Breaking News

ಸೈಟ್, ಮನೆ, ಆಸ್ತಿ ಖರೀದಾರರಿಗೆ ಸಿಹಿ ಸುದ್ದಿ: ಮಾರ್ಗಸೂಚಿ ದರ ವಿನಾಯಿತಿ 3 ತಿಂಗಳು ವಿಸ್ತರಣೆ ಸಾಧ್ಯತೆ

Spread the love

ಬೆಂಗಳೂರು: ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಫ್ಲಾಟ್, ಅಪಾರ್ಟ್ಮೆಂಟ್ ಗಳ ಮಾರ್ಗಸೂಚಿ ದರವನ್ನು ಜನವರಿ 1 ರಿಂದ 31 ರವರೆಗೆ ಅನ್ವಯವಾಗುವಂತೆ ಶೇಕಡ 10 ರಷ್ಟು ಕಡಿಮೆ ಮಾಡಲಾಗಿದೆ. ಇದನ್ನು ಮೂರು ತಿಂಗಳು ವಿಸ್ತರಿಸುವ ಸರ್ಕಾರ ಚಿಂತನೆ ನಡೆಸಿದೆ.

 

ಕಂದಾಯ ಸಚಿವ ಆರ್. ಅಶೋಕ್, ಈ ಬಗ್ಗೆ ಮಾಹಿತಿ ನೀಡಿದ್ದು, ರಿಯಲ್ ಎಸ್ಟೇಟ್ ಉದ್ಯಮ ಪ್ರೋತ್ಸಾಹಿಸಲು ಜನವರಿಯಿಂದ ಮಾರ್ಚ್ 31ರವರೆಗೆ ಸ್ಥಿರಾಸ್ತಿಗಳ ಮೇಲಿನ ಮಾರ್ಗಸೂಚಿ ದರವನ್ನು ಶೇಕಡ 10 ರಷ್ಟು ಕಡಿಮೆ ಮಾಡಿರುವುದನ್ನು ಇನ್ನು ಮೂರು ತಿಂಗಳು ವಿಸ್ತರಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.

ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ವಿನಾಯಿತಿಯನ್ನು ಮೂರು ತಿಂಗಳು ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ