Breaking News

ಬೆಳಗಾವಿಯಲ್ಲಿ ಲಿಂಗತ್ವ ತಾರತಮ್ಯ ವಿರೋಧಿಸಿ ತೃತೀಯ ಲಿಂಗಿಗಳ ಪ್ರತಿಭಟನೆ

Spread the love

ಬೆಳಗಾವಿ: ಲಿಂಗತ್ವ ತಾರತಮ್ಯ ವಿರೋಧಿಸಿ ಹಾಗೂ ಸರ್ಕಾರದಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ನೂರಾರು ತೃತೀಯ ಲಿಂಗಿಗಳು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ತೃತೀಯ ಲಿಂಗಿಗಳು ಸ್ವಾಭಿಮಾನದ ನಡೆ ನಡೆಸುವ ಮೂಲಕ ಸಮಾಜದಲ್ಲಿನ ತಾರತಮ್ಯ ಹಾಗೂ ತಮಗೆ ಎದುರಾಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಮಾತನಾಡಿ, ರಾಜ್ಯ ಸರ್ಕಾರ ನಮಗೆ ಕನಿಷ್ಠ ಒಂದು ಆಶ್ರಯವನ್ನೂ ಕಲ್ಪಿಸಿಲ್ಲ. ಭಿಕ್ಷೆ ಬೇಡುವುದು ಸಮಾಜದ ಕಣ್ಣಿಗೆ ತಪ್ಪಾಗಿ ಕಾಣುತ್ತದೆ. ಆದರೆ ನಮಗೆ ಬದುಕಲು ಒಂದು ಸೂರು ಬೇಕಲ್ಲವೇ? ನಮ್ಮಲ್ಲಿ ಅನೇಕರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳೇ ಇಲ್ಲ. ಸರ್ಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಹೆತ್ತ ತಂದೆ-ತಾಯಿಯೇ ಮನೆಯಿಂದ ಹೊರಹಾಕಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಾಜವಾದರೂ ನಮ್ಮನ್ನು ಒಪ್ಪಿಕೊಂಡು ಬದುಕಲು ಅವಕಾಶ ನೀಡಬೇಕು. ರಾಜಕೀಯ ನಾಯಕರ ಬಳಿ ಸಹಾಯ ಕೇಳಲು ಹೋದರೆ, ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲುತ್ತಾರೆ. ಸರ್ಕಾರವಾಗಲಿ, ಸಮಾಜವಾಗಲಿ ನಮ್ಮ ಬೆಂಬಲಕ್ಕೆ ನಿಲ್ಲದಿದ್ದರೆ ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ತೃತೀಯ ಲಿಂಗಿಗಳಿಗೂ ಗೌರವಯುತ ಬದುಕು ನಡೆಸಲು ಅವಕಾಶ ಕಲ್ಪಿಸಬೇಕು. ವಸತಿ, ಆಹಾರ, ಗುರುತಿನ ಚೀಟಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.


Spread the love

About Laxminews 24x7

Check Also

ಶೃಂಗೇರಿ ಶಾರದಾಂಬೆ ದರ್ಶನ ಪಡೆದ ತ್ರಿಷಾ

Spread the loveಚಿಕ್ಕಮಗಳೂರು: ಶೃಂಗೇರಿ ಶಾರದಾ ಪೀಠಕ್ಕೆ  ಬಹುಭಾಷಾ ನಟಿ ತ್ರಿಷಾ ಕೃಷ್ಣನ್  ಅವರು ಭೇಟಿ ನೀಡಿ, ದೇವಿಯ ದರ್ಶನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ