Breaking News

ಶಿಕ್ಷಕಿ ಮೇಲೆ ಬಸ್ ನಲ್ಲಿ ಲೈಂಗಿಕ ಕಿರುಕುಳ: ಮೂಕ ಪ್ರೇಕ್ಷಕರಾದ ಸಹ ಪ್ರಯಾಣಿಕರು

Spread the love

ಕೋಝಿಕ್ಕೋಡ್: ಕೇರಳ ಸರ್ಕಾರಿ ಬಸ್ ನಲ್ಲಿ ರಾತ್ರಿ ಪ್ರಯಾಣದ ವೇಳೆ ಶಿಕ್ಷಕಿಯೊಬ್ಬರ ಮೇಲೆ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಇದೀಗ ಸಂಚಲನ ಮೂಡಿಸಿದೆ.
ಕೋಝಿಕ್ಕೋಡ್ ಗೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಂಚರಿಸುತ್ತಿದ್ದ ಅಧ್ಯಾಪಿಕೆ ಮೇಲೆ ಹಿಂದೆ ಕುಳಿತಿದ್ದ ಸಹ ಪ್ರಯಾಣಿಕ ಅಸಭ್ಯವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದ. ಇದನ್ನು ಶಿಕ್ಷಕಿ ಪ್ರಶ್ನಿಸಿದಾಗ ಆತ ಕ್ಷಮೆ ಕೇಳುವವನಂತೆ ನಾಟಕವಾಡಿದ್ದ. ಈ ಬಗ್ಗೆ ಶಿಕ್ಷಕಿ ಮತ್ತು ಕಾಮುಕನ ನಡುವೆ ಬಸ್ ನಲ್ಲಿ ಜೋರಾಗಿ ವಾಗ್ವಾದ ನಡೆದಿತ್ತು.

ವಿಪರ್ಯಾಸವೆಂದರೆ ಶಿಕ್ಷಕಿ ಈ ಬಗ್ಗೆ ಬಸ್ ಡ್ರೈವರ್, ಕಂಡಕ್ಟರ್ ಗೆ ದೂರು ನೀಡಿದರೂ ಅವರು ಸ್ಪಂದಿಸಿರಲಿಲ್ಲ. ಸಹ ಪ್ರಯಾಣಿಕರಿಗೆ ಹೇಳಿದಾಗಲೂ ಅವರು ಸಿನಿಮಾ ರೀತಿ ಈ ದೃಶ್ಯಗಳನ್ನು ನೋಡುತ್ತಿದ್ದರೇ ವಿನಹ ಸ್ಪಂದಿಸಿರಲಿಲ್ಲ.


Spread the love

About Laxminews 24x7

Check Also

ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್

Spread the loveಬೆಂಗಳೂರು: ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು  ಇಂದು ಭಾರತ್ ಬಂದ್‌ಗೆ  ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ