ಬೆಂಗಳೂರು: ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಹೊಸ ಸರ್ಕಾರಿ ಕಾರು ನೀಡಲಾಗಿದೆ. ಹೊಸ ಟೊಯೊಟಾ ಫಾರ್ಚೂನರ್ ಕಾರಿಗೆ ಪರಮೇಶ್ವರ್ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದು, ವಿಶೇಷ ಪೂಜೆಯ ಬಳಿಕ ಪರಮೇಶ್ವರ್ ಅವರೇ ಖುದ್ದಾಗಿ ಕಾರು ಚಾಲನೆ ಮಾಡಿದ್ದಾರೆ.
ಉಪಮುಖ್ಯಮಂತ್ರಿಯಾದ ಬಳಿಕ ಪರಮೇಶ್ವರ್ ಅವರಿಗೆ ಹಳೆಯ ಕಾರನ್ನೇ ನೀಡಲಾಗಿತ್ತು. ಈ ಹಿನ್ನೆಲೆ ಅವರಿಗೆ ಹೊಸ ಸರ್ಕಾರಿ ಕಾರು ಒದಗಿಸಲಾಗಿದೆ.
ವಿಶೇಷವೆಂದರೆ, ಈ ಹಿಂದೆ ಬಳಸುತ್ತಿದ್ದ KA 50 GA 6666 ನೋಂದಣಿ ಸಂಖ್ಯೆಯನ್ನೇ ಹೊಸ ಕಾರಿಗೂ ನೀಡಲಾಗಿದೆ. ಹೊಸ ಟೊಯೊಟಾ ಫಾರ್ಚೂನರ್ ಕಾರಿಗೆ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪರಮೇಶ್ವರ್ ಅವರು ಸ್ವತಃ ಸ್ಟೀರಿಂಗ್ ಹಿಡಿದು ಕಾರು ಚಲಾಯಿಸಿದ್ದಾರೆ.
ಹೊಸ ಕಾರಿನ ಪೂಜೆ ಹಾಗೂ ಪರಮೇಶ್ವರ್ ಅವರೇ ಕಾರು ಚಾಲನೆ ಮಾಡಿರುವ ದೃಶ್ಯಗಳು ಇದೀಗ ಗಮನ ಸೆಳೆದಿವೆ.
Laxmi News 24×7