Breaking News

ಎಂಟಿಬಿ ನಾಗರಾಜ್‌ ಮನೆಯಲ್ಲಿ ಆಯುಧ ಪೂಜೆ ನಡೆಸಿರುವ ಪೋಟೋಗಳು ವೈರಲ್

Spread the love

ಬೆಂಗಳೂರು : ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯಎಂಟಿಬಿ ನಾಗರಾಜ್‌ ಮನೆಯಲ್ಲಿ ಆಯುಧ ಪೂಜೆ ನಡೆಸಿರುವ ಪೋಟೋಗಳು ವೈರಲ್ ಆಗಿವೆ. ರೋಲ್ಸ್ ರಾಯ್ಸ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಅವರು ಹೊಂದಿದ್ದಾರೆ.

ಭಾನುವಾರ ಮಹದೇವಪುರ ಬಳಿ ಇರುವ ಎಂಟಿಬಿ ನಾಗರಾಜ್‌ರ ‘ಆಚಂದ್ರಾರ್ಕ ನಿಲಯ’ದಲ್ಲಿ ಆಯುಧ ಪೂಜೆಯನ್ನು ಮಾಡಲಾಯಿತು. ರೋಲ್ಸ್ ರಾಯ್ಸ್, ಫೆರಾರಿ ಕಾರುಗಳಿಗೆ ಪೂಜೆಯನ್ನು ಸಲ್ಲಿಸಲಾಯಿತು. ಈ ಫೋಟೋಗಳು ಈಗ ವೈರಲ್ ಆಗಿವೆ.

ಎಂಟಿಬಿ ನಾಗರಾಜ್ ಕುಟುಂಬ ಸದಸ್ಯರ ಜೊತೆ ಆಯುಧ ಪೂಜೆಯಲ್ಲಿ ಪಾಲ್ಗೊಂಡರು.

ರೋಲ್ಸ್ ರಾಯ್ಸ್, ಫೆರಾರಿ, ಬೆಂಝ್, ಟೊಯೋಟಾ ಫಾರ್ಚುನರ್, ಇನ್ನೋವಾ ಸೇರಿದಂತೆ 8 ಐಷಾರಾಮಿ ಕಾರು, ತಮ್ಮ ಲೈಸೆನ್ಸ್ ಹೊಂದಿದ ಪಿಸ್ತೂಲ್‌ಗೆ ಸಹ ಎಂಟಿಬಿ ನಾಗರಾಜ್ ಪೂಜೆ ಸಲ್ಲಿಸಿದರು.

ಕರ್ನಾಟಕದಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿರುವ ಜನಪ್ರತಿನಿಧಿಗಳಲ್ಲಿ ಎಂಟಿಬಿ ನಾಗರಾಜ್ ಸಹ ಒಬ್ಬರು. ಜೂನ್‌ನಲ್ಲಿ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಅವರು 1,224 ಕೋಟಿ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದರು.

ಎಂಟಿಬಿ ನಾಗರಾಜ್ ಹೆಸರಿನಲ್ಲಿ 884 ಕೋಟಿ ಆಸ್ತಿ, ಪತ್ನಿ ಶಾಂತಕುಮಾರಿ ಹೆಸರಿನಲ್ಲಿ 331 ಕೋಟಿ ಆಸ್ತಿ ಇದೆ. ಎಂಟಿಬಿ ನಾಗರಾಜ್ 52.72 ಕೋಟಿ ಸಾಲ ಮಾಡಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ