Breaking News

ಕನ್ನಡಿಗರಿಗೆ ಉದ್ಯೋಗ ಅಭಿಯಾನ – 20ಕ್ಕೂ ಹೆಚ್ಚು ಐಟಿ – ಬಿಟಿ ಕಂಪನಿಗಳ ಜೊತೆ ಕರವೇ ಮಾತುಕತೆ

Spread the love

ಬೆಂಗಳೂರು: ನಗರದ  ಐಟಿ – ಬಿಟಿ ಕಂಪನಿಗಳಲ್ಲಿ `ಕನ್ನಡಿಗರಿಗೆ ಉದ್ಯೋಗ’ ಅಭಿಯಾನವನ್ನು ಕರವೇ ನಾರಾಯಣಗೌಡ  ತೀವ್ರಗೊಳಿಸಿದ್ದಾರೆ.

ಹೆಬ್ಬಾಳ ಬಳಿಯ ಮಾನ್ಯತಾ ಟೆಕ್‌ಪಾರ್ಕ್‌ಗೆ ನಾರಾಯಣಗೌಡ ಭೇಟಿ ನೀಡಿದ್ದರು. ಈ ವೇಳೆ ಸುಮಾರು 20ಕ್ಕೂ ಹೆಚ್ಚು ಕಂಪನಿಗಳ ಹೆಚ್‌ಆರ್‌ಗಳ ಜೊತೆ ಸಂವಾದ ನಡೆಸಿದರು. ಕನ್ನಡದ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸದಿದ್ದರೆ ಡಿ.12ಕ್ಕೆ ಬೆಂಗಳೂರಿನಲ್ಲಿ ಬೃಹತ್ ರ‍್ಯಾಲಿ ನಡೆಸೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಉದ್ಯಮಿ ಮೋಹನ್ ದಾಸ್ ಪೈ ವಿರುದ್ಧವೂ ಗರಂ ಆದ ನಾರಾಯಣಗೌಡ, ಎಲ್ಲೋ ಕೂತುಕೊಂಡು ಬೇರೆ ರಾಜ್ಯಕ್ಕೆ ಹೋಗ್ತೀವಿ ಅಂತ ಹೆದರಿಸಿದ್ರೆ ನಾವು ಹೆದರುವುದಿಲ್ಲ. ಹಿಂದಿಯವರು, ಮಲೆಯಾಳಿ, ತಮಿಳು ಇದ್ರೇ ಅವರನ್ನೇ ಕರೆದು ಕೆಲಸ ಕೊಡ್ತಾ ಇದ್ದೀರಿ. ಕನ್ನಡದ ಮಕ್ಕಳಿಗೆ ಉದ್ಯೋಗ ಮೀಸಲಾತಿ ಯಾಕೆ ಕೊಡ್ತಿಲ್ಲ? ಹೀಗೆ ಪರಿಸ್ಥಿತಿ ಮುಂದುವರೆದು ಇಲ್ಲಿನ ಜನ ಭುಗಿಲೆದ್ರೇ ಏನು ಮಾಡ್ತೀರಾ? ಆಗ ಯಾರನ್ನೂ ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕನ್ನಡ ಗೊತ್ತಿಲ್ಲ ಅಂತಾ ಹೇಳ್ಕೊಂಡು ದರ್ಪ ಮೆರೆದ್ರೇ ಇನ್ನು ಸಹಿಸಲ್ಲ. ಮೋಹನ್ ದಾಸ್ ಪೈ ಕುತ್ಕೊಂಡು ಬೆದರಿಕೆ ಹಾಕೋದು. ನಾವು ಬೇರೆ ರಾಜ್ಯಕ್ಕೆ ಹೋಗ್ತೀವಿ ಅನ್ನೋದು. ಹೋಗಿ ನೀವು ಯಾರು ಬೇಡ ಅಂದ್ರು? ಯಾರು ಕಟ್ಟಿಹಾಕಿದ್ರು. ಮಾನ್ಯತಾ ಟೆಕ್ ಪಾರ್ಕ್ ನ ಒಂದು ಕಂಪನಿಯಲ್ಲಿ ಶೂನ್ಯ ಕನ್ನಡಿಗರು. 70% ಹಿಂದಿಯವರು, ಉಳಿದವರು ಮಲೆಯಾಳಿ ಭಾಷಿಕರು ಕನ್ನಡಿಗರು ಇಲ್ವೇ ಇಲ್ಲ. ನೀವು ಬಂದು ಬೆಂಗಳೂರು ಉದ್ಧಾರ ಮಾಡ್ತೀವಿ ಅಂತೀರಿ. ಹಾಗಿದ್ರೇ ನಿಮ್ಮ ಬಿಹಾರ ಕೇರಳ ತಮಿಳುನಾಡು ಪಶ್ಚಿಮ ಬಂಗಾಳವನ್ನು ಮೊದಲು ಉದ್ಧಾರ ಮಾಡಿ ಎಂದು ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ಅಪ್ರಾಪ್ತೆ ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದವ ಜೈಲಿಗೆ

Spread the loveಕೋಲಾರ: ಅಪ್ರಾಪ್ತೆಯನ್ನು ಮದುವೆಯಾಗಿ 3 ಮಕ್ಕಳ ತಂದೆಯಾಗಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ  ಜಿಲ್ಲೆ ಕೆಜಿಎಫ್ ತಾಲ್ಲೂಕು ಬೇತಮಂಗಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ