Breaking News

ನಿಲ್ಲದ ಕಾದಾಟ.. ಬಿಗ್‌ಬಾಸ್ ಮನೆಯಲ್ಲಿ ಭುಗಿಲೆದ್ದ ಆಕ್ರೋಶ – ರೊಚ್ಚಿಗೆದ್ದ ಗಾನವಿ, ಗಗನ್

Spread the love

ಬಿಗ್‌ಬಾಸ್ ಮನೆಯಲ್ಲಿ ದಿನೇ ದಿನೇ ಆಕ್ರೋಶ ಭುಗಿಲೇಳುತ್ತಿದೆ. ಒಬ್ಬರಾದ ಒಬ್ಬರು ಕಿತ್ತಾಡಿಕೊಳ್ಳುತ್ತ ಆಕ್ಷೇಪಾರ್ಹ ಪದಗಳನ್ನು ಬಳಸುತ್ತಿದ್ದಾರೆ. ನಿನ್ನೆ ಮಂಜ, ಯಶಸ್ ನಡುವೆ ಹತ್ತಿದ್ದ ಉರಿ.. ಇದೀಗ ಗಾನವಿ ಹಾಗೂ ಗಗನ್ ಹೊತ್ತಿಕೊಂಡಿದೆ.

ಬಿಗ್‌ಬಾಸ್ ಈ ವಾರದ ಕಳಪೆ ಆಯ್ಕೆ ಮಾಡಲು ತಿಳಿಸಿದ್ದರು. ಈ ವೇಳೆ ಯಶಸ್, ಸೌಂದರ್ಯ, ಪ್ರಶಾಂತ್ ಮತ್ತು ಇನ್ನುಳಿದ ಮನೆಯವರು ಸೇರಿ ಮಂಜನಿಗೆ ಈ ಬಾರಿಯೂ ಕಳಪೆ ಪಟ್ಟ ಕೊಟ್ಟಿದ್ದಾರೆ. ಇದರ ನಡುವೆ ಒಂದ್ಕಡೆ ಸೌಂದರ್ಯ ಹಾಗೂ ಮಂಜನ ನಡುವೆ ಮಾತು ಅತಿರೇಕಕ್ಕೆ ಹೋಗಿ, ಅಸಹ್ಯ ಮಾತುಗಳನ್ನು ಬಳಸಿ, ವಾಗ್ವಾದ ನಡೆಯಿತು.

ಮನೆ ಸ್ವಲ್ಪ ತಣ್ಣಗಾಗಿದೆ ಎನ್ನುವಷ್ಟರಲ್ಲಿ ಮತ್ತೆ ತಾಂಡವ್ ರಾಮ್, ಗಾನವಿ ಹಾಗೂ ಗಗನ್ ನಡುವೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ಕಾರಣಾವಾಯಿತು. ಹೆಣ್ಣಿನ ಪರ ನಿಂತಿದ್ದ ಪ್ರಶಾಂತ್‌ಗೆ ಮಂಜ.. ಇಷ್ಟೊತ್ತು ಹೆಣ್ಣಿನ ಪರ ಮಾತಾಡುತ್ತಿದ್ದ ನೀವು ಅಲ್ಲಿ ಗಗನ್ ಗಾನವಿಗೆ ಏನಂದ್ರು ಗೊತ್ತಾ ಎಂದಿದ್ದೆ ತಡ.. ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿತು.

ಅಲ್ಲಿಂದ ರೊಚ್ಚಿಗೆದ್ದ ಗಾನವಿ ಹಾಗೂ ಗಗನ್ ಮಾತು ಮಾತಿಗೆ ಬೈದಾಡುಕೊಂಡು ಪರಿಸ್ಥಿತಿ ಕೈಮೀರಿ ಹೋದಂತೆ ಆಗಿತ್ತು. ಕೊನೆಗೆ ಮನೆಯವರೆಲ್ಲ ಸೇರಿ ಅವರಿಬ್ಬರ ಮಧ್ಯದ ಜಗಳ ನಿಲ್ಲಿಸಿದರು. ಆದರೆ ಕಳೆದ ಕೆಲ ದಿನಗಳಿಂದ ಮನೆಯಲ್ಲಿ ಜಗಳ ನಡೆಯುತ್ತಿದ್ದು, ಎಲ್ಲವೂ ಅತಿರೇಕಕ್ಕೇ ಹೋಗುತ್ತಿದೆ.

ಇದೆಲ್ಲವನ್ನೂ ಸುದೀಪ್ ಹೇಗೆ ಬಗೆಹರಿಸುತ್ತಾರೆ ಅನ್ನೋದನ್ನು ನಾಳೆಯ ಕಿಚ್ಚನ ಪಂಚಾಯ್ತಿಯಲ್ಲಿ ನೋಡಬೇಕಷ್ಟೇ…


Spread the love

About Laxminews 24x7

Check Also

ಬಿಜೆಪಿಯ ಬಿಎಲ್ಎಗಳ ಮೇಲೆ ಎಫ್ಐಆರ್‌; ಹೈಕೋರ್ಟ್‌ನಿಂದ ಮಧ್ಯಂತರ ತಡೆ

Spread the loveಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ  ಪ್ರಕ್ರಿಯೆಯಲ್ಲಿ, ಫಾರ್ಮ್ 7 ಸಲ್ಲಿಕೆಗೆ ಸಂಬಂಧಿಸಿದಂತೆ ಬಿಜೆಪಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ