Breaking News

ಇಂದಿನಿಂದ RCB ಅಸಲಿ ಆಟ ಶುರು; ವಿರಾಟ್ ಕೊಹ್ಲಿ ಸುತ್ತ ಸುತ್ತುತ್ತಿದೆ ಹೊಸ ಚರ್ಚೆ..! 

Spread the love

ಐಪಿಎಲ್​ ಇತಿಹಾಸದ 15ನೇ ಅಧ್ಯಾಯ ಆರಂಭವಾಗಿಬಿಟ್ಟಿದೆ. ಇಂದು ಅಭಿಮಾನಿಗಳಿಗೆ ಡಬಲ್​ ಧಮಾಕಾ ಯಾಕಂದ್ರೆ, ಡಬಲ್ ಹೆಡರ್ ಪಂದ್ಯಗಳು ನಡೆಯಲಿದೆ. ಅದರಲ್ಲೂ ಪ್ರಮುಖವಾಗಿ ಇವತ್ತು ಆರ್​​ಸಿಬಿ ಅಸಲಿ ಆಟ ಇಂದಿನಿಂದ ಶುರುವಾಗಲಿದೆ. ಬೆಂಗಳೂರು ತಂಡದ ಅಭಿಮಾನಿಗಳ ರಸದೌತಣಕ್ಕೆ ಕಾದುಕುಳಿತಿದ್ದಾರೆ. ಈಗಲೂ ಕೊಹ್ಲಿ ಕ್ರಮಾಂಕವೇ ಯಕ್ಷಪ್ರಶ್ನೆಯಾಗಿದೆ.

ಆರ್​​ಸಿಬಿ.. ಆರ್​​ಸಿಬಿ.. ಈ ಕೂಗು ಇವತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ ಇವತ್ತು ಮೊಳಗಲಿದೆ. ಅದಕ್ಕೆ ಕಾರಣ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ನೂತನ ಕ್ಯಾಪ್ಟನ್​ ನೇತೃತ್ವದಲ್ಲಿ ಇಂದು ಮೊದಲ ಪಂದ್ಯ ಆಡಲಿದೆ. ರಾತ್ರಿ 7.30 ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ.

ಕೊಹ್ಲಿ ನಾಯಕತ್ವ ತ್ಯಜಿಸಿರೋ ಹಿನ್ನೆಲೆಯಲ್ಲಿ ಆರ್​ಸಿಬಿಗೆ ಫಾಫ್ ಡುಪ್ಲೆಸಿಸ್ ಸಾರಥ್ಯವಹಿಸುತ್ತಿದ್ದಾರೆ. ಆರ್​ಸಿಬಿ ತಂಡವು ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದೆ. ಆದರೆ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಜೋಶ್ ಹ್ಯಾಝಲ್​ವುಡ್ ಅನುಪಸ್ಥಿತಿಯಲ್ಲಿ ಆರ್​ಸಿಬಿ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ದೊರೆಯಬಹುದು ಹೀಗಾಗಿಯೇ ಮೊದಲ ಪಂದ್ಯದಲ್ಲಿ ಏನಾಗುತ್ತೆ ಅನ್ನೋ ಕುತೂಹಲ ಮನೆ ಮಾಡಿದೆ. ಆರ್​​ಸಿಬಿ ಬಳಗವಂತೂ ಫಸ್ಟ್​ ಮ್ಯಾಚ್​ಗೆ ಬೆಸ್ಟ್ ತಯಾರಿಯನ್ನಂತೂ ನಡೆಸ್ತಿದೆ.

ಇದೆಲ್ಲಾ ಒಂದು ಕಡೆಯಾದ್ರೆ, ಇನ್ನು ವಿರಾಟ್ ಕೊಹ್ಲಿ ಯಾವ ಕ್ರಮಾಂಕದಲ್ಲಿ ಆಡ್ತಾರೆ ಅನ್ನೋ ಪ್ರಶ್ನೆ ಕೋಟ್ಯಂತರ ಅಭಿಮಾನಿಗಳನ್ನ ಕಾಡುತ್ತಿದೆ. ವಿರಾಟ್ ಓಪನರ್​ ಆಗಿ ಇನ್ನಿಂಗ್ಸ್​ ಆರಂಭಿಸ್ತಾರಾ? ಅಥವಾ ಮೂರನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದು ಮಿಡಲ್ ಆರ್ಡರ್ ಬಲಗೊಳಿಸ್ತಾರಾ? ಎಂಬ ಚರ್ಚೆ ಶುರುವಾಗಿದ್ದು, ಕುತೂಹಲಕ್ಕೂ ಕಾರಣವಾಗಿದೆ.


Spread the love

About Laxminews 24x7

Check Also

ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ – ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವು

Spread the loveಮಂಗಳೂರು: ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಲಿಫ್ಟ್‌ ಕುಸಿದು ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ  ಕುಂಟಿಕಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ