Breaking News

ಅಂತರ ತಾಲೂಕಾ ಹಾಗೂ ಗೋಕಾಕ ತಾಲೂಕಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ

Spread the love

ಗೋಕಾಕ: ಗೋಕಾಕ ತಾಲೂಕಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ ವತಿಯಿಂದ ದಿ. 26 ರಂದು ಸಂಜೆ 5 ಗಂಟೆಗೆ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಅಂತರ ತಾಲೂಕಾ ಹಾಗೂ ಗೋಕಾಕ ತಾಲೂಕಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಅಸೋಸಿಯೇಷನ ಕಾರ್ಯದರ್ಶಿ ರಮೇಶ ಕಳ್ಳಿಮನಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಈ ಸ್ಪರ್ಧೆಯಲ್ಲಿ 55, 60, 65, ಹಾಗೂ 65+ ಕೆಜಿ ದೇಹ ತೂಕದ ಸ್ಪರ್ಧಾಳುಗಳಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಚಾಂಪಿಯನ್ ಆಫ್ ಚಾಂಪಿಯನ್‍ಗೆ 11,111/- ರೂಗಳು, ರನ್ನರ್‍ಅಪ್‍ಗೆ 3333/- ರೂ, ಬೆಸ್ಟ್ ಪೋಜರ್‍ಗೆ 2222/-ರೂ, ಹಾಗೂ ಪ್ರತಿ ಗುಂಪಿಗೆ ಪ್ರಥಮ 3000/-, ದ್ವೀತಿಯ 2000/-, ಮತ್ತು ತೃತೀಯ, ನಾಲ್ಕನೇ, ಐದನೇ ಗುಂಪಿಗೆ ತಲಾ 1000/- ರೂಗಳು ಹಾಗೂ ಪ್ರಶಸ್ತಿ ಪತ್ರಗಳನ್ನು ಮತ್ತು ಮೆಡಲ್ ನೀಡಲಾಗುವುದು. ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಿನ ಸ್ಪರ್ಧಾಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಮೇಶ ಕಳ್ಳಿಮನಿ ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ