ಬೆಳಗಾವಿ: ಕೊರೊನಾ ಸೋಂಕು ತಡೆಗಟ್ಟಲು ಸಲುವಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ನಗರ ಜನತೆಗೆ ಅಗತ್ಯ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆ ಆರಂಭಿಸಲಾಗುವುದು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು, ಜನರು ಅನಗತ್ಯವಾಗಿ ಹೊರಗೆ ಬರುವುದನ್ನು ತಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಸಂಬಂಧಪಟ್ಟ ವ್ಯಾಪಾರಿಗಳು ಮತ್ತು ಜಿಲ್ಲಾಧಿಕಾರಿ, ಆಹಾರ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಚರ್ಚೆ ಮಾಡಲಾಗಿದೆ. ಮನೆ ಮನೆಗೆ ತರಕಾರಿ ಸೇರಿ ಅಗತ್ಯ ದಿನಸಿ ಸರಬರಾಜು ಮಾಡುವ ವ್ಯಾಪಾರಸ್ತರ ವಾಟ್ಸಪ್ ನಂಬರ್ ಜನರಿಗೆ ನೀಡಲಾಗುವುದು. ಜತೆಗೆ ಸಾರಿಗೆ ವ್ಯವಸ್ಥೆ ಮೂಲಕ ಮನೆ ಮನೆ ಬಾಗಿಲಿಗೆ ಸಾಮಗ್ರಿ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು.
ನೈಜ ಬೆಲೆಗೆ ಅಗತ್ಯ ಸಾಮಗ್ರಿಗಳು ದೊರಕಲಿ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಜನರು ಇದಕ್ಕೆ ಸ್ಪಂದಿಸಿ ಅನಗತ್ಯ ಹೊರಗಡೆ ತಿರುಗಾಡೆ ಲಾಕ್ ಡೌನ್ ಸ್ಪಂಧಿಸುವಂತೆ ಮನವಿ ಮಾಡಿದ್ದಾರೆ.