Breaking News

ಭಾರತದ ಜಿಡಿಪಿ 7.8% ಬೆಳವಣಿಗೆ ಅನ್ನೋದೆ ಬೋಗಸ್: ಸಂತೋಷ್ ಲಾಡ್

Spread the love

ಬೆಂಗಳೂರು : ಭಾರತದ ಜಿಡಿಪಿ 7.8% ಬೆಳವಣಿಗೆ ಅನ್ನೋದೆ ಬೋಗಸ್ ಎಂದು ಸಚಿವ ಸಂತೋಷ್ ಲಾಡ್  ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ಏನನ್ನಾದರೂ ಹೇಳಿದರೆ ಮೋದಿ ವಿರುದ್ದ ಮಾತಾಡುತ್ತೀವಿ, ಸುಳ್ಳು ಹೇಳುತ್ತೀವಿ ಅಂತಾರೆ. ನಾವು ಮೋದಿ ವಿರುದ್ದವೇ ಮಾತಾಡಿರಬಹುದು. ಆದರೆ, ವೈಯಕ್ತಿಕವಾಗಿ ಅಲ್ಲ. 7.8% ಜಿಡಿಪಿ ಅನ್ನೋದೆ ಬೋಗಸ್ ಅಂತ ಕಿಡಿಕಾರಿದರು.

ಇವರು ಜಿಡಿಪಿ ಘೋಷಣೆ ಮಾಡಿದ ಕೂಡಲೇ 6 ಸಾವಿರ ಕೋಟಿ ವಿದೇಶಿ ಬಂಡವಾಳ ಹೂಡಿಕೆ ಹೊರಗೆ ಹೋಗಿದೆ. ಕಳೆದ ಒಂದು ವರ್ಷದಲ್ಲಿ 2.5 ಲಕ್ಷ ಕೋಟಿ ಫಾರಿನ್ ಇನ್ವೆಸ್ಟ್‌ಮೆಂಟ್ ಹೊರಗೆ ಹೋಗಿದೆ. ವಿದೇಶಿ ನೇರ ಹೂಡಿಕೆ ಹಣ ದೇಶಕ್ಕೆ ಬರುತ್ತಿಲ್ಲ. ಹೇಗೆ ಲೆಕ್ಕಾಚಾರ ಮಾಡಿದ್ದೀರಿ. ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತ ನಮ್ಮ ದೇಶದ ಕ್ಯಾಪಿಟಲ್ ಇನ್‌ಕಮ್ ಕಡಿಮೆ ಇದೆ. ನಮ್ಮ ಕರೆನ್ಸಿ ವೀಕ್ ಇದೆ ಎಂದು ಅರೋಪ ಮಾಡಿದರು.

ಏಷ್ಯಾದಲ್ಲಿ ಭಾರತದ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿದೆ. ಸ್ಟಾಕ್ ಎಕ್ಸ್ಚೇಂಜ್ ಮೈನಸ್‌ 3.5 ನಲ್ಲಿ ಇದೆ‌. 7.8% ಜಿಡಿಪಿ ಇದ್ದರೆ ಸ್ಟಾಕ್ ಎಕ್ಸ್ಚೇಂಜ್ ಜಾಸ್ತಿ ಆಗಬೇಕು ಅಲ್ಲವಾ? ಜಿಡಿಪಿ ಹೆಚ್ಚಳ ಆಗಿರುವುದು ಸುಳ್ಳು ಎಂದು ಸಂತೋಷ್ ಲಾಡ್ ಆರೋಪಿಸಿದರು.

ಮೋದಿ ಕರೆಗೆ ಲಾಡ್ ಕಿಡಿ
ಚಿನ್ನ ಖರೀದಿ ಮಾಡಬೇಡಿ ಎಂಬ ಮೋದಿ ಕರೆಗೆ ಪ್ರತಿಕ್ರಿಯಿಸಿ, ಎಣ್ಣೆ ಕಡಿಮೆ ತಿನ್ನಿ ಬರೀ ಇಂತದ್ದೇ ಹೇಳ್ತಾರೆ. ಸಕ್ಕರೆ ಬಳಕೆ ಕಡಿಮೆ ಮಾಡಿ ಅಂತಾರೆ. ನಾವು ಮೊದಲು ಸಕ್ಕರೆ ಆಮದು ಮಾಡಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಎಂದರು.

ಎಥೆನಾಲ್ ಉತ್ಪಾದನೆ ಜಾಸ್ತಿಯಾದರೆ ಕಷ್ಟ. ಇಲ್ಲಿ ಕೋಳಿಗಳಿಗೆ ಹಾಕೋಕೆ ಮೆಕ್ಕೆ ಜೋಳ ಸಿಗುತ್ತಿಲ್ಲ. ಇದರ ಬಗ್ಗೆ ಚರ್ಚೆ ಮಾಡೊಲ್ಲ. ಹಿಂದೂ ಮುಸ್ಲಿಂ ಬಿಟ್ಟು ಅವರು ಏನು ಮಾತನಾಡಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.


Spread the love

About Laxminews 24x7

Check Also

ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ – ಶಾಸಕ ಸುರೇಶ್‌ಗೌಡ ಪುತ್ರಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Spread the loveಮಂಡ್ಯ: ಕರ್ತವ್ಯನಿರತ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಸಕ ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ