Breaking News

ಬಾಳು ಕೊಡ್ತೀನಿ, ನೀನೇ ನನ್ನ ಜೀವ ಎಂದು ಅರ್ಧದಲ್ಲೇ ಕೈ ಕೊಟ್ಟ ಕಿರಾತಕ: ಗಂಡನಿಗಾಗಿ ಧರಣಿ ಕುಳಿತ ಶಿಕ್ಷಕಿ

Spread the love

ರಾಯಚೂರು: ಪ್ರೀತಿ ಕುರುಡು ಅಂತಾರೆ ನಿಜ. ಆದರೆ, ಪ್ರೀತಿಯ ಮಾಯೆಯಲ್ಲಿ ಬಿದ್ದು ಏನನ್ನು ಯೋಚಿಸದೇ ಕಣ್ಣಿದ್ದು ಕುರುಡರಾದರೆ ಏನಾಗಬಹುದು ಎಂಬುದಕ್ಕೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

 

ಪ್ರೀತಿಸಿ ಮದುವೆಯಾದ ಗಂಡನಿಗಾಗಿ ಪ್ರೌಢಶಾಲಾ ಶಿಕ್ಷಕಿಯೊಬ್ಬಳು ಇದೀಗ ಧರಣಿ ಕುಳಿತಿದ್ದಾಳೆ. ಗಂಡನಿಲ್ಲದೇ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಗಂಡನಿಗಾಗಿ ಗಂಡನ ಮನೆಯ ಮುಂದೆಯೇ ಶಿಕ್ಷಕಿ ಪ್ರತಿಭಟನೆಗೆ ಕುಳಿತಿದ್ದಾಳೆ.

ಶಿಕ್ಷಕಿಯ ಹೆಸರು ಶಾಂತಾಬಾಯಿ. ಇವರು ಪ್ರತಾಪ್​ ಎಂಬಾತನನ್ನು ಪ್ರೀತಿಸಿ 2017ರ ಅಕ್ಟೋಬರ್​ನಲ್ಲಿ ಮದುವೆಯಾಗಿದ್ದರು. ಆದರೆ, ಪ್ರತಾಪ್ ಶಾಂತಾಬಾಯಿಯ ಜತೆ ಮದ್ವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು, ಮನೆಯವರ ಒತ್ತಾಯಕ್ಕೆ ಮಣಿದು ಶಾಂತಾಬಾಯಿಗೆ ಕೈಕೊಟ್ಟು 2018ರಲ್ಲಿ ಇನ್ನೊಬ್ಬಳ ಜತೆ ಮದ್ವೆಯಾಗಿದ್ದಾನೆ.

ಸಂತ್ರಸ್ತೆ ಶಾಂತಾಬಾಯಿಗೆ ಈ ಮೊದಲೇ ಮದ್ವೆಯಾಗಿತ್ತು. ಆದರೆ, ಗಂಡನಿಗೆ ಡಿವೋರ್ಸ್ ಕೊಟ್ಟಿದ್ದರು. ಈ ಎಲ್ಲಾ ವಿಷಯವನ್ನು ತಿಳಿದೇ ಶಾಂತಾಬಾಯಿಯನ್ನ ಪ್ರತಾಪ್​, ಪ್ರೀತಿಸಿ ಮದ್ವೆಯಾಗಿದ್ದ. ಇದೀಗ ಅಂತರ್ಜಾತಿ ವಿವಾಹ ಕಾರಣ ನೀಡಿ, ಶಾಂತಾಬಾಯಿಗೆ ಮೋಸ ಮಾಡಿ ಮತ್ತೊಂದು ಮದ್ವೆಯಾಗಿದ್ದಾನೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ