Breaking News
Home / ರಾಜ್ಯ / ರಘು ಗೌಡಗೆ ಬಿಗ್ ಗಿಫ್ಟ ಕೊಟ್ಟು ಮನೆಯಿಂದ ಹೊರಬಂದ ಧನುಶ್ರೀ

ರಘು ಗೌಡಗೆ ಬಿಗ್ ಗಿಫ್ಟ ಕೊಟ್ಟು ಮನೆಯಿಂದ ಹೊರಬಂದ ಧನುಶ್ರೀ

Spread the love

ಬಿಗ್ ಬಾಸ್ ಕನ್ನಡ 8’ರಿಂದ ಮೊದಲ ಸ್ಪರ್ಧಿ ಮನೆಯಿಂದ ಹೊರಬಂದಿದ್ದಾರೆ. ಈ ಬಾರಿ ಬಿಗ್ ಬಾಸ್ ಗೆ ಮೊದಲ ಸ್ಪರ್ಧಿಯಾಗಿ ಧನುಶ್ರೀ ಮನೆಯೊಳಗೆ ಕಾಲಿಟ್ಟಿದ್ದರು. ಆದರೆ ಧನುಶ್ರೀ ಮನೆಯೊಳಗೆ ಹೋದ ವೇಗದಲ್ಲೇ ಹೊರಬಂದಿದ್ದಾರೆ.

 

ಟಿಕ್ ಟಾಕ್ ಸ್ಟಾರ್ ಆಗಿದ್ದ ಧನುಶ್ರೀ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿದ್ದವರು. ಬಿಗ್ ಮನೆಯಲ್ಲೂ ಧನುಶ್ರೀ ಅವರಿಂದ ಸಿಕ್ಕಾಪಟ್ಟೆ ಮನರಂಜನೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಮೊದಲ ವಾರದಲ್ಲೇ ಧನುಶ್ರೀ ಮನೆಯವರ ಮತ್ತು ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲರಾಗಿದ್ದಾರೆ.

ಈ ಬಾರಿ ಮನೆಯಿಂದ ಧನುಶ್ರೀ ಹೊರ ಬಂದಿದ್ದಾರೆ. ನಿರ್ಮಲಾ, ರಘು ಗೌಡ ಮತ್ತು ಧನುಶ್ರೀ ಈ ವಾರ ಮನೆಯಿಂದ ಹೊರಬರಲು ನಾಮಿನೇಟ್ ಆಗಿದ್ದರು. ಕೊನೆಯದಾಗಿ ಬಿಗ್ ಮನೆಯಿಂದ ಧನುಶ್ರೀ ಹೊರಬಂದಿದ್ದಾರೆ. ಬರುವಾಗ ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರವನ್ನು ಬಳಿಸಿಕೊಂಡು ಧನುಶ್ರೀ ರಘು ಗೌಡ ಅವರಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ.

ಈ ವಾರ ಬಿಗ್ ಬಾಸ್ ನಾಮಿನೇಷನ್ ನಿಂದ ರಘು ಗೌಡ ಅವರನ್ನು ಬಚಾವ್ ಮಾಡಿದ್ದಾರೆ. ಈ ಮೂಲಕ ರಘು ಗೌಡ ಈ ವಾರ ನೇಮಿನೇಷನ್ ನಿಂದ ಸೇಫ್ ಆಗಿದ್ದಾರೆ.

ಮೊದಲ ವಾರದಲ್ಲೇ ಧನುಶ್ರೀ ಕಳಪೆ ಪ್ರದರ್ಶನ ನೀಡಿ ಜೈಲು ಸೇರಿದ್ದರು. ಈ ಬಾರಿಯ ಬಿಗ್ ಬಾಸ್ ನಲ್ಲಿ ಜೈಲು ಸೇರಿದ ಮೊದಲ ಸ್ಪರ್ಧಿ ಧನುಶ್ರೀ ಆಗಿದ್ದರು. ಮೇಕಪ್ ವಿಚಾರಕ್ಕೆ ಧನುಶ್ರೀ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಮನೆಯೊಳಗೂ ಮೇಕಪ್ ವಿಚಾರವಾಗಿ ಉಳಿದ ಸ್ಪರ್ಧಿಗಳು ಕಾಲೆಳೆಯುತ್ತಿದ್ದರು. ಆದರೆ ಧನುಶ್ರೀ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಸದ್ಯ ಮನೆಯಲ್ಲಿ 16 ಸ್ಪರ್ಧಿಗಳಿದ್ದು ಮುಂದಿನ ವಾರ ಯಾರು ಮನೆಯಿಂದ ಹೊರಬರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ