Breaking News

KRS ನಿಂದ ತಮಿಳುನಾಡಿಗೆ ನೀರು ಬಿಡುಗಡೆ – ಹೊರಹರಿವು 5,333 ಕ್ಯೂಸೆಕ್‌ಗೆ ಏರಿಕೆ, ರೈತರಲ್ಲಿ ಆತಂಕ

Spread the love

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಸಂಕಷ್ಟ ಎದುರಾಗಿರುವ ನಡುವೆಯೇ ಕೆಆರ್‌ಎಸ್ ಜಲಾಶಯದಿಂದ  ತಮಿಳುನಾಡಿಗೆ ನೀರು ಹರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪರಿಣಾಮವಾಗಿ ಡ್ಯಾಂನಿಂದ ಹೊರಹರಿವಿನ ಪ್ರಮಾಣದಲ್ಲಿ ಏಕಾಏಕಿ ಭಾರೀ ಏರಿಕೆ ಕಂಡುಬಂದಿದೆ.

ನಿನ್ನೆಯಷ್ಟೇ ಕೇವಲ ಕುಡಿಯುವ ನೀರು  ಹಾಗೂ ಸ್ಥಳೀಯ ನಾಲೆಗಳಿಗಾಗಿ 3,834 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಆದರೆ ಇಂದು ದಿಢೀರನೆ ಹೊರಹರಿವಿನ ಪ್ರಮಾಣವನ್ನು 5,333 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಸುಮಾರು 2,000 ಕ್ಯೂಸೆಕ್‌ನಷ್ಟು ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದಿನ 15 ದಿನಗಳ ಕಾಲ ನಿತ್ಯ 2 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಈ ಆದೇಶದ ಕುರಿತು ನಾಳೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮಹತ್ವದ ಸಭೆ ನಡೆಸಲಿದೆ. ಆದರೆ ಪ್ರಾಧಿಕಾರದ ಸಭೆಗೂ ಮುನ್ನವೇ ಸರ್ಕಾರ ತಮಿಳುನಾಡಿಗೆ ನೀರು ಹರಿಸಲು ಮುಂದಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಸ್ತುತ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಒಳಹರಿವು ಸಂಪೂರ್ಣ ಕ್ಷೀಣಿಸಿದ್ದು, ಇಂದು ಕೇವಲ 483 ಕ್ಯೂಸೆಕ್ ನೀರು ಮಾತ್ರ ಹರಿದುಬರುತ್ತಿದೆ. ಜಲಾಶಯದ ನೀರಿನ ಮಟ್ಟ ತೀವ್ರ ಕುಸಿತ ಕಂಡಿದ್ದು, ಸದ್ಯ 26.24 ಅಡಿಗಳಿಗೆ ತಲುಪಿದೆ.

ಡ್ಯಾಂನಲ್ಲಿ ಪ್ರಸ್ತುತ 20.006 ಟಿಎಂಸಿ ನೀರು ಸಂಗ್ರಹವಿದ್ದರೂ, ಇದರಲ್ಲಿ ಬಳಕೆಗೆ ಯೋಗ್ಯವಾಗಿರುವುದು ಕೇವಲ 13 ಟಿಎಂಸಿ ನೀರು ಮಾತ್ರ. ಬೇಸಿಗೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಕೇವಲ 13 ಟಿಎಂಸಿ ನೀರನ್ನ ಉಳಿಸಿಕೊಂಡು ತಮಿಳುನಾಡಿಗೆ ನೀರು ಹರಿಸುತ್ತಿರುವುದು ಮುಂದಿನ ದಿನಗಳಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ಕಾವೇರಿ ನದಿ ಪಾತ್ರದ ನಗರಗಳಿಗೆ ಕುಡಿಯುವ ನೀರಿನ ಭಾರೀ ಅಭಾವ ಸೃಷ್ಟಿಸುವ ಆತಂಕ ಮೂಡಿಸಿದೆ.


Spread the love

About Laxminews 24x7

Check Also

ಜೈಲಿನಲ್ಲೂ ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ ಕನ್ನಾಳೆ ಕಳ್ಳಾಟ

Spread the loveಗಳೂರು: ಕೆಪಿಎಸ್‌ಸಿ  ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ  ತನ್ನ ಕಳ್ಳಾಟವನ್ನು ಜೈಲಿನಲ್ಲಿಯೂ ಮುಂದುವರಿಸಿದ್ದಾನೆ ಎನ್ನೋದು ಬಯಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ