Breaking News

ಲಂಚ ಪಡೆಯುತ್ತಿದ್ದ ಚಳ್ಳಕೆರೆ ತಾ.ಪಂ ಇಒ ಎಸಿಬಿ‌ ಬಲೆಗೆ

Spread the love

ಚಿತ್ರದುರ್ಗ: ಪಿಡಿಒ ಒಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಚಳ್ಳಕೆರೆ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಐ ಬಾರಿಕೇರ್ ಎಸಿಬಿ‌ ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಬೆಳಗೆರೆ ಪಿಡಿಒ ಗುಂಡಪ್ಪ ಅವರಿಂದ ಕಾರ್ಯಯೋಜಿತ ಮಂಜೂರಾತಿಗಾಗಿ ತಾಲೂಕು ಪಂಚಾಯತಿ ಬಳಿ 20 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಶುಕ್ರವಾರ ರಾತ್ರಿ ಎಸಿಬಿ ಅಧಿಕಾರಿಗಳು ದಾಳಿ‌ ನಡೆಸಿ ವಶಕ್ಕೆ ಪಡೆದಿದ್ದಾರೆ.

ಎಸಿಬಿ ಎಸ್ಪಿ ಜಯಪ್ರಕಾಶ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ಬಸವರಾಜ್ ಮಗುದಮ್, ಪಿಐಗಳಾದ ಪ್ರವೀಣ್ ಕುಮಾರ್, ಆಂಜನೇಯ ಡಿ.ಎಸ್.ಹರೀಶ ಮಾರುತಿ, ಯತಿರಾಜ್ ಓಬಣ್ಣ, ಫಕ್ರುದ್ದಿನ್ ಪಾಯಾಜ್, ಪ್ರಭಾಕರ್, ಶ್ರೀಪತಿ ಮತ್ತಿತರರಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ