Breaking News

ಎಟಿಎಂಗಳಿಗೆ ಬರುವ ಗ್ರಾಹಕರನ್ನು ಟಾರ್ಗೆಟ್​ ಮಾಡಿ ಅವರ ಕಾರ್ಡ್​ ಬದಲಿಸಿ ಹಣ ಲಪಟಾಯಿಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

Spread the love

ದಾವಣಗೆರೆ: ಎಟಿಎಂ​ಗಳಿಗೆ ಹಣ ಬಿಡಿಸಲು ಬರುವ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಅಮಾಯಕರ ಕಾರ್ಡ್​ಗಳನ್ನು ಬದಲಾಯಿಸಿ ಮೋಸ ಮಾಡಿ ಹಣ ಲಪಟಾಯಿಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಿವಾಸಿ ಯೋಗಾನಂದ (47) ಬಂಧಿತ ಆರೋಪಿ. ಈತ ಪಿಎಚ್​​ಡಿ ಪದವೀಧರನಾಗಿದ್ದು, ಎಟಿಎಂಗೆ ಗ್ರಾಹಕರಿಗೆ ಮೋಸ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಹಣ ಬಿಡಿಸಲು ಎಟಿಎಂಗೆ ಬರುವ ವೃದ್ಧರನ್ನು ಖದೀಮ ಟಾರ್ಗೆಟ್​ ಮಾಡುತ್ತಿದ್ದನು. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.ಆರೋಪಿ ಸುಮಾರು 78 ಅಮಾಯಕರನ್ನು ವಂಚಿಸಿದ್ದು, 18 ಪ್ರಕರಣಗಳಿಗೆ ಸಂಬಂಧಿಸಿದಂತೆ 8.58 ಲಕ್ಷ ನಗದನ್ನು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ