Breaking News

ಮೇ 28 ರಂದು ಕಾಮೆಡ್‌-ಕೆ ಪರೀಕ್ಷೆ

Spread the love

ಮಂಗಳೂರು: ರಾಜ್ಯದ 150 ಎಂಜಿನಿಯರಿಂಗ್‌ ಕಾಲೇಜು ಮತ್ತು 50ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶಕ್ಕಾಗಿ ಸಂಯೋಜಿತ ಪರೀಕ್ಷೆಯಾಗಿ ಮೇ 28ರಂದು ಕಾಮೆಡ್‌-ಕೆ ಯುಗೇಟ್‌ ಮತ್ತು ಯುನಿ ಗೇಜ್‌ ಪ್ರವೇಶ ಪರೀಕ್ಷೆಗಳು ನಡೆಯಲಿವೆ.

 

ಪ್ರವೇಶ ಪರೀಕ್ಷೆಯನ್ನು ಕರ್ನಾ ಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘದೊಂದಿಗೆ ಸಂಯೋಜಿತವಾ ಗಿರುವ ಕಾಲೇಜುಗಳು ಮತ್ತು ಬಿಇ/ ಬಿಟೆಕ್‌ ತರಗತಿ ಒದಗಿಸುವ ಯುನಿ-ಗೇಜ್‌ ಸದಸ್ಯ ವಿ.ವಿ.ಗಳಿಗೆ ನಡೆಸಲಾಗುತ್ತದೆ. ದೇಶಾದ್ಯಂತ 150ಕ್ಕೂ ಹೆಚ್ಚು ನಗರಗಳಲ್ಲಿ 400 ಪರೀಕ್ಷಾ ಕೇಂದ್ರಗಳೊಂದಿಗೆ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ ಎಂದು ಕಾಮೆಡ್‌-ಕೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ| ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ. ಆಸಕ್ತ ಅರ್ಜಿದಾರರು ಜಠಿಠಿಟs://ಡಿಡಿಡಿ.cಟಞಛಿಛk.ಟ್ಟಜ ಯಲ್ಲಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆಯು ಎ. 24ರ ವರೆಗೆ ಆನ್‌ಲೈನ್‌ನಲ್ಲಿ ಲಭ್ಯವಿರಲಿದೆ.

ಕಾಮೆಡ್‌-ಕೆ ಈ ವರ್ಷ ಕಾಮೆಡ್‌ ಕರೇಸ್‌ ಪ್ರಾರಂಭಿಸಿದೆ, ಇದರಲ್ಲಿ ಭಾಗವಹಿಸುವ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೌಶಲವರ್ಧಕ ಕೋರ್ಸ್‌ಗಳ ಮೂಲಕ ಉದ್ಯೋಗಕ್ಕೆ ಸಜ್ಜುಗೊಳಿಸುತ್ತದೆ. ರಾಜ್ಯದಲ್ಲಿ ಎಂಟು ಇನ್ನೋವೇಶನ್‌ ಹಬ್‌ಗಳನ್ನು ಸ್ಥಾಪಿಸಿದೆ. ಅವುಗಳಲ್ಲಿ 4 ಬೆಂಗಳೂರಿನಲ್ಲಿದ್ದರೆ, ಉಳಿದವು ಮೈಸೂರು, ಕಲಬುರಗಿ, ಮಂಗಳೂರು, ಬೆಳಗಾವಿಯಲ್ಲಿವೆ ಎಂದರು.

ಈ ಬಾರಿ 22 ಸಾವಿರ ಸೀಟುಗಳಿದ್ದು, 10 ಸಾವಿರ ಭರ್ತಿಯಾಗುವ ನಿರೀಕ್ಷೆ ಇದೆ ಎಂದು ಎರಾ ಫೌಂಡೇಶನ್‌ ಸಿಇಒ ಪಿ. ಮುರಳಿಧರ್‌ ತಿಳಿಸಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ