Breaking News

ಬಾಲಕಿಯ ಶಿರಚ್ಛೇದನ ಮಾಡಿದ್ದ ಅಪರಾಧಿಗೆ ಮರಣದಂಡನೆ

Spread the love

ಮಡಿಕೇರಿ: ಮದುವೆಗೆ ನಿರಾಕರಿಸಿದ ಬಾಲಕಿಯ ಶಿರಚ್ಛೇದನ ಮಾಡಿ ಹತ್ಯೆಗೈದಿದ್ದ ಅಪರಾಧಿಗೆ ಕೊಡಗು ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಪ್ರಕಾಶ್‌ ಮರಣದಂಡನೆಗೆ ಗುರಿಯಾದ ಅಪರಾಧಿ. ಈತ ಮೇ 2024ರಲ್ಲಿ ಸೂರ್ಲಬ್ಬಿ ಬಳಿ ಮೀನಾ ಎಂಬ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದ. ಕೊಲೆ ಮಾಡಿ ರುಂಡ ಹಾಗೂ ಕೋವಿಯೊಂದಿಗೆ ಪರಾರಿಯಾಗಿದ್ದ. ಬಳಿಕ ಕಾಡಿನಲ್ಲಿ ಅಡಗಿದ್ದ ಈತನನ್ನು ಪೊಲೀಸರು ಬಂಧಿಸಿದ್ದರು. ಇಡೀ ರಾಜ್ಯಾದ್ಯಂತ ಈ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು.

ಶಿರಚ್ಛೇದನದಿಂದ ನ್ಯಾಯದ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ
3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಸುರೇಂದ್ರ ಅವರು ಈ ಐತಿಹಾಸಿಕ ತೀರ್ಪು ನೀಡಿದ್ದಾರೆ. ತೀರ್ಪು ನೀಡುವಾಗ, ಶಿರಚ್ಛೇದನದ ಮೂಲಕ ಬಾಲಕಿಯ ಧ್ವನಿಯನ್ನು ಮುಚ್ಚಿಸಬಹುದು ಆದರೆ ನ್ಯಾಯದ ಧ್ವನಿಯನ್ನು ಮುಚ್ಚಿಡಲು ಆಗಲ್ಲ ಎಂದು ನ್ಯಾಯಾಧೀಶರು ಹೇಳಿ, ತೀರ್ಪು ಪ್ರಕಟಿಸಿದ್ದಾರೆ.

ತಡವಾಗಿ ಪತ್ತೆಯಾಗಿದ್ದ ಬಾಲಕಿ ರುಂಡ
ಪ್ರಕಾಶ್ ಸೆರೆಯಾದರೂ ಬಾಲಕಿಯ ರುಂಡ ಮಾತ್ರ ಪತ್ತೆಯಾಗಿರಲಿಲ್ಲ. ತೀವ್ರ ಹುಡುಕಾಟ ನಡೆಸಿದಾಗ, ಕೊಲೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರವೊಂದರಲ್ಲಿ ರುಂಡ ಪತ್ತೆಯಾಗಿತ್ತು.

ತಂಗಿಯ ತಲೆ ಕಂಡು ರೋಷಗೊಂಡಿದ್ದ ಸಹೋದರ
ತಂಗಿಯ ತಲೆ ನೋಡುತ್ತಲೇ ಅಣ್ಣ ದಿಲೀಪ್ ರೋಷಗೊಂಡಿದ್ದ. ಆಗ ದಿಲೀಪ್‌ಗೆ ನೀರು ಕುಡಿಸಿ ಪೊಲೀಸರು ಸಮಾಧಾನಪಡಿಸಿದ್ದರು. ಗನ್ ತೆಗೆದುಕೊಂಡು ಬಂದು ಆರೋಪಿಯ ಶೂಟ್ ಮಾಡಲು ಮುಂದಾಗಿದ್ದ. ಕೂಡಲೇ ದಿಲೀಪ್‌ನನ್ನು ಹಿಡಿದು ಪೊಲೀಸರು ಪಾಪಸ್ ಕರೆತಂದಿದ್ದರು.

SSLC ಯಲ್ಲಿ 100% ಫಲಿತಾಂಶದ ಸಂಭ್ರಮದಲ್ಲಿದ್ದ ಮೀನಾ
ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಏಕೈಕ ವಿದ್ಯಾರ್ಥಿನಿಯಾಗಿದ್ದ ಮೀನಾ, ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ತನ್ನ ಶಾಲೆಗೆ 100% ಫಲಿತಾಂಶ ತಂದು ಕೊಟ್ಟಿದ್ದಳು. ಬೆಳಗ್ಗೆಯಿಂದಲೂ ತಾನು ಪಾಸಾದ ಖುಷಿಯಲ್ಲಿ ಇದ್ದ ಮೀನಾ, ಶಾಲೆಯತ್ತ ಬಂದು ತೇರ್ಗಡೆಯಾದ ಖುಷಿಯಲ್ಲಿ ಮನೆಗೆ ಹೋಗುತ್ತಿದ್ದಳು. ಇದೇ ಸಂದರ್ಭದಲ್ಲಿ ಆಕೆಯನ್ನು ಅಡ್ಡಗಟ್ಟಿ ಪ್ರಕಾಶ್‌ ಹತ್ಯೆ ಮಾಡಿದ್ದ.


Spread the love

About Laxminews 24x7

Check Also

ನಿನಗೊಂದು ಗತಿ ಕಾಣಿಸುತ್ತೇನೆ ಅಂತ ಹೆಂಡತಿ ಸ್ನೇಹಿತನಿಗೆ ಆಸಿಡ್ ಎರಚಿದ ಪತಿ!

Spread the loveಬೆಂಗಳೂರು: ಹೆಂಡತಿಯ ಜೊತೆ ಆಕೆಯ ಸ್ನೇಹಿತ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಪತಿ ಆಸಿಡ್‌ ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ