Breaking News

ಇತಿಹಾಸದ ನಗರಿಯಾಗಿರುವ ಹಂಪಿಯು ಕೋಟೆ ಗೋಡೆಯ ಒಂದು ಭಾಗದಲ್ಲಿ ಕುಸಿತ

Spread the love

ಹಂಪಿ: ಐತಿಹಾಸಿಕ ನೆಲೆಗಟ್ಟಾಗಿರುವ ಹೊಸಪೇಟೆ ತಾಲ್ಲೂಕಿನ ಹಂಪಿ ಕಮಲ ಮಹಲ್ ಸ್ಮಾರಕ ಸುತ್ತಲಿನ ಕೋಟೆ ಗೋಡೆಯ ಒಂದು ಭಾಗ ಶುಕ್ರವಾರ ಬೆಳಗ್ಗೆ ಕುಸಿದುಬಿದ್ದಿದೆ.

ಕಲ್ಲುಗಳಿಂದ ನಿರ್ಮಿಸಿದ್ದ ಗೋಡೆಯ ಒಂದು ಭಾಗ ಭಾಗಶಃ ಕುಸಿದಿದ್ದು, ಪುರಾತನ ಗೋಡೆಯಾಗಿರುವುದರಿಂದ ಕುಸಿದು ಬಿದ್ದಿರುವ ಸಾಧ್ಯತೆ ಇದೆ. ಘಟನೆಯಲ್ಲಿ ಯಾವುದೇ ಸ್ಮಾರಕಕ್ಕೆ ಹಾನಿಯಾಗಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್ ಪಿ . ಕಾಳಿಮುತ್ತು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕಾಳಿಮುತ್ತು, ಕುಸಿದು ಬಿದ್ದ ಗೋಡೆ ಬಗ್ಗೆ ಇಲಾಖೆಯ ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿದೆ . ಮರುನಿರ್ಮಾಣಕ್ಕೆ ಪ್ರಸ್ತಾವ ಕಳಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿಸಿದರು .


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ