Breaking News

ಆಟೋ ಹತ್ತಿದ ಯುವತಿಗೆ ದಾರಿ ತಪ್ಪಿಸಿ ಹಾಡಹಗಲೇ ರೇಪ್ ಮಾಡಿದ ಆಟೋ ಚಾಲಕ..!

Spread the love

ಯಾದಗಿರಿ : ಆಟೋದಲ್ಲಿ ತೆರಳುತ್ತಿದ್ದ ವೇಳೆ ಯುವತಿಯನ್ನು ಹಾಡಹಗಲೇ ಅತ್ಯಾಚಾರ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಕೆಲಸ ಮುಗಿಸಿಕೊಂಡು ಯುವತಿ ಆಟೋದಲ್ಲಿ ಹೋಗುತ್ತಿದ್ದ ವೇಳೆ ಆಕೆಯನ್ನು ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಲು ಆಟೋ ಚಾಲಕ ಮತ್ತು ಆತನ ಸ್ನೇಹಿತ ಯತ್ನಿಸಿದ್ದಾರೆ.

ಈ ವೇಳೆ ಯುವತಿ ‘ಕಾಲಿಗೆ ಬೀಳುತ್ತೇನೆ ನನ್ನನ್ನು ಬಿಟ್ಟು ಬಿಡಿ’ ಎಂದರೂ ಬಿಡದ ಕಾಮುಕರು ಅತ್ಯಾಚಾರ ಮಾಡಿದ್ದಾರೆ. ಅದು ಅಲ್ಲದೇ ವೀಡಿಯೋ ಸಹ ಸೆರೆ ಹಿಡಿದಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು ?
ಯಾದಗಿರಿ ತಾಲೂಕಿನ ಹಳ್ಳಿಯೊಂದರ ಯುವತಿ ಮನೆ ಕೆಲಸ ಮಾಡುತ್ತಿದ್ದಳು. ಏಪ್ರಿಲ್ 26(ಮಂಗಳವಾರ) ರಂದು ಯುವತಿ ಕೆಲಸ ಮುಗಿಸಿಕೊಂಡು ಆಟೋದಲ್ಲಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಎಂ.ಹೊಸಳ್ಳಿ ಗ್ರಾಮದ ಆಟೋ ಚಾಲಕ ಹನುಮಂತ್ ಜಿನಕೇರಿ ಹೊಸಳ್ಳಿ ಗ್ರಾಮದ ಸ್ನೇಹಿತ ನರಸಪ್ಪನನ್ನು ಆಟೋದಲ್ಲಿ ಕರೆದುಕೊಂಡು ಬಂದಿದ್ದಾನೆ. ಅದಕ್ಕೆ ಯುವತಿ ಯಾದಗಿರಿ ನಗರಕ್ಕೆ ಬರುವಾಗ ಆಟೋ ನಿಲ್ಲಿಸಿ ಎಂದಿದ್ದಾಳೆ.

ಅದಕ್ಕೆ ಚಾಲಕ, ಆಟೋದಲ್ಲಿ ಡೀಸೆಲ್ ಇಲ್ಲ, ಡೀಸೆಲ್ ಹಾಕಿಸಿಕೊಂಡು ಹೊಸ ಬಸ್ ನಿಲ್ದಾಣದ ಕಡೆ ಬಿಡುತ್ತೇನೆಂದು ಹೇಳಿದ್ದಾನೆ. ಆಟೋ ಚಾಲಕ ನಗರದ ಹೊರಭಾಗದ ವರ್ಕನಳ್ಳಿಯ ನಿರ್ಜನ ಪ್ರದೇಶದ ಪಾಳು ಬಿದ್ದ ಮನೆಯಲ್ಲಿ ಕರೆದುಕೊಂಡು ಹೋಗಿ ಆಟೋ ಚಾಲಕ ಮತ್ತು ಆತನ ಸ್ನೇಹಿತ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಆಟೋ ಚಾಲಕನ ಸ್ನೇಹಿತ ಅತ್ಯಾಚಾರವೆಸಗುವ ವೀಡಿಯೋವನ್ನು ಮೊಬೈಲ್‍ನಲ್ಲಿ ಸೇರೆ ಹಿಡಿದಿದ್ದಾನೆ. ಅತ್ಯಾಚಾರ ನಡೆಸಿದ ಆಟೋ ಚಾಲಕ ಹಾಗೂ ಆತನ ಸ್ನೇಹಿತ ಯುವತಿಗೆ

ಜೀವ ಬೆದರಿಕೆಯನ್ನು ಹಾಕಿದ್ದಾರೆ ಅತ್ಯಾಚಾರ ಮಾಡುವ ವೇಳೆ ಯುವತಿ ‘ಕಾಲಿಗೆ ಬೀಳುತ್ತೇನೆ ನನ್ನನ್ನು ಬಿಟ್ಟು ಬಿಡಿ’ ಎಂದ್ರೂ, ಯುವತಿಯ ನೋವಿನ ಮಾತಿಗೆ ಸುಮ್ಮನಾಗದ ಅಟೋ ಚಾಲಕ, ಅತ್ಯಾಚಾರವೆಸಗಿದ್ದಾರೆ. ಈ ಬಗ್ಗೆ ಯುವತಿ ಚಿಕ್ಕಪ್ಪನಿಂದ ಯಾದಗಿರಿ ಮಹಿಳೆ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಹಿನ್ನೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅತ್ಯಾಚಾರವೆಸಗಿದ ಆಟೋ ಚಾಲಕ ಹನುಮಂತ್ ಹಾಗೂ ಆತನ ಸ್ನೇಹಿತ ನರಸಪ್ಪನನ್ನು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಆಟೋವನ್ನು ಜಪ್ತಿ ಮಾಡಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ