Breaking News

ರೈಲಿನಲ್ಲಿ ʻನನ್ನ ಸುತ್ತಲೂ ಪುರುಷರೇ ಇದ್ದಾರೆʼ ಎಂದು ಕೊನೆಯ ಮೆಸೇಜ್‌ ಕಳಿಸಿದ್ದ ಅಸ್ಸಾಂ ಡ್ಯಾನ್ಸರ್‌ ಶವವಾಗಿ ಪತ್ತೆ

Spread the love

ಅಮರಾವತಿ: ರೈಲಿನಲ್ಲಿ  ‘ನನ್ನ ಸುತ್ತಲೂ ಪುರುಷರೇ ಇದ್ದಾರೆ’ ಎಂದು ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಕೊನೆಯ ಮೆಸೇಜ್‌ ಕಳಿಸಿದ್ದ ಅಸ್ಸಾಂನ  ಡ್ಯಾನ್ಸರ್‌ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಅಸ್ಸಾಂನ ಕಾಮರೂಪ್ ಜಿಲ್ಲೆಯ 20 ವರ್ಷದ ಯುವತಿ ವಿಶಾಖಪಟ್ಟಣದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಕಾರ್ಯಕ್ರಮ ಮುಗಿಸಿ, ಅ.10 ರಂದು ಗುವಾಹಟಿಯಲ್ಲಿ ಬ್ಯಾಂಕ್ ಪರೀಕ್ಷೆ ಇದ್ದಿದ್ದರಿಂದ ಮನೆಗೆ ಮರಳಲು ನಿರ್ಧರಿಸಿದ್ದಳು. ‘ದಿಬ್ರುಗಢ್ ವಿವೇಕ್ ಎಕ್ಸ್‌ಪ್ರೆಸ್’ ರೈಲಿನಲ್ಲಿ ವಾಪಸ್‌ ಆಗುವಾಗ ನಾಪತ್ತೆಯಾಗಿದ್ದಳು. ಆಕೆಯ ಶವ ಶ್ರೀಕಾಕುಳಂ ಜಿಲ್ಲೆಯಲ್ಲಿ ರೈಲು ಹಳಿ ಪಕ್ಕದಲ್ಲಿ ಪತ್ತೆಯಾಗಿದೆ.

ಮೃತ ಯುವತಿಯನ್ನು ಬುಡಕಟ್ಟು ಸಮುದಾಯಕ್ಕೆ ಸೇರಿದವಳು ಮತ್ತು ಗುವಾಹಟಿಯ ಬಿ. ಬೊರುವಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ. ಅ.5ರ ಸಂಜೆ, ಸಿಲ್ಚಾರ್ ಎಕ್ಸ್‌ಪ್ರೆಸ್‌ಗಾಗಿ ಆನ್‌ಲೈನ್‌ನಲ್ಲಿ ತತ್ಕಾಲ್ ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸಿದ್ದಳು. ಕಾಯ್ದಿರಿಸುವಿಕೆ  ಖಚಿತಗೊಂಡಿರಲಿಲ್ಲ. ಬಳಿಕ ವಿಶಾಖಪಟ್ಟಣ ರೈಲು ನಿಲ್ದಾಣಕ್ಕೆ ತೆರಳಿ ಅಸ್ಸಾಂಗೆ ಹೋಗುವ ವಿವೇಕ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22503) ಹತ್ತಿದ್ದಳು.

ಯುವತಿಯ ತಾಯಿಯ ದೂರಿನ ಪ್ರಕಾರ, ಅಕ್ಟೋಬರ್ 5 ರ ರಾತ್ರಿ 11:50 ಕ್ಕೆ ರೈಲು ಹತ್ತಿದ್ದಳು. ರೈಲು ವಿಶಾಖಪಟ್ಟಣದಿಂದ ರಾತ್ರಿ 12:10 ಕ್ಕೆ ಹೊರಟಿತ್ತು. ಅಕ್ಟೋಬರ್ 7 ರಂದು ಬೆಳಿಗ್ಗೆ 9:05 ಕ್ಕೆ ಗುವಾಹಟಿಯನ್ನು ತಲುಪಬೇಕಿತ್ತು. ಪ್ರಯಾಣದ ಸಮಯದಲ್ಲಿ, ತಮ್ಮ ಸ್ನೇಹಿತರಿಗೆ ಬೋಗಿಯಲ್ಲಿನ ವಿಪರೀತ ಜನಸಂದಣಿಯ ಬಗ್ಗೆ ತಿಳಿಸಿದ್ದಳು. ಅಲ್ಲದೇ ತಮ್ಮ ಸುತ್ತಲೂ ಹೆಚ್ಚಾಗಿ ಪುರುಷ ಪ್ರಯಾಣಿಕರೇ ಇದ್ದಿದ್ದರಿಂದ ಭಯಗೊಂಡಿದ್ದಾಗಿ ಹೇಳಿದ್ದಳು.

ಕುಟುಂಬಕ್ಕೆ ಕಳುಹಿಸಿದ ಕೊನೆಯ ಸಂದೇಶದಲ್ಲಿ, ತಮ್ಮ ಸುತ್ತಲೂ ಬಹಳಷ್ಟು ಪುರುಷರಿದ್ದ ಕಾರಣ ಭಯವಾಗುತ್ತಿದೆ ಎಂದು ಆಕೆ ತಿಳಿಸಿದ್ದಳು. ಅಕ್ಟೋಬರ್ 6 ರಂದು ಮಧ್ಯಾಹ್ನ 1:30ರ ಸುಮಾರಿಗೆ ಕುಟುಂಬದವರು ಕೊನೆಯದಾಗಿ ಯುವತಿ ಜೊತೆ ಮಾತನಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊನೆಯ ಸಂಭಾಷಣೆ ಅ.6 ರಂದು ನಸುಕಿನ ಜಾವ 2:39 ಕ್ಕೆ ನಡೆದಿದೆ. ನಂತರ ಆಕೆಯ ಫೋನ್ ಸಂಪರ್ಕಕ್ಕೆ ಸಿಗದೆ ಸ್ವಿಚ್ ಆಫ್ ಆಗಿತ್ತು.

ಯುವತಿಯ ತಾಯಿ ಗುವಾಹಟಿಯಲ್ಲಿರುವ ರೈಲ್ವೆ ಪೊಲೀಸರಿಗೆ  ದೂರು ನೀಡಿದ್ದರು. ರೈಲ್ವೆ ಸಹಾಯವಾಣಿ ಸಂಖ್ಯೆ 139 ರ ಮೂಲಕವೂ ದೂರು ದಾಖಲಿಸಿದ್ದರು. ಯುವತಿಯನ್ನು ಪತ್ತೆಹಚ್ಚಲು ಸಹಾಯ ಕೋರಿ ಸಂಬಂಧಿಕರು ರೈಲ್ವೆ ರಕ್ಷಣಾ ಪಡೆ (RPF) ಮತ್ತು ಅಸ್ಸಾಂ ಪೊಲೀಸರಿಗೂ ಮಾಹಿತಿ ನೀಡಿದ್ದರು. ರೈಲಿನ S2 ಬೋಗಿಯಲ್ಲಿ ಬ್ಯಾಗ್ ಪತ್ತೆಯಾದ ನಂತರ ರೈಲ್ವೆ ಪೊಲೀಸರು ಆ ಮಾರ್ಗದಲ್ಲಿ ಹುಡುಕಾಟ ಆರಂಭಿಸಿದ್ದರು. ಹುಡುಕಾಟದ ವೇಳೆ ಮಲಯಾಪುರಂ ಸಮೀಪದ ಅರಣ್ಯ ಪ್ರದೇಶದಲ್ಲಿ ಯುವತಿ ಮೃತದೇಹ ಪತ್ತೆಯಾಗಿದೆ.

ಯುವತಿಯ ಸಾವಿಗೆ ನಿಖರ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದರೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಸಾವು ಸಂಭವಿಸಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಮರಣೋತ್ತರ ಪರೀಕ್ಷೆ ಮತ್ತು ಮುಂದಿನ ವಿಧಿವಿಜ್ಞಾನ ತನಿಖೆಯು ಸಾವಿನ ಕಾರಣವನ್ನು ಸ್ಪಷ್ಟಪಡಿಸುವ ನಿರೀಕ್ಷೆಯಿದೆ.


Spread the love

About Laxminews 24x7

Check Also

ಬಿಜೆಪಿಯ ಬಿಎಲ್ಎಗಳ ಮೇಲೆ ಎಫ್ಐಆರ್‌; ಹೈಕೋರ್ಟ್‌ನಿಂದ ಮಧ್ಯಂತರ ತಡೆ

Spread the loveಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ  ಪ್ರಕ್ರಿಯೆಯಲ್ಲಿ, ಫಾರ್ಮ್ 7 ಸಲ್ಲಿಕೆಗೆ ಸಂಬಂಧಿಸಿದಂತೆ ಬಿಜೆಪಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ