Breaking News

ಡಿಕೆ ಶಿವಕುಮಾರ್‌ದು ಹೂವಿನ ಹೃದಯ, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುತ್ತಾರೆ: ಕುಮಾರಸ್ವಾಮಿ

Spread the love

ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ಅವರದ್ದು ಬಂಡೆ ಹೃದಯ ಅಲ್ಲ.. ಹೂವಿನ ಹೃದಯ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಮಾಡ್ತಾರೆ ಅಂತ ಕೇಂದ್ರ ಸಚಿವ ಕುಮಾರಸ್ವಾಮಿ  ತಿಳಿಸಿದರು.

ಆಶಾ ಕಾರ್ಯಕರ್ತೆಯರ ಪ್ರತಿಭಟನೆ  ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಶಾ ಕಾರ್ಯಕರ್ತೆಯರು ಒಂದು ವಾರದಿಂದ ಪ್ರತಿಭಟನೆ ಮಾಡ್ತಾ ಇದ್ದಾರೆ. ಆಶಾ ಕಾರ್ಯಕರ್ತೆಯರ ಶ್ರಮದ ಬಗ್ಗೆ ನಾವೆಲ್ಲರು ನಾನು ಸೇರಿದಂತೆ ಬಾಯಿ ಮಾತಿನ ಅನುಕಂಪದಲ್ಲೇ ಮಾತಾಡ್ತೀವಿ. ಅವರ ನಿತ್ಯದ ಶ್ರಮ ಹೆಚ್ಚಿದೆ. ನಾನು ಅವರನ್ನು ದೆಹಲಿಗೆ ಕರೆಸಿ ಧರ್ಮೇಂದ್ರ ಪ್ರಧಾನ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿ ಮಾಡಿಸಿದ್ದೆ. ಅವರ ಬೇಡಿಕೆ ಈಡೇರಿಕೆ ನಮ್ಮೆಲ್ಲರ ಕರ್ತವ್ಯ. ತಿಂಗಳಿಗೆ 7-8 ಸಾವಿರ ಕೊಡ್ತೀವಿ, ಆ ಹಣದಿಂದ ಅವರು ಬದುಕಲು ಸಾಧ್ಯವಿಲ್ಲ ಅಂತ ಹೇಳಿದ್ರು.

ಕಾಂಗ್ರೆಸ್ ಸರ್ಕಾರ  ಜನರಿಗೆ ಕೊಟ್ಟ ಮಾತು ಈಡೇರಿಸುವಲ್ಲಿ ಬಹಳ ಮೇಲೆ ಇದೆ. ಈ ಸರ್ಕಾರ ಬಂದಾಗಿನಿಂದ ನುಡಿದಂತೆ ನಡೆದಿದ್ದೇವೆ ಅಂತ ಜಪ ಮಾಡ್ತಾರೆ. ಲಕ್ಷಾಂತರ ಬಾರಿ ಹೇಳಿದ್ದಾರೆ ಇದನ್ನ, ಇವರು ಪ್ರಣಾಳಿಕೆಯಲ್ಲಿ 15 ಸಾವಿರ ಘೋಷಣೆ ಮಾಡಿದ್ರು. ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಜಾಸ್ತಿ ಮಾಡಿ ಅಂತಿದ್ದಾರೆ. ಸರ್ಕಾರಕ್ಕೆ ಏನು ಸಮಸ್ಯೆ ಇಲ್ಲ. ಸರ್ಕಾರ ಅತ್ಯಂತ ಸದೃಢವಾಗಿ ಇರೋ ಸರ್ಕಾರ ಇದು. ಸಿಎಂ ಡಿಕೆ ಶಿವಕುಮಾರ್ ಗೆ  ಇರೋ ಅನುಭವದಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಯಲ್ಲಿ ಸಮರ್ಥರು ಇದ್ದಾರೆ ಅಂತ ತಿಳಿಸಿದರು.

ಭಾರತ್ ಜೋಡೋ ಸಂಘಕ್ಕೆ 1 ಸಾವಿರ ಕೋಟಿ ಘೋಷಣೆ ಮಾಡಿದ ಸಿಎಂ ಅವರಿಗೆ ಆಶಾ ಕಾರ್ಯಕರ್ತೆಯರ ಬೇಡಿಕೆ ಯಾವ ಲೆಕ್ಕ? ಚಳಿಯಲ್ಲಿ ಮಕ್ಕಳನ್ನ ಇಟ್ಟುಕೊಂಡು ಪ್ರತಿಭಟನೆ ಮಾಡ್ತಾ ಇದ್ದಾರೆ. ಸಿಎಂ ಅವರದ್ದು ಹೂವಿನಂತ ಹೃದಯ. ಬಂಡೆ ಹೃದಯ ಅಲ್ಲ, ಆ ಹೃದಯ ಇಷ್ಟು ಹೊತ್ತಿಗೆ ಕಲಕಬೇಕಿತ್ತು. ಹೃದಯ ಕಲಕಿ ಘೋಷಣೆ ಆಗಬೇಕಿತ್ತು. ಜಪಾನ್ ಗೆ ಹೋಗಿದ್ದಾರೆ. ಅದಕ್ಕೆ ಮುಂದೂಡಿಕೆ ಮಾಡಿರಬಹುದು.ಅಲ್ಲಿಂದ ಬಂದ ಕೂಡಲೇ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಮಾಡ್ತಾರೆ ಅನ್ನೋದು ನನ್ನ ಅಭಿಪ್ರಾಯ ಎಂದರು.

ಬರ ಪರಿಹಾರಕ್ಕೆ ಲಂಡನ್ ಕೋರ್ಟ್‌ಗೆ ಹೋಗಬಹುದು
ಬರ ಪರಿಹಾರ ವಿಚಾರದಲ್ಲಿ ಕೇಂದ್ರ ನಮಗೆ ಸ್ಪಂದನೆ ನೀಡುತ್ತಿಲ್ಕ ಎಂಬ ಡಿಸಿಎಂ ಪರಮೇಶ್ವರ್ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಅವರು ಸುಪ್ರೀಂ ಕೋರ್ಟ್ ಗೆ ಹೋಗ್ತಾರೋ.. ಲಂಡನ್ ಕೋರ್ಟ್ ಗೆ ಹೋಗ್ತಾರೋ ಗೊತ್ತಿಲ್ಲ. ಹಿಂದೆ ನೈಸ್ ವಿಚಾರದಲ್ಲಿ ಏನೇ ಕೇಸ್ ಆದ್ರು ಲಂಡನ್ ಕೋರ್ಟ್ ಗೆ ಹೋಗಬೇಕು ಅಂತ ನಿಯಮ ಮಾಡಿದ ಮಹಾನುಭಾವರು ಇವರು. ಕಾಂಗ್ರೆಸ್ ಸರ್ಕಾರ ಇದ್ದಾಗ ಇದನ್ನ ಮಾಡಿದ್ರು. ಬರದ ವಿಚಾರದಲ್ಲಿ ಕೇಂದ್ರ ಕ್ರಮ ತೆಗೆದುಕೊಳ್ಳದೇ ಹೋದ್ರೆ ಲಂಡನ್ ಕೋರ್ಟ್ ಗೆ ಹೋಗಬಹುದು ಎಂಬುದು ನನ್ನ ಅಭಿಪ್ರಾಯ ಅಂತ ಲೇವಡಿ ಮಾಡಿದ್ರು.

ಈ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹೇಗೆ ಇದೆ ಗೊತ್ತಿಲ್ಲ. ಪ್ರಧಾನಿಗಳು, ಅಮಿತ್ ಶಾ ಜೊತೆ ಸಿಎಂ ಅವರು ಆತ್ಮೀಯವಾಗಿ ನಡೆದುಕೊಂಡಿದ್ದಾರೆ. ಇಷ್ಟು ಆತ್ಮೀಯವಾಗಿ ಇರೋರು ಕೋರ್ಟ್ ಗೆ ಯಾಕೆ ಹೋಗಬೇಕು? ನಾನು ಎರಡು ಬಾರಿ ಸಿಎಂ ಆಗಿದ್ದಾಗ ನಾನು ಕೇಂದ್ರದ ಬಳಿ ಹೋಗರಲಿಲ್ಲ. ಕೇಂದ್ರದ ಜೊತೆ ಘರ್ಷಣೆಗೆ ಹೋಗಿಲ್ಲ. ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಹಾಕಿರಲಿಲ್ಲ ಅಂತ ಕಾಂಗ್ರೆಸ್ ಗೆ ತಿರುಗೇಟು ಕೊಟ್ರು.

ಕೊಡಗಿನಲ್ಲಿ ಅನಾಹುತ ಆದಾಗ ಮನೆ ಕಟ್ಟಿಕೊಟ್ಟೆ. ಕುಟುಂಬಕ್ಕೆ ಹಣ ಸಹಾಯ ಮಾಡಿದೆ. ಬಾಡಿಗೆಗೆ ಹಣ ಕೊಟ್ಟೆ. ನಾನು ಕೋರ್ಟ್ ಗೆ ಹೋಗಿರಲಿಲ್ಲ. ನಾನು ಕೊಟ್ಟ ಎಲ್ಲಾ ಕಾರ್ಯಕ್ರಮಕ್ಕೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿಕೊಂಡಿಲ್ಲ. ಇವರು ಯಾವ ರೀತಿ ನಡೆಸ್ತಾರೆ ಅದರ ಮೇಲೆ ನಿಂತಿದೆ ಅಂತ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.


Spread the love

About Laxminews 24x7

Check Also

ಅಪ್ರಾಪ್ತೆ ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದವ ಜೈಲಿಗೆ

Spread the loveಕೋಲಾರ: ಅಪ್ರಾಪ್ತೆಯನ್ನು ಮದುವೆಯಾಗಿ 3 ಮಕ್ಕಳ ತಂದೆಯಾಗಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ  ಜಿಲ್ಲೆ ಕೆಜಿಎಫ್ ತಾಲ್ಲೂಕು ಬೇತಮಂಗಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ