Breaking News

5.5 ಕೋಟಿ ಮಂದಿಗೆ ಉಚಿತ ರೀಚಾರ್ಚ್ ಆಫರ್ ಕೊಟ್ಟ ಏರ್‌ಟೆಲ್

Spread the love

ಬೆಂಗಳೂರು, ಮೇ 16: ಕೊರೊನಾ ಸಂಕಷ್ಟ ಕಾಲದಲ್ಲಿ ಲಾಕ್ ಡೌನ್ ನಿಂದಾಗಿ ದುಡಿಮೆ ಇಲ್ಲದ ಪರಿಸ್ಥಿತಿಯನ್ನು ಕೋಟ್ಯಂತರ ಮಂದಿ ಎದುರಿಸುತ್ತಿದ್ದಾರೆ. ಇಂಥ ಕಡಿಮೆ ಆದಾಯಯುಳ್ಳ ಮಂದಿಗೆ ಉಚಿತವಾಗಿ ಪ್ರೀಪೇಯ್ಡ್ ರೀಚಾರ್ಚ್ ಕೊಡುಗೆಯನ್ನು ಭಾರ್ತಿ ಏರ್‌ಟೆಲ್‌ ಘೋಷಿಸಿದೆ.

ಇದರಿಂದ ಸುಮಾರು 5.5 ಕೋಟಿ ಮಂದಿಗೆ ನೆರವಾಗಲಿದೆ. ಇದಲ್ಲದೆ 79 ರು ಗಳ ರೀಚಾರ್ಜ್ ಕೂಪನ್ ಮೂಲಕ ಡಬ್ಬಲ್ ಕೊಡುಗೆ ಪಡೆದುಕೊಳ್ಳಬಹುದು ಎಂದು ಸಂಸ್ಥೆ ಹೇಳಿದೆ.

ಸುಮಾರು 270 ಕೋಟಿ ರು ಮೌಲ್ಯದ ಈ ಯೋಜನೆ ಮೂಲಕ 5.5 ಕೋಟಿ ರುಗೂ ಅಧಿಕ ಚಂದಾದಾರರಿಗೆ 49 ರು ಗಳ ಉಚಿತ ರೀಚಾರ್ಜ್ ಆಫರ್ ಸಿಗಲಿದೆ.

ಈ ರೀಚಾರ್ಜ್ ಮೂಲಕ 38 ರು ಗಳ ಟಾಕ್ ಟೈಂ ಹಾಗೂ 100 ಎಂಬಿ ಡೇಟಾ ಸಿಗಲಿದ್ದು, 28 ದಿನಗಳ ವ್ಯಾಲಿಡೆಟಿ ಹೊಂದಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೊಬೈಲ್ ಸಂಪರ್ಕ ಇಲ್ಲದೆ ಕಷ್ಟ ಪಡಬಾರದು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ, ಮುಂದಿನ ವಾರದಿಂದ ಈ ಪ್ರಯೋಜನ ಸಿಗಲಿದೆ ಎಂದು ಸಂಸ್ಥೆ ಪ್ರಕಟಣೆ ಹೊರಡಿಸಿದೆ.

ಫೆಬ್ರವರಿ ತಿಂಗಳ ಟ್ರಾಯ್ ಅಂಕಿ ಅಂಶದಂತೆ ಭಾರ್ತಿ ಏರ್‌ಟೆಲ್‌ ಸುಮಾರು 34 ಕೋಟಿ ರು ಮೊಬೈಲ್ ಚಂದಾದಾರರನ್ನು ಹೊಂದಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ