ಕೋಲಾರ: ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳ ಮಾರಣಹೋಮವಾಗಿರುವ ಘಟನೆ ಕೋಲಾರ ನಗರದ ಅಮ್ಮಾನಿ ಕೆರೆಯಲ್ಲಿ ನಡೆದಿದೆ.
ವಿಷ ಪ್ರಾಶನದಿಂದ ಮೀನುಗಳ ಮಾರಣಹೋಮವಾಗಿರುವ ಶಂಕೆ ವ್ಯಕ್ತವಾಗಿದೆ. ಕೆರೆಯಲ್ಲಿದ್ದ ಕ್ಯಾಟ್ ಫಿಶ್‌ಗಳನ್ನು ಸಾಯಿಸಿ ಹೊಸ ತಳಿಯ ಮೀನುಗಳನ್ನು ಬಿಡಲು ವಿಷ ಹಾಕಿರಬಹುದು ಎಂದು ಶಂಕಿಸಲಾಗಿದೆ. ಮೀನುಗಳ ಮಾರಣ ಹೋಮದಿಂದ ಕೆರೆ ಗಬ್ಬು ನಾರುತ್ತಿದ್ದು, ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕೆ ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ಕೆರೆಯಲ್ಲಿದ್ದ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ವಿಷ ಪ್ರಾಶನ ಕಂಡು ಬಂದಲ್ಲಿ ಟೆಂಡರ್‌ದಾರರಿಗೆ ನೋಟಿಸ್ ಜಾರಿ ಮಾಡುವ ಸೂಚನೆ ನೀಡಲಾಗಿದೆ.
Laxmi News 24×7