ಬೆಂಗಳೂರು: ಬೆಂಗಳೂರು ಪ್ರೆಸ್ ಕ್ಲಬ್ನ 2022-23ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಆರ್. ಶ್ರೀಧರ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ವಿವರ ಮತ್ತು ಪಡೆದ ಮತಗಳು: ಆರ್.
ಶ್ರೀಧರ್ (ಅಧ್ಯಕ್ಷ, 302 ಮತಗಳು), ಆನಂದ್ ಪಿ. ಬೈದನಮನೆ (ಉಪಾಧ್ಯಕ್ಷ , 327 ಮತಗಳು), ಬಿ.ಪಿ. ಮಲ್ಲಪ್ಪ (ಪ್ರಧಾನ ಕಾರ್ಯದರ್ಶಿ, 340 ಮತಗಳು), ದೊಡ್ಡಬೊಮ್ಮಯ್ಯ (ಕಾರ್ಯದರ್ಶಿ, 176), ಮಹಾಂತೇಶ್ ಎಸ್. ಹಿರೇಮಠ (ಜಂಟಿ ಕಾರ್ಯದರ್ಶಿ, 275 ಮತಗಳು), ಮೋಹನ್ ಕುಮಾರ್ ಬಿ.ಎನ್ (ಖಜಾಂಚಿ, 412 ಮತಗಳು).
ಸಮಿತಿ ಸದಸ್ಯರಾಗಿ ಆಯ್ಕೆಯಾದವರು: ರೋಹಿಣಿ ವಿ. ಅಡಿಗ (307 ಮತಗಳು), ಜಿ. ಗಣೇಶ್ (286 ಮತಗಳು), ಮುನಿ ರಾಮೇಗೌಡ (ರವಿ)(261 ಮತಗಳು) ಡಿ. ಆಲ್ಫ್ರೆಡ್ ಟೆನ್ನಿಸನ್ (255 ಮತಗಳು), ಕೆ.ಎಸ್. ಸೋಮಶೇಖರ್ (245 ಮತಗಳು), ಯಾಸಿರ್ ಮುಸ್ತಾಕ್ (242 ಮತಗಳು), ಮಿನಿ ತೇಜಸ್ವಿ (291 ಮತಗಳು).