ಪಾದಕ ಕೃತ್ಯ: ಸ್ಮಿತ್ ಮಚ್ಚರ್ ಸಾಹಸಕ್ಕೆ ಯುಎಇ ಶ್ಲಾಘನೆ

ದುಬೈ: ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ  ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ಹಲ್ಲೆಯ ಘಟನೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್  ಅಧಿಕೃತವಾಗಿ ಭಯೋತ್ಪಾದಕ ಕೃತ್ಯ ಎಂದು ಕರೆದಿದೆ. ಘಟನೆಯ ಉದ್ದೇಶ ಹಾಗೂ ಹಿನ್ನೆಲೆಯ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿರುವ ಬೆನ್ನಲ್ಲೇ, ಗಂಭೀರ ಅಪಾಯದ ನಡುವೆಯೂ ಪರಿಸ್ಥಿತಿಯನ್ನು ನಿಯಂತ್ರಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸ ಮತ್ತು ಜವಾಬ್ದಾರಿಯನ್ನು ಯುಎಇ ಅಧ್ಯಕ್ಷರ ಸಲಹೆಗಾರ ಅನ್ವರ್ ಗರ್ಗಾಶ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ …

Read More »

ಗುಜರಾತ್‌ ಏಕರೂಪ ನಾಗರಿಕ ಸಂಹಿತೆಗೆ ಮುರ್ಮು ಸಹಿ – ಬುಡಕಟ್ಟು ಸಮುದಾಯಕ್ಕೆ ವಿನಾಯಿತಿ

ಗಾಂಧಿನಗರ: ಉತ್ತರಾಖಂಡದ ಬೆನ್ನಲ್ಲೇ ದೇಶದಲ್ಲೇ ಎರಡನೇ ರಾಜ್ಯವಾಗಿ ಗುಜರಾತ್ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸಜ್ಜಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುಜರಾತ್ ಏಕರೂಪ ನಾಗರಿಕ ಸಂಹಿತೆ ಮಸೂದೆ, 2026ಕ್ಕೆ ತಮ್ಮ ಅಂಕಿತ ಹಾಕಿದ್ದಾರೆ. ರಾಜ್ಯ ಸರ್ಕಾರವು ನಿಯಮಾವಳಿಗಳ ಅಧಿಸೂಚನೆ  ಹೊರಡಿಸಿದ ನಂತರ ಈ ನೂತನ ಕಾಯ್ದೆ ಸಂಪೂರ್ಣವಾಗಿ ಜಾರಿಗೆ ಬರಲಿದೆ. ಪರಿಶಿಷ್ಟ ಪಂಗಡಗಳ  ಸಮುದಾಯವನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಗುಜರಾತ್ ವಿಧಾನಸಭೆಯಲ್ಲಿ ಸುಮಾರು ಏಳು ಮುಕ್ಕಾಲು …

Read More »

ಕಾವೇರಿ ನೀರು ಹರಿವು 2,000 ಕ್ಯೂಸೆಕ್‌ ಇಳಿಸಲು CWMAಗೆ ಕರ್ನಾಟಕ ಮನವಿ: ಚಲುವರಾಯಸ್ವಾಮಿ

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿ ಹಾಗೂ ಜಲಾಶಯಗಳಲ್ಲಿ ನೀರಿನ ಅಭಾವದ ಹಿನ್ನೆಲೆಯಲ್ಲಿ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ  ಸೆಪ್ಟೆಂಬರ್ 24, 2026ರಂದು ನಡೆದ 58ನೇ ಸಭೆಯಲ್ಲಿ ನೀಡಿದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಕರ್ನಾಟಕ ಸರ್ಕಾರ ಇಂದು ಪ್ರಾಧಿಕಾರಕ್ಕೆ ಅಧಿಕೃತ ಮನವಿ ಸಲ್ಲಿಸಿದೆ ಎಂದು ಜಲ ಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಸಭೆಯಲ್ಲಿ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 4,000 …

Read More »

ಪೂವಮ್ಮಗೆ ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ – ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ

ಮಂಗಳೂರು: ಏಷ್ಯನ್ ಗೇಮ್ಸ್ ರಿಲೇಯಲ್ಲಿ ಚಿನ್ನದ ಪದಕ ಗೆದ್ದಿರುವ ಕರ್ನಾಟಕದ ಕ್ರೀಡಾಪಟು ಎಂ.ಆರ್. ಪೂವಮ್ಮ  ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೂವಮ್ಮ ಅವರಿಗೆ ಅಭಿಮಾನಿಗಳು ಹಾಗೂ ಕ್ರೀಡಾಭಿಮಾನಿಗಳಿಂದ ಅದ್ಧೂರಿ ಸ್ವಾಗತ ದೊರೆಯಿತು. ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಂ.ಆರ್. ಪೂವಮ್ಮ, ದೇಶಕ್ಕೆ ಮೆಡಲ್ ತಂದುಕೊಟ್ಟಿರುವುದು ನನಗೆ ತುಂಬಾ ಖುಷಿ ನೀಡಿದೆ. ಆದರೆ, ರಾಜ್ಯ ಸರ್ಕಾರದಿಂದ ನಿರೀಕ್ಷಿತ ಪ್ರೋತ್ಸಾಹ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ …

Read More »