Breaking News

ಲಾಡ್ಜ್‌ಗೆ ತೆರಳಿದಾಗ ಗಲಾಟೆ – ಮೇಲಿಂದ ತಳ್ಳಿ ಪ್ರೇಯಸಿಯ ಕೊಲೆ, ಪ್ರಿಯಕರ ಅರೆಸ್ಟ್

Spread the love

ಬೆಂಗಳೂರು: ಲಾಡ್ಜ್‌ಗೆ ತೆರಳಿದಾಗ ಗಲಾಟೆಯಾಗಿ ಪ್ರೇಯಸಿಯನ್ನು ಮೇಲಿಂದ ತಳ್ಳಿ ಪ್ರಿಯಕರ ಕೊಲೆ ಮಾಡಿರುವ ಘಟನೆ ನಗರದ ಅಬ್ಬಿಗೆರೆ  ವೈಮ್ಯಾಕ್ಸ್ ಸರ್ಕಲ್‌ನಲ್ಲಿರುವ ಲಾಡ್ಜ್‌ನಲ್ಲಿ ನಡೆದಿದೆ.

ಮೃತ ಯುವತಿಯನ್ನು ಹಾಸನ ಜಿಲ್ಲೆಯ ಐಶ್ವರ್ಯ ಎನ್ನಲಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಮೃತ ಐಶ್ವರ್ಯ ಹಾಗೂ ಸಂತೋಷ್ ಪರಸ್ಪರ ಪ್ರೀತಿಸುತ್ತಿದ್ದರು. ಐಶ್ವರ್ಯ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದಳು. ಆದರೆ ಸಂತೋಷ್‌ಗೆ ಐಶ್ವರ್ಯಳನ್ನು ಮದುವೆಯಾಗೋಕೆ ಇಷ್ಟ ಇರಲಿಲ್ಲ. ಕಳೆದ ಮೂರು ವರ್ಷದಿಂದಲೂ ಮದುವೆ ವಿಚಾರವನ್ನು ಮುಂದಕ್ಕೆ ಹಾಕಿಕೊಂಡು ಬರುತ್ತಿದ್ದ. ಇದೇ ವಿಚಾರ ಮಾತಾಡೋಕೆ ಅಂತ ನ.19ರಂದು ಪ್ರಿಯಕರ ಸಂತೋಷ್‌ನನ್ನು ಐಶ್ವರ್ಯ ಲಾಡ್ಜ್‌ಗೆ ಕರೆದಿದ್ದಳು.

ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಜಗಳ ತಾರಕಕ್ಕೇರಿದೆ. ಆಗ ಪ್ರಿಯಕರ ಸಂತೋಷ್ ಲಾಡ್ಜ್‌ನ ಮೂರನೇ ಮಹಡಿಯ ಕಿಟಕಿಯಿಂದ ಕೆಳಗೆ ತಳ್ಳಿ ಐಶ್ವರ್ಯಳನ್ನು ಕೊಲೆ ಮಾಡಿದ್ದ.

ಕರೆಂಟ್ ಕಂಬದ ಮೇಲೆ ಬಿದ್ದಿದ್ದ ಐಶ್ವರ್ಯ ಗಂಭೀರವಾಗಿ ಗಾಯಗೊಂಡಿದ್ದಳು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಆರಂಭದಲ್ಲಿ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡು ಗಂಗಮ್ಮನ ಗುಡಿ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ತನಿಖೆಯ ವೇಳೆ ಸಂತೋಷ್ ಐಶ್ವರ್ಯರನ್ನ ತಳ್ಳಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ.

ಸದ್ಯ ಸಂತೋಷ್‌ನನ್ನ ಪೊಲೀಸರು ಅರೆಸ್ಟ್ ಮಾಡಿದ್ದು, ಮರ್ಡರ್ ಕೇಸ್ ದಾಖಲಾಗಿದೆ.


Spread the love

About Laxminews 24x7

Check Also

ಜೈಲಿನಲ್ಲೂ ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ ಕನ್ನಾಳೆ ಕಳ್ಳಾಟ

Spread the loveಗಳೂರು: ಕೆಪಿಎಸ್‌ಸಿ  ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ  ತನ್ನ ಕಳ್ಳಾಟವನ್ನು ಜೈಲಿನಲ್ಲಿಯೂ ಮುಂದುವರಿಸಿದ್ದಾನೆ ಎನ್ನೋದು ಬಯಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ