ಬೆಂಗಳೂರು: ಸಚಿವರ ಹೆಸರಿನಲ್ಲಿ ಕಮೀಷನ್ ಕೇಳಿದ ಪ್ರಕರಣ ತನಿಖೆ ಆಗಲಿ ಎಂದು ಸಚಿವ ಯುಟಿ. ಖಾದರ್ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಅಶೋಕ್ ರೈ ವರಿಂದ 7% ಕಮೀಷನ್ ಆರೋಪ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಚಿವರ ಹೆಸರು ಹೇಳಿ ಕಮೀಷನ್ ತಗೋತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಗ್ರಾಮೀಣಾಭಿವೃದ್ದಿ ಸಚಿವರು ತಕ್ಷಣ ಪತ್ರ ಬರೆದಿದ್ದಾರೆ. ಈ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರಿಗೂ ನಾನು ತನಿಖೆ ಮಾಡೋಕೆ ಮನವಿ ಮಾಡಿದ್ದೆ. ಸಿಎಂ ಅವರಿಗೂ ಪತ್ರ ಬರೆದು ಮನವಿ ಮಾಡಿದ್ದೇನೆ. ಸತ್ಯಾಂಶ ಹೊರಗೆ ಬರಲಿ ಎಂದಿದ್ದಾರೆ.
ಯಾರು ಹಣ ಕೇಳಿದ್ರು ಗೊತ್ತಿಲ್ಲ. ತನಿಖೆ ಆಗಲಿ ಸತ್ಯಾಂಶ ಹೊರಗೆ ಬರಲಿ. ಯಾವುದೇ ಪಕ್ಷದವರಾದರೂ ಕ್ರಮ ಆಗಲಿ. ಇದರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ತನಿಖೆ ಆಗಲಿ ಎಂದು ಹೇಳಿದ್ದಾರೆ.
Laxmi News 24×7