Breaking News

100 ವರ್ಷಗಳಿಂದ ಬೆಳೆಯುತ್ತಿರೋ RSSಗೆ ಅಡ್ಡಿ ಬರೋದು ಮೂರ್ಖತನ: ಮುತಾಲಿಕ್

Spread the love

ಚಿಕ್ಕಮಗಳೂರು: 100 ವರ್ಷಗಳಿಂದ ಬೆಳೆಯುತ್ತಿರುವ RSSಗೆ ಅಡ್ಡಿ ಬರೋದು ಮೂರ್ಖತನ ಎಂದು ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌  ವಾಗ್ದಾಳಿ ನಡೆಸಿದ್ದಾರೆ.

ಶೃಂಗೇರಿಯಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ರಾಜ್ಯದಲ್ಲಿ RSS ಪಥ ಸಂಚಲನಕ್ಕೆ ಅನುಮತಿ ನಿರಾಕರಣೆ ವಿಚಾರವಾಗಿ, ರಾಜ್ಯ ಕಾಂಗ್ರೆಸ್  ಸರ್ಕಾರ ಹುಟ್ಟಿದಾಗಿಂದ ಹಿಂದೂಗಳ ಪರ ನಿಲ್ಲಲೇ ಇಲ್ಲ. ಸ್ವಾರ್ಥ, ಮುಸ್ಲಿಂ ಓಲೈಕೆ ಹಾಗೂ ಅಧಿಕಾರದಾಹಿಗಳಾಗಿದ್ದಾರೆ. ಇಂದು ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಇಡೀ ದೇಶದಂತೆ ರಾಜ್ಯದಲ್ಲಿ ಕಸದ ತೊಟ್ಟಿಯಲ್ಲಿ ಹೋಗ್ತೀರಾ ಎಂದು ಗುಡುಗಿದ್ದಾರೆ

ರಾಜ್ಯದಲ್ಲಿ ಗೃಹಮಂತ್ರಿ ಸೇರಿ ಕೆಲವರು ನಾಸ್ತಿಕವಾದಿ, ಹಿಂದೂ ವಿರೋಧಿಗಳಿದ್ದಾರೆ. 100 ವರ್ಷಗಳಿಂದ ಬೆಳೆಯುತ್ತಿರೋ ಆರ್.ಎಸ್.ಎಸ್‌ಗೆ ಅಡ್ಡಿ ಬರೋದು ಮೂರ್ಖತನ. ಇದು ಕಾಂಗ್ರೆಸ್‌ಗೆ ಶೋಭೆ ತರಲ್ಲ. ಮುಂದೆ ಜನ ತೀರ್ಮಾನ ಮಾಡ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

100 ವರ್ಷ ಬೆಳೆದಿದೆ ಎಂದರೆ ಅದರ ಶಿಸ್ತು, ಶ್ರದ್ಧೆ, ಬದ್ಧತೆ ಹಾಗೂ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಅಧಿಕಾರದ ಸೊಕ್ಕಿನಿಂದ ನೀವು ಮಾಡ್ತಿರೋದು ಸರಿಯಲ್ಲ. ಇದಕ್ಕೆ ಕರ್ನಾಟಕದ ಜನ ಉತ್ತರ ಕೊಡಲಿದ್ದಾರೆ ಎಂದು ಎಚ್ಚರಿಕೆ ನೀಡದ್ದಾರೆ.


Spread the love

About Laxminews 24x7

Check Also

ಉಡುಪಿ ಶ್ರೀಕೃಷ್ಣ ಮಠಕ್ಕೆ ನಟಿ ಮಾಲಾಶ್ರೀ ಭೇಟಿ

Spread the loveಉಡುಪಿ: ಕನ್ನಡ ಚಿತ್ರರಂಗದ ಖ್ಯಾತ ನಟಿ ಮಾಲಾಶ್ರೀ ಅವರಿಂದು (ಅ.24) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ